ಬಿಹಾರದ ಸಚಿವ ತೇಜ ಪ್ರತಾಪ ಯಾದವ ಇವರು ಕಾರ್ಯಕರ್ತನ ಕುತ್ತಿಗೆ ಹಿಡಿದು ನೂಕಿದರು !

  • ಕಾರ್ಯಕರ್ತನು ಮಧ್ಯಪಾನ ಮಾಡಿ ತಳ್ಳಾಟ ನಡೆಸಿದ್ದಾನೆಂದು ಯಾದವ ಇವರ ದಾವೆ ?

  • ಬಿಹಾರದಲ್ಲಿ ಜಂಗಲರಾಜ ಏಕೆ ಬಂದಿದೆ ? ಇದು ಈ ಘಟನೆಯಿಂದ ಗಮನಕ್ಕೆ ಬರುತ್ತದೆ !

ಪಾಟಲಿಪುತ್ರ (ಬಿಹಾರ) – ಬಿಹಾರ ಸರಕಾರದಲ್ಲಿನ ಅರಣ್ಯ ಮತ್ತು ಪರಿಸರ ಸಚಿವ ತೇಜ ಪ್ರತಾಪಿ ಯಾದವ ಇವರ ಒಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರವಾಗಿದೆ. ಇದರಲ್ಲಿ ತೇಜ ಪ್ರತಾಪ ಯಾದವ ಇವರು ಒಬ್ಬ ಯುವಕನ ಕುತ್ತುಗೆ ಹಿಡಿದು ಅವನನ್ನು ತಳ್ಳುತ್ತಿರುವುದು ಕಾಣುತ್ತಿದೆ. ಈ ಯುವಕ ಯಾದವ ಇವರ ರಾಷ್ಟ್ರೀಯ ಜನತಾದಳ ಪಕ್ಷದ ಕಾರ್ಯಕರ್ತನು ಎಂದು ಮಾಹಿತಿ ಬೆಳಕಿಗೆ ಬಂದಿದೆ. ತೇಜ ಪ್ರತಾಪ ಯಾದವ ಇವರು ಮೇವು ಹಗರಣದಲ್ಲಿ ಶಿಕ್ಷೆ ಆಗಿರುವ ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ ಯಾದವ ಇವರ ಕಿರಿಯ ಪುತ್ರರಾಗಿದ್ದಾರೆ. ಈ ಪ್ರಕರಣದಲ್ಲಿ ತೇಜ ಪ್ರತಾಪ ಯಾದವ ಇವರು, ಸುಮಂತ ಯಾದವ ಎಂದು ಈ ಕಾರ್ಯಕರ್ತನ ಹೆಸರಾಗಿದ್ದು ಅವನು ಮದ್ಯದ ನಶೆಯಲ್ಲಿದ್ದನು ಮತ್ತು ಅವನು ನನಗೆ ತಳ್ಳುತ್ತಿದ್ದನು. ಅವನನ್ನು ತಡೆಯುವ ಪ್ರಯತ್ನ ಮಾಡಿದ ನಂತರ ಕೂಡ ಅವನು ತಳ್ಳುತ್ತಲೇ ಇದ್ದನು. ನಂತರ ಸರಕಾರ ಅವನನ್ನು ಅಲ್ಲಿಂದ ಕಳುಹಿಸಿದರು. ಈ ಘಟನೆಯ ಸಂಪೂರ್ಣ ಚಿತ್ರೀಕರಣ ನನ್ನನ್ನು ಕಳಂಕಿತಗೊಳಿಸುವುದಕ್ಕಾಗಿ, ಕೆಲವು ಭಾಗ ಪ್ರಸಾರ ಮಾಡಿದ್ದಾರೆ. ಹೀಗೆ ಮಾಡಿದವರ ವಿರುದ್ಧ ದೂರು ನೀಡಿದ ನಂತರ ಪೊಲೀಸರು ದೂರು ದಾಖಲಿಸಿದ್ದಾರೆ. ಹಾಗೂ ಸುಮಂತ ಯಾದವ ಇವನ ಮೇಲೆ ಕ್ರಮ ಕೈಗೊಳ್ಳಲು ಕೂಡ ನಾನು ಅಗ್ರಹಿಸಿದ್ದೇನೆ ಎಂದು ಹೇಳಿದರು.