ಲಂಡನ್ – ಮಹಿಳೆಯನ್ನು ಸೊಂಟದವರೆಗೆ ಹೂಳಿ ಕಲ್ಲಿನಿಂದ ಚಚ್ಚಿ ಕೊಲ್ಲಿರಿ ಎಂದು ಬ್ರಿಟನ್ ನ ಬರ್ಮಿಂಗ್ ಹ್ಯಾಮ್ ನ ಮಸೀದಿಯೊಂದರ ಇಮಾಮ್ ಶೇಖ್ ಜಕಾವುಲ್ಲಾ ಸಲೀಂ ಇವರು ಪ್ರಚೋದನಕಾರಿ ಹೇಳಿಕೆ ನೀಡಿದ್ದಾರೆ. ಈ ಕುರಿತು ಸಾರ್ವಜನಿಕ ಭಾಷಣ ಮಾಡುತ್ತಿರುವ ಒಂದು ವಿಡಿಯೋ ಪ್ರಸಾರವಾಗುತ್ತಿದೆ. ಈ ವೀಡಿಯೊದಲ್ಲಿ, ಶೇಖ್ ಸಲೀಮ್ ಷರಿಯಾ ಕಾನೂನಿನ ಸಂದರ್ಭವನ್ನು ನೀಡುತ್ತಾ, ವಿವಾಹಿತ ವ್ಯಭಿಚಾರಿಣಿಯನ್ನು ಕಲ್ಲಿನಿಂದ ಚಚ್ಚಿ ಕೊಲ್ಲಬೇಕು ಎಂದು ಶಿಕ್ಷೆಯಿದೆಯೆಂದು ಎಂದು ಹೇಳಿದ್ದಾರೆ. ಹಾಗೆಯೇ. ಇಸ್ಲಾಮಿಕ್ ಕಾನೂನಿನಲ್ಲಿ ಅನೈತಿಕ ಸಂಬಂಧ ಹೊಂದಿರುವ ಅವಿವಾಹಿತರಿಗೆ 100 ಛಡಿ ಏಟಿನ ಶಿಕ್ಷೆಯನ್ನು ಹೇಳಿದ್ದಾರೆ.
UK: Birmingham’s Green Lane Mosque on how to stone a woman to death.
“You must first bury her up to her waist to preserve her modesty”.
The British government has just given this mosque a £2.2 mn grant for “youth services”. pic.twitter.com/h6KRmfHNHF
— Megh Updates 🚨™ (@MeghUpdates) August 22, 2023
ಅಲ್ಲಾಹನ ಆಜ್ಞೆಯ ವಿಷಯದಲ್ಲಿ ನಾವು ಯಾವುದೇ ರೀತಿಯ ದಯೆ ಅಥವಾ ಸಹಾನುಭೂತಿಯನ್ನು ತೋರಿಸಬಾರದು ಎಂದು ಇಮಾಮ್ ಹೇಳಿದ್ದಾರೆ. ಜುಲೈ 2023 ರಲ್ಲಿ, ಬ್ರಿಟಿಷ್ ಸರಕಾರವು ಇತರ ಧಾರ್ಮಿಕ ಸಮುದಾಯಗಳನ್ನು ದ್ವೇಷದ ಅಪರಾಧಗಳು ಮತ್ತು ಭಯೋತ್ಪಾದಕ ದಾಳಿಗಳಿಂದ ತಡೆಯುವ ಜವಾಬ್ದಾರಿಯನ್ನು ಮಸೀದಿಗೆ ವಹಿಸಿತ್ತು ಮತ್ತು ಅದಕ್ಕಾಗಿ 23 ಕೋಟಿ 24 ಲಕ್ಷ ರೂಪಾಯಿಗಳ ಸಹಾಯಧನವನ್ನು ನೀಡಿತ್ತು; ಆದರೆ ಈ ಹಣವನ್ನು ದುರುಪಯೋಗಪಡಿಸಿಕೊಂಡು ಶೇಖ್ ಸಲೀಂ ಮಹಿಳೆಯರನ್ನು ಕಲ್ಲೆಸೆದು ಕೊಲ್ಲುವಂತೆ ಪ್ರೇರೇಪಿಸುತ್ತಿರುವುದು ವಿಡಿಯೋದಲ್ಲಿ ಕಂಡು ಬಂದಿದೆ.
ಸಂಪಾದಕರ ನಿಲುವು* ಈ ವಿಷಯದಲ್ಲಿ ಮಾನವತಾವಾದಿಗಳಿಗೆ ಏನು ಹೇಳುವುದಿದೆ ? |