ಹಿಂಸಾಚಾರದ ಹಿಂದೆ ವಿದೇಶಿ ಹಸ್ತಕ್ಷೇಪದ ಸಂಶಯವಿದೆಯೆಂದು ಹೇಳಲಾಗಿತ್ತು !
ನವ ದೆಹಲಿ – ‘ಮಣಿಪುರದ ಹಿಂಸಾಚಾರ ಧರ್ಮದ ಆಧಾರದ ಮೇಲೆ ನಡೆದಿಲ್ಲ’, ಎಂದು ಅಮೇರಿಕಾದ ಸಂಘಟನೆಯೊಂದು ತೀರ್ಮಾನಿಸಿದೆ. ‘ಸ್ಥಳೀಯ ಪಂಗಡಗಳಲ್ಲಿರುವ ಪರಸ್ಪರರ ನಡುವಿನ ಅವಿಶ್ವಾಸ, ಆರ್ಥಿಕ ಪರಿಣಾಮಗಳ ಭಯ, ಮಾದಕ ವಸ್ತು, ಪ್ರತ್ಯೇಕತಾವಾದ ಮತ್ತು ಇತಿಹಾಸದಲ್ಲಿ ನಡೆದ ಘಟನೆಗಳು ಹಿಂಸಾಚಾರಕ್ಕೆ ಸಂಬಂಧವಿದೆ’, ಎಂದು ‘ಫೌಂಡೇಶನ್ ಫಾರ್ ಇಂಡಿಯಾ ಅಂಡ್ ಇಂಡಿಯನ್ ಡಯಾಸ್ಪೊರಾ ಸ್ಟಡೀಸ್’ನ ವರದಿಯಲ್ಲಿ ಹೇಳಿದೆ. ‘ಈ ಹಿಂಸಾಚಾರದ ಹಿಂದೆ ‘ವಿದೇಶಿ ಹಸ್ತಕ್ಷೇಪವನ್ನು ತಳ್ಳಿಹಾಕುವಂತಿಲ್ಲ’ ಎಂದೂ ವರದಿ ಹೇಳಿದೆ.
ವರದಿಯ ಮುಖ್ಯಾಂಶಗಳು –
1. ಕೇಂದ್ರ ಸರಕಾರ ಮತ್ತು ಮಣಿಪುರ ಸರಕಾರ ರಾಜ್ಯದಲ್ಲಿ ಶಾಂತಿ ನೆಲೆಸಲು ಮತ್ತು ಹಿಂಸಾಚಾರದ ಸಂತ್ರಸ್ತರಿಗೆ ಸಹಾಯ ಮಾಡಲು ಎಲ್ಲಾ ಕಾರ್ಯವಿಧಾನಗಳನ್ನು ಜಾರಿಗೆ ತರುತ್ತಿವೆ.
2. ಕೆಲವು ಪ್ರತ್ಯೇಕತಾವಾದಿ ಮತ್ತು ಕಟ್ಟರವಾದಿ ಸಂಘಟನೆಗಳಿಗೆ ಈ ಹಿಂಸಾಚಾರದಿಂದಾಗಿ ಸಕ್ರಿಯವಾಗಲು ಅವಕಾಶ ಸಿಕ್ಕಿತು. ಅಫೀಮು ಮತ್ತು ಹೆರಾಯಿನ್ ಸಾಗಿಸುವ ಮಾಫಿಯಾಗಳು ಹಿಂಸಾಚಾರಕ್ಕೆ ಹಣಕಾಸು ನೆರವು ಒದಗಿಸಿದೆ.
3. ಕಳೆದ ವಾರದಲ್ಲಿ ಹಿಂಸಾಚಾರ ಇಳಿಮುಖವಾಗಿದೆ; ಆದರೆ ಜನರಲ್ಲಿ ಇನ್ನೂ ಅಪನಂಬಿಕೆಯ ವಾತಾವರಣವಿದೆ. ಸ್ಥಳಾಂತರಗೊಂಡ ಜನರು ಇನ್ನೂ ತಮ್ಮ ಸ್ವಂತ ಸ್ಥಳಗಳಿಗೆ ಮರಳಲು ಸಾಧ್ಯವಾಗದಂತಹ ಪರಿಸ್ಥಿತಿಯಿದೆ. ಶಾಂತಿಯನ್ನು ನಿರ್ಮಿಸಲು ನಂಬಿಕೆಯನ್ನು ನಿರ್ಮಾಣ ಮಾಡಲು ಹಾಗೆಯೇ ಪುನರ್ವಸತಿ ಕಾರ್ಯ ಕೈಕೊಳ್ಳುವ ಆವಶ್ಯಕತೆಯಿದೆ.
ಸಂಪಾದಕರ ನಿಲುವು* ಮಣಿಪುರದಲ್ಲಿ ಹಿಂದೂಗಳಾದ ಮೈತೇಯಿ ಸಮುದಾಯವನ್ನು ಕ್ರೈಸ್ತ ಕುಕಿ ಸಮುದಾಯವು ನ್ಯಾಯಾಲಯದ ಆದೇಶದ ಹೊರತಾಗಿಯೂ ‘ಪರಿಶಿಷ್ಟ ಜಾತಿಪಂಗಡ’ ಎಂದು ಸ್ಥಾನಮಾನ ನೀಡುವುದನ್ನು ವಿರೋಧಿಸಿದ್ದರಿಂದ ಈ ಹಿಂಸಾಚಾರ ನಡೆದಿದೆಯೆಂದು ಜಗಜ್ಜಾಹೀರಾಗಿದೆ; ಆದರೆ ಕ್ರೈಸ್ತ ಅಮೇರಿಕೆಯಲ್ಲಿರುವ ಸಂಘಟನೆಗಳು ಉದ್ದೇಶಪೂರ್ವಕವಾಗಿ ಇದನ್ನು ನಿರಾಕರಿಸಲು ಪ್ರಯತ್ನಿಸುತ್ತಿವೆ ಎಂಬುದನ್ನು ಗಮನಿಸಿ ! * ವಿದೇಶಿ ಹಸ್ತಕ್ಷೇಪವಿರುವ ಸಾಧ್ಯತೆಯನ್ನು ಹೇಳಲು ಧರ್ಮವೇ ಆಧಾರವಾಗಿದೆ ಎಂದು ಸಹ ಗಮನಿಸಬೇಕಾಗಿದೆ. ಮೈತೇಯಿ ಹಿಂದೂ ಸಮುದಾಯಕ್ಕೆ ವಿದೇಶದಿಂದ ಸಹಾಯ ಸಿಗುತ್ತಿಲ್ಲ. ಆದರೆ ಮ್ಯಾನ್ಮಾರ್ನಿಂದ ಕ್ರೈಸ್ತ ಕುಕಿಗಳಿಗೆ ಶಸ್ತ್ರಾಸ್ತ್ರಗಳನ್ನು ಸರಬರಾಜು ಮಾಡಲಾಗುತ್ತಿದೆ ಎಂಬ ಅಂಶವೂ ಬಹಿರಂಗವಾಗಿದೆ. |