ಪಾಕಿಸ್ತಾನಕ್ಕೆ ಚಂದ್ರನ ಮೇಲೆ ಯಾನ ಕಳುಹಿಸಲು ಇನ್ನೂ ೨-೩ ದಶಕಗಳು ಬೇಕಾಗಬಹುದು !

ಪಾಕಿಸ್ತಾನಿ ನಟಿಯಿಂದ ಪಾಕಿಸ್ತಾನಕ್ಕೆ ಕಪಾಳಮೋಕ್ಷ !

ಇಸ್ಲಾಮಾಬಾದ (ಪಾಕಿಸ್ತಾನ) – ಭಾರತದ ‘ಚಂದ್ರಯಾನ-೩’ರ ಯಶಸ್ಸಿನ ನಂತರ ವಿಶ್ವದಾದ್ಯಂತ ಇಸ್ರೋದ ವಿಜ್ಞಾನಿಗಳನ್ನು ಹೊಗಳಲಾಗುತ್ತಿದೆ. ಇತಹದರಲ್ಲೇ ಪಾಕಿಸ್ತಾನಿ ನಟಿ ಸೆಹರ ಶಿನವಾರಿಯವರು ಭಾರತವನ್ನು ಹೊಗಳಿ ಪಾಕಿಸ್ತಾನದ ದುರ್ಗತಿಯ ಬಗ್ಗೆ ಬೇಸರ ವ್ಯಕ್ತಪಡಿಸುವ ಟ್ವೀಟ್ ಮಾಡಿದ್ದಾರೆ.

ಶಿನವಾರಿಯವರು, ನನಗೆ ಭಾರತದೊಂದಿಗೆ ಶತ್ರುತ್ವವಿದೆ, ಆದರೂ ಭಾರತವು ‘ಚಂದ್ರಯಾನ-3’ರ ಮೂಲಕ ಬಾಹ್ಯಾಕಾಶ ಸಂಶೋಧನೆಯಲ್ಲಿ ಇತಿಹಾಸ ನಿರ್ಮಿಸಿದ್ದಕ್ಕಾಗಿ ನಾನು ‘ಇಸ್ರೊ’ವನ್ನು ಅಭಿನಂದಿಸುತ್ತೇನೆ. ಪ್ರತಿಯೊಂದು ವಿಷಯದಲ್ಲಿ ಪಾಕಿಸ್ತಾನ ಮತ್ತು ಭಾರತದ ನಡುವಿನ ಅಂತರವು ಎಷ್ಟು ಹೆಚ್ಚಾಗಿದೆ ಅಂದರೆ ಈಗ ಪಾಕಿಸ್ತಾನಕ್ಕೆ ಚಂದ್ರನ ಮೇಲೆ ತಲುಪಲು ಇನ್ನೂ ೨-೩ ದಶಕಗಳು ಬೇಕಾಗಬಹುದು. ದುರದೃಷ್ಟಕರದ ನಮ್ಮ ಇಂದಿನ ದುಃಸ್ಥಿತಿಗೆ ಬೇರೆ ಯಾರೂ ಅಲ್ಲ, ನಾವೇ ಕಾರಣರಾಗಿದ್ದೇವೆ ಎಂದು ಟ್ವೀಟ್ ಮಾಡಿದ್ದಾರೆ.

ಶಿನವಾರಿಯವರು ಈ ಟ್ವೀಟ್ ನ ಮೊದಲು ಉರ್ದು ಭಾಷೆಯಲ್ಲಿ ಇನ್ನೊಂದು ಟ್ವೀಟ್ ಮಾಡಿದ್ದಾರೆ. ಅದರಲ್ಲಿ ಅವರು ಇಂದು ಭಾರತ ಎಲ್ಲಿ ತಲುಪಿದೆ, ಆದರೆ ನಮ್ಮ ದೇಶ (ಪಾಕಿಸ್ತಾನ)ವು ಮೌಲ್ವಿ ತಮೀಜುದ್ದೀನನ ವಿಧಾನಸಭೆಯನ್ನು ಅನಧೀಕೃತವಾಗಿ ವಿಸರ್ಜಿಸಿದ್ದರಿಂದ ಕಾನೂನು ಹಾಗೂ ಸಂವಿಧಾನದ ವರ್ಚಸ್ಸಿಗಾಗಿ ಹೆಣಗಾಡುತ್ತಿದೆ. ಇದನ್ನು ನೋಡಿ ನಿಜವಾಗಿಯೂ ನಾಚಿಕೆಯಿಂದ ನಮ್ಮ ತಲೆ ತಗ್ಗಿಸಿದಂತಾಗಿದೆ. ನಮ್ಮ ನಡುವೆ ಎಷ್ಟು ಅಂತರ ನಿರ್ಮಾಣವಾಗಿದೆ ಅಂದರೆ ಅದನ್ನು ಕಡಿಮೆ ಮಾಡುವುದು ಪಾಕಿಸ್ತಾನದ ಕೈಯಲಿಲ್ಲ ಎಂಬುದನ್ನು ಭಾರತವು ಇಂದು ಸಾಬೀತುಪಡಿಸಿದೆ, ಎಂದು ಹೇಳಿದ್ದಾರೆ.