ಚಂದ್ರಯಾನದ ಜೊತೆಗೆ ಹೋಗಿರುವ ಎಲ್ಲಾ ಯಾತ್ರಿಕರಿಗೆ ಸಲಾಂ !'(ಅಂತೆ)- ಕಾಂಗ್ರೆಸ್ ಸಚಿವ ಅಶೋಕ ಚಂದನ

ರಾಜಸ್ಥಾನದಲ್ಲಿನ ಕಾಂಗ್ರೆಸ್ ಸರಕಾರದ ಕ್ರೀಡಾ ಸಚಿವರ ‘ಅ’ಜ್ಞಾನ !

ಜೈಪುರ (ರಾಜಸ್ಥಾನ) – ‘ಚಂದ್ರಯಾನ-3’ ಚಂದ್ರನ ಮೇಲೆ ಯಶಸ್ವಿಯಾಗಿ ಇಳಿದಿರುವುದರಿಂದ ದೇಶ-ವಿದೇಶಗಳಿಂದ ಭಾರತಕ್ಕೆ ಅಭಿನಂದನೆಯ ಸುರಿಮಳೆ ಆಗುತ್ತಿದೆ. ಈ ಸಮಯದಲ್ಲಿ ರಾಜಸ್ಥಾನದಲ್ಲಿನ ಕಾಂಗ್ರೆಸ್ ಸರಕಾರದ ಕ್ರೀಡಾ ಸಚಿವ ಅಶೋಕ ಚಂದನ ಇವರು ಕೂಡ ಅಭಿನಂದನೆ ಸಲ್ಲಿಸಿದರು. ಪತ್ರಕರ್ತರ ಜೊತೆ ಮಾತನಾಡುವಾಗ ಅವರು, ”ನಾವು ಯಶಸ್ವಿ ಆಗಿದ್ದೇವೆ ಮತ್ತು ಸುರಕ್ಷಿತವಾಗಿ ಇಳಿದಿದ್ದೇವೆ. ಚಂದ್ರಯಾನದ ಜೊತೆಗೆ ಚಂದ್ರನ ಮೇಲೆ ಹೋಗಿರುವ ಯಾತ್ರಿಕರಿಗೆ ನನ್ನ ಸಲಾಂ. ನಮ್ಮ ದೇಶದ ವಿಜ್ಞಾನ ಮತ್ತು ಬಾಹ್ಯಾಕಾಶ ಸಂಶೋಧನೆಯಲ್ಲಿ ಇನ್ನೊಂದು ಅಡಿ ಮುಂದೆ ಇಟ್ಟಿದ್ದೇವೆ. ಅದಕ್ಕಾಗಿ ನಾನು ಎಲ್ಲಾ ಭಾರತಿಯರಿಗೆ ಅಭಿನಂದನೆ ಸಲ್ಲಿಸುತ್ತೇನೆ.” ಎಂದು ಹೇಳಿದರು. ಚಂದ್ರಯಾನದ ಜೊತೆಗೆ ಯಾವುದೇ ವ್ಯಕ್ತಿ ಹೋಗದಿದ್ದರೂ ಈ ರೀತಿಯ ಹೇಳಿಕೆ ನೀಡಿ ಅಶೋಕ ಚಂದನ ಇವರು ತಮ್ಮ ಅಜ್ಞಾನ ಹೊರಹಾಕಿದ್ದಾರೆ. ಇದರಿಂದ ಸಾಮಾಜಿಕ ಜಾಲತಾಣದಲ್ಲಿ ಟೀಕೆಸಲಾಗುತ್ತಿದೆ.

ಮಮತಾ ಬ್ಯಾನರ್ಜಿ ಇವರು, ‘ರಾಕೇಶ ಶರ್ಮಾ’ ಬದಲು ‘ರಾಕೇಶ ರೋಷನ್’ ಎಂದು ಹೇಳಿದರು !

ಮಮತಾ ಬ್ಯಾನರ್ಜಿ

ಬಂಗಾಲದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಇವರು ಚಂದ್ರಯಾನವನ್ನು ಶ್ಲಾಘಿಸುವಾಗ ೧೯೮೩ ರಲ್ಲಿ ರಷ್ಯಾದ ಯಾನದಲ್ಲಿ ಬಾಹ್ಯಾಕಾಶಕ್ಕೆ ಹೋಗಿರುವ ಭಾರತೀಯ ವಾಯುದಳದ ಅಧಿಕಾರಿ ರಾಕೇಶ ಶರ್ಮ ಇವರನ್ನು ಉಲ್ಲೇಖಿಸುವಾಗ ಅವರು ನಟ ರಾಕೇಶ ರೋಷನ ಇವರ ಉಲ್ಲೇಖ ಮಾಡಿರುವುದರಿಂದ ಅವರನ್ನು ಕೂಡ ಸಾಮಾಜಿಕ ಜಾಲತಾಣದಲ್ಲಿ ಟೀಕಿಸಲಾಯಿತು.

ಸಂಪಾದಕರ ನಿಲುವು

* ‘ಜಗತ್ತಿನಲ್ಲಿರುವ ಜ್ಞಾನ ನಮಗೆ ಇದೆ’, ಎಂದು ಮೆರೆಯುವ ಭಾರತೀಯ ರಾಜಕಾರಣಿಗಳ ಇದು ಒಂದು ಪ್ರಾತಿನಿಧಿಕ ಉದಾಹರಣೆಯಾಗಿದೆ, ಎಂದು ಯಾರಾದರೂ ಹೇಳಿದರೆ ತಪ್ಪೇನು ಇಲ್ಲ !