|
ಅಜ್ಮೀರ್ (ರಾಜಸ್ಥಾನ) – ಇಲ್ಲಿಯ ಸೋಫಿಯಾ ಶಾಲೆಯ ಎಲ್ಲಾ ವಿದ್ಯಾರ್ಥಿಗಳಿಂದ ‘ಕ್ರೀಡಾ ಪ್ರಕಾರ’ದ ಹೆಸರಿನಲ್ಲಿ ವೈದ್ಯಕೀಯ ಪ್ರಮಾಣಪತ್ರಗಳನ್ನು ಕೇಳಲಾಗಿದೆ. ಇದರಲ್ಲಿ ಅವರು ತಮ್ಮ ಸೊಂಟ ಮತ್ತು ಪುಷ್ಠದ ಆಕಾರವನ್ನು ಹೇಳಲು ಸೂಚಿಸಿದೆ. ಈ ರೀತಿ ಮಾಹಿತಿ ಕೇಳಿದ್ದಾರೆ ಎಂದು ವಿದ್ಯಾರ್ಥಿನಿಯರ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದು 1980 ಮತ್ತು 1990ರ ದಶಕದಲ್ಲಿ ಇಲ್ಲಿ ಲೈಂಗಿಕ ದೌರ್ಜನ್ಯ ಪ್ರಕರಣಗಳು ಬೆಳಕಿಗೆ ಬಂದಿತ್ತು ಶಾಲೆ ಆಗಿದೆ. ಇದರಲ್ಲಿ ಅಜ್ಮೀರ್ ದರ್ಗಾದ ಚಿಶ್ತಿ ಕುಟುಂಬದವರು ಹಾಗೂ ಹಲವು ಕಾಂಗ್ರೆಸ್ಸಿಗರ ಕೈವಾಡ ಇರುವುದು ಬಹಿರಂಗವಾಗಿತ್ತು. ಇದರ ಬಗ್ಗೆ ಇತ್ತೀಚೆಗಷ್ಟೇ ‘ಅಜ್ಮೀರ್ 92’ ಚಲನಚಿತ್ರ ಕೂಡ ಪ್ರಸಾರವಾಗಿದೆ.
‘कमर और नितंब का आकार बताओ’: अजमेर के सोफिया स्कूल का फरमान, इसी स्कूल की छात्राएँ थी देश के सबसे बड़े सेक्स स्कैंडल की पीड़िताएँ#Ajmer #SophiaSchoolhttps://t.co/874p2GBYit
— ऑपइंडिया (@OpIndia_in) August 23, 2023
ಅಜ್ಮೀರ್ ನ ‘ಸೋಫಿಯಾ ಹಿರಿಯ ಮಾಧ್ಯಮಿಕ ಶಾಲೆ’ಯಲ್ಲಿ 2 ಸಾವಿರದ 500 ಕ್ಕೂ ಅಧಿಕ ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಅವರೆಲ್ಲರಿಂದ ‘ಆರೋಗ್ಯ ಮತ್ತು ಕೆಲಸದ ಕಾರ್ಡ್’ ಎಂಬ ಹೆಸರಿನಲ್ಲಿ ಫಾರ್ಮ್ ಅನ್ನು ಭರ್ತಿ ಮಾಡಲು ಕೇಳಲಾಗಿತ್ತು. ಇದರಲ್ಲಿ ಕ್ರೀಡೆಯ ಹೆಸರನ್ನು ಬರೆದು ಕೆಳ ಭಾಗದಲ್ಲಿ ‘ಆರೋಗ್ಯ ದಾಖಲೆ’ ವಿಭಾಗದಲ್ಲಿ ದೃಷ್ಟಿ, ಕಿವಿ, ಹಲ್ಲುಗಳ ಸ್ಥಿತಿಯೊಂದಿಗೆ ನಾಡಿಮಿಡಿತ, ಎತ್ತರ, ಸೊಂಟ ಮತ್ತು ಪುಷ್ಠದ ಆಕಾರವನ್ನು ಬರೆಯಲು ಕೇಳಲಾಗಿದೆ. ಹಾಗೆಯೇ ಇದಕ್ಕಾಗಿ ಆಸ್ಪತ್ರೆಯಿಂದ ವೈದ್ಯಕೀಯ ಪ್ರಮಾಣ ಪತ್ರ ತರುವಂತೆಯೂ ತಿಳಿಸಲಾಗಿದೆ.
ಶಾಲೆಯ ಪ್ರತಿನಿಧಿ ಸುಧೀರ್ ತೋಮರ್ ಇವರು, ಈ ಫಾರ್ಮ ಮೂಲಕ ಮಕ್ಕಳ ‘ಬಾಡಿ ಮಾಸ್ ಇಂಡೆಕ್ಸ್’ ತೆಗೆದುಕೊಂಡು ಅವರ ದೇಹಕ್ಕೆ ಅನುಗುಣವಾಗಿ ಯಾವ ಆಟಗಳಲ್ಲಿ ಭಾಗವಹಿಸಬೇಕು ಎಂಬುದನ್ನು ನಿರ್ಧರಿಸಲು ಸಾಧ್ಯವಾಗುತ್ತದೆ ಎಂದು ಹೇಳಿದ್ದಾರೆ.
ಸಂಪಾದಕೀಯ ನಿಲುವುವಿದ್ಯಾರ್ಥಿ-ವಿದ್ಯಾರ್ಥಿನಿಯರ ಆಟಕ್ಕೆ ಸಂಬಂಧಿಸಿದಂತೆ ನಿರ್ಧಾರಗಳನ್ನು ತೆಗೆದುಕೊಳ್ಳಲು ಶಿಕ್ಷಣ ಇಲಾಖೆಯು ಕೆಲವು ನಿಯಮಗಳನ್ನು ರೂಪಿಸಿದೆ. ಅವುಗಳನ್ನು ನಿರ್ಲಕ್ಷಿಸಿ ಈ ರೀತಿ ಅನಾವಶ್ಯಕ ಮಾಹಿತಿ ಕೇಳುವ ಶಾಲಾ ಆಡಳಿತ ಮಂಡಳಿ ವಿರುದ್ಧ ಕ್ರಮ ಕೈಗೊಳ್ಳಬೇಕು ! |