ಸಮಾಜವಾದಿ ಪಕ್ಷದ ಶಾಸಕ ಶಫಿಕುರ್ ರಹಮಾನ್ ಇವರ ದಾವೆ
ಲಕ್ಷ್ಮಣಪುರಿ (ಉತ್ತರಪ್ರದೇಶ) – ಸಮಾಜವಾದಿ ಪಕ್ಷದ (ಸಪಾದ) ಶಾಸಕ ಶಫಿಕುರ್ ರಹಮಾನ್ ಇವರು ಒಂದಕ್ಕಿಂತ ಹೆಚ್ಚು ವಿವಾಹ ಮಾಡಿಕೊಳ್ಳುವುದು ಯೋಗ್ಯ ಎಂದು ಹೇಳಿದ್ದಾರೆ. ಬಹುಪತ್ನಿತ್ವ ಇದು ಇಸ್ಲಾಮಿನಲ್ಲಿನ ಧಾರ್ಮಿಕ ಕೃತಿಯಾಗಿದೆ. ಕುರಾನ್ ದಲ್ಲಿಯೂ ಒಂದಕ್ಕಿಂತ ಹೆಚ್ಚು ವಿವಾಹಕ್ಕೆ ಅನುಮತಿ ನೀಡಿದೆ, ಎಂದು ಶಫಿಕುರ್ ರಹಮಾನ್ ಇವರು ದಾವೆ ಮಾಡಿದ್ದಾರೆ. ಅಸ್ಸಾಂನಲ್ಲಿ ಒಂದಕ್ಕಿಂತ ಹೆಚ್ಚು ವಿವಾಹದ ಮೇಲೆ ನಿಷೇಧ ಹೇರುವುದರ ಬಗ್ಗೆ ಅಲ್ಲಿನ ಮುಖ್ಯಮಂತ್ರಿ ಹಿಮಂತ ಬಿಸ್ವ ಸರಮಾ ಇವರು ಕಾನೂನು ರೂಪಿಸುವ ಸಿದ್ಧತೆಯಲ್ಲಿದ್ದಾರೆ. ಈ ದೃಷ್ಟಿಯಿಂದ ಜನರಿಂದ ಈ ಕಾನೂನಿನ ಸಂದರ್ಭದಲ್ಲಿ ಅಭಿಪ್ರಾಯ ಕೇಳಲಾಗಿದೆ. ಇದರ ಹಿನ್ನೆಲೆಯಲ್ಲಿ ಶಫಿಕುರ್ ರಹಮಾನ್ ಇವರು ಈ ದಾವೆ ಮಾಡಿದ್ದಾರೆ.
ಸರಕಾರಕ್ಕೆ ಇಸ್ಲಾಂನಲ್ಲಿ ಹಸ್ತಕ್ಷೇಪ ಮಾಡುವ ಅಧಿಕಾರವಿಲ್ಲ !
ಸರಕಾರಕ್ಕೆ ಇಸ್ಲಾಂನ ಧಾರ್ಮಿಕ ವಿಷಯಗಳಲ್ಲಿ ಹಸ್ತಕ್ಷೇಪ ಮಾಡುವುದು ಅಥವಾ ಅದರ ಮೇಲೆ ನಿಷೇಧ ಹೇರುವ ಅಧಿಕಾರವಿಲ್ಲ. ಏಕಪತ್ನಿತ್ವದ ಕಾನೂನು ಮಾಡಿದರೂ ನಾವು ಅದಕ್ಕೆ ಉತ್ತರ ನೀಡುವೆವು, ಎಂದು ಶಫಿಕುರ್ ರಹಮಾನ್ ಇವರು ಹೇಳಿದ್ದಾರೆ. ಅಸ್ಸಾಂ ಸರಕಾರ ಪ್ರಸಾರಗೊಳಿಸಿರುವ ಸುತ್ತೋಲೆಯ ಪ್ರಕಾರ ಇಸ್ಲಾಂನ ಸಂದರ್ಭದಲ್ಲಿ ನ್ಯಾಯಾಲಯವು ‘ಒಂದಕ್ಕಿಂತ ಹೆಚ್ಚು ಪತ್ನಿ ಇರುವುದು ಇದು ಧರ್ಮದ ಅವಶ್ಯಕತೆ ಇರುವ ಅಂಶವಲ್ಲ’, ಎಂದು ಹೇಳಿದೆ.
“इस्लाम में एक से ज्यादा शादी कुरान का हुक्म है, कुराम हमें इसकी इजाज़त देता है”
◆ सपा सांसद शफीकुर्रहमान बर्क का बयान
Shafiqur Rahman Barq | #ShafiqurRahmanBarq pic.twitter.com/Ed8d1Vw4xP
— News24 (@news24tvchannel) August 23, 2023
ಸಂಪಾದಕೀಯ ನಿಲುವುಇಂದು ಬಹುಪತ್ನಿತ್ವದಿಂದ ದೇಶದ ಸಂಪನ್ಮೂಲದ ಮೇಲೆ ಏನು ಹೆಚ್ಚುವರಿ ಬಾರ ಬೀಳುತ್ತಿದೆಯೋ, ಅದರ ಹಿಂದೆ ‘ಹಮ ಪಾಂಜ್ ಹಮಾರೆ ಪಚ್ಚಿಸ್’, (ನಾವು ಐದು ನಮ್ಮವರು 25) ಈ ಮಾನಸಿಕತೆಯೆ ಮುಖ್ಯ ಕಾರಣ ಆಗಿದೆ, ಈ ಸತ್ಯ ಯಾರು ನಿರಾಕರಿಸುವುದಿಲ್ಲ ! ಧರ್ಮದ ಹೆಸರಿನಲ್ಲಿ ದೇಶದ ಹಿತಕ್ಕೆ ಅಡ್ಡ ಬರುವ ಜನಪ್ರತಿನಿಧಿಗಳನ್ನು ಈಗ ಜನರೇ ಮನೆಯಲ್ಲಿ ಕೂಡಿಸಬೇಕು. ಇದರ ಬಗ್ಗೆ ಜಾತ್ಯತೀತರು ಮೌನ ಏಕೆ ? |