‘ಚಂದ್ರಯಾನ-3’ ಚಂದ್ರನ ಮೇಲೆ ಯಶಸ್ವಿಯಾಗಿ ಇಳಿಸಿದ ಹಿಂದಿನ ಪ್ರಕ್ರಿಯೆ !

ಧೂಳು ಚದುರಿದ ನಂತರ ಹೊರಬರುವ ಪ್ರಜ್ಞಾನ ‘ಪ್ರಜ್ಞಾನ ರೋವರ್ !

ಅ. ಜುಲೈ ೧೪ ರಂದು ಚಂದ್ರಯಾನ-3 ಚಂದ್ರನ ಮೇಲೆ ಇಳಿಸಲು ಪ್ರಕ್ಷೇಪಿಸಲಾಗಿತ್ತು. ಕೆಲವು ದಿನ ಪೃಥ್ವಿಯ ಸುತ್ತಲೂ ಸುತ್ತಿದ ನಂತರ ಆಗಸ್ಟ್ 1 ರಂದು ಈ ಯಾನ ಚಂದ್ರನ ಕಡೆಗೆ ಮಾರ್ಗಕ್ರಮಣ ಮಾಡಿತು.

ಆ. ಚಂದ್ರನ ಕಕ್ಷೆಗೆ ತಲುಪಿದ ನಂತರ ಆಗಸ್ಟ್ ೨೩ ರಂದು ಸಂಜೆ ೫.೪೪ ಗಂಟೆಯ ವರೆಗೆ ಅದು ಚಂದ್ರನ ಸುತ್ತ ಸುತ್ತುತ್ತಿತ್ತು.

ಇ. ಕೆಲವು ದಿನಗಳ ಹಿಂದೆ ‘ಚಂದ್ರಯಾನ 3’ ರ ಮುಖ್ಯ ಭಾಗದಿಂದ ”ವಿಕ್ರಂ ಲ್ಯಾಡರ್” ಸ್ವತಂತ್ರವಾಗಿತ್ತು ಮತ್ತು ಅದು ಚಂದ್ರನ ಸುತ್ತ ಸುತ್ತುತ್ತಿತ್ತು. ಈ ಸಮಯದಲ್ಲಿ ಎರಡು ಬಾರಿ ”ವಿಕ್ರಂ ಲ್ಯಾಡರ್” ಅದರ ಗತಿ ಕಡಿಮೆ (ಡಿಬುಸ್ಟಿಂಗ್) ಮಾಡಿತ್ತು.

ಈ. ಚಂದ್ರನ ಮೇಲೆ ಇಳಿಯುವ ಮೊದಲು ”ವಿಕ್ರಂ ಲ್ಯಾಡರ್” ಚಂದ್ರನಗಿಂತಲೂ ಕೇವಲ ೨೫ ಕಿಲೋಮೀಟರ್ ಅಂತರದಿಂದ ಚಂದ್ರನ ಸುತ್ತ ಸುತ್ತುತ್ತಿತ್ತು. ಆ ಸಮಯದಲ್ಲಿ ಅದು ಚಂದ್ರನ ಅನೇಕ ಛಾಯಾ ಚಿತ್ರಗಳು ‘ಇಸ್ರೋ’ಗೆ ಕಳುಹಿಸಿತ್ತು.

ಉ. ಆಗಸ್ಟ್ 23 ರಂದು ‘ವಿಕ್ರಂ ಲ್ಯಾಡರ್’ ಕಳುಹಿಸಿರುವ ಛಾಯಚಿತ್ರದ ಆಧಾರದಲ್ಲಿ ಇಸ್ರೋದ ವಿಜ್ಞಾನಿಗಳು ‘ವಿಕ್ರಂ ಲ್ಯಾಡರ್’ ಇಳಿಸುವ ಜಾಗದ ಆಯ್ಕೆ ಮಾಡಿದರು.

ಊ. ಸಂಜೆ ೫.೪೪ ಗಂಟೆಯ ನಂತರ ನಿಧಾನವಾಗಿ ಚಂದ್ರನ ಮೇಲೆ ಇಳಿಯುವ ಪ್ರಕ್ರಿಯೆ ಆರಂಭವಾಯಿತು ಮತ್ತು ಸಂಜೆ ೬.೦೪ ಕ್ಕೆ ‘ವಿಕ್ರಂ ಲ್ಯಾಡರ್’ ಯಶಸ್ವಿಯಾಗಿ ಚಂದ್ರನ ಮೇಲೆ ಇಳಿಯಿತು. ಈ ಎಲ್ಲಾ ಪ್ರಕ್ರಿಯೆ ‘ವಿಕ್ರಂ ಲ್ಯಾಡರ್’ ನಲ್ಲಿನ ಕಂಪ್ಯೂಟರ್ ನ ಸೂಚನೆಯಂತೆ ಅಂದರೆ ಕೃತಕ ಬುದ್ದಿವಂತಿಕೆಯ ಮೂಲಕ (‘ಎ.ಐ.’ ಮೂಲಕ) ನಡೆಸಲಾಯಿತು. ಇದರಲ್ಲಿ ಇಸ್ರೋದ ವಿಜ್ಞಾನಿಗಳ ಯಾವುದೇ ನಿಯಂತ್ರಣ ಇರಲಿಲ್ಲ. ಈ ಸಮಯದಲ್ಲಿ ವಿಕ್ರಂ ಲ್ಯಾಂಡರ್ ಅದರ ಗತಿ ಕಡಿಮೆ ಮಾಡುತ್ತಾ ಬಂದಿತ್ತು.

ಏ. ಚಂದ್ರನ ಮೇಲೆ ‘ವಿಕ್ರಂ ಲ್ಯಾಡರ್’ ಇಳಿದ ನಂತರ ಅಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಧೂಳು ಮೇಲೆದ್ದಿತ್ತು, ಅದು ಚದುರಿದ ನಂತರ ‘ವಿಕ್ರಂ ಲ್ಯಾಡರ್’ ನಲ್ಲಿನ ‘ರೋವರ್ ಪ್ರಜ್ಞಾನ್’ ಹೊರಬರಲು ಆದೇಶ ನೀಡಲಾಗುವುದು. ಇದಕ್ಕಾಗಿ ೨ ರಿಂದ ೮ ಗಂಟೆಯಷ್ಟು ಸಮಯ ಬೇಕಾಗಬಹುದು.

ಮುಂದಿನ ೧೪ ದಿನ ನಡೆಸುವ ಸಮೀಕ್ಷೆ

‘ವಿಕ್ರಂ ಲ್ಯಾಡರ್’ನಿಂದ ರೋವ್ಹರ್ ಪ್ರಜ್ಞಾನ್ ಹೊರ ಬಂದ ನಂತರ ಮುಂದಿನ ೧೪ ದಿನ ಎಂದರೆ ದಕ್ಷಿಣ ಧ್ರುವದಲ್ಲಿ ಸೂರ್ಯೋದಯ ಇರುವವರೆಗೆ ವಿಕ್ರಮ ಮತ್ತು ಪ್ರಜ್ಞಾನ್ ಇವುಗಳಿಂದ ಚಂದ್ರನ ಮೇಲ್ಮೈ ನಿರೀಕ್ಷಣೆ ಮಾಡಲಾಗುವುದು. ಅಲ್ಲಿಯ ಮಣ್ಣು, ಕಲ್ಲು ಮುಂತಾದರ ಮಾಹಿತಿ ಸಂಗ್ರಹಿಸಲಾಗುವುದು. ಇದರ ಮೂಲಕ ‘ಚಂದ್ರನ ಮೇಲೆ ನೀರು ಅಸ್ತಿತ್ವದಲ್ಲಿ ಇದೆಯೇ ?’, ‘ಅಲ್ಲಿ ಯಾವ ಖನಿಜಗಳು ಇವೆ?’, ಇದರ ಅಧ್ಯಯನ ಕೂಡ ನಡೆಸಲಾಗುವುದು. ೧೪ ದಿನದ ನಂತರ ಚಂದ್ರನ ಮೇಲೆ ಸೂರ್ಯಾಸ್ತವಾದ ನಂತರ ವಿಕ್ರಮ ಮತ್ತು ಪ್ರಜ್ಞಾನ ಇದರ ಕಾರ್ಯ ನಿಲ್ಲುವುದು. ಸೌರ ಊರ್ಜಯ ಮೂಲಕ ವಿಕ್ರಮ ಮತ್ತು ಪ್ರಜ್ಞಾನ್ ಕಾರ್ಯನಿರತವಾಗಿರುವುದು. ಸೂರ್ಯಾಸ್ತದ ನಂತರ ಅಲ್ಲಿ ಕತ್ತಲಾಗಿ ಬಹಳ ಚಳಿ ಇರುವುದರಿಂದ ಆ ಸಮಯದಲ್ಲಿ ವಿಕ್ರಮ ಮತ್ತು ಪ್ರಜ್ಞಾನ್ ಇವುಗಳ ಕಾರ್ಯ ಸಂಪೂರ್ಣವಾಗಿ ನಿಂತು ಹೋಗುವುದು ಮತ್ತು ಅದರ ನಂತರ ಅವು ಯಾವುದೇ ಕಾರ್ಯ ಮಾಡಲು ಸಾಧ್ಯವಿಲ್ಲ .

ಪ್ರಧಾನಮಂತ್ರಿ ನರೇಂದ್ರ ಮೋದಿ ದಕ್ಷಿಣ ಆಫ್ರಿಕಾದಂದ ಆನ್ಲೈನ್ ಉಪಸ್ಥಿತಿ !

ಇಸ್ರೋದ ಬೆಂಗಳೂರಿನಲ್ಲಿನ ನಿಯಂತ್ರಣ ಕಕ್ಷೆಯಲ್ಲಿ ಇಸ್ರೋದ ಪ್ರಮುಖ ಸೋಮನಾಥ್, ಮಾಜಿ ಮುಖ್ಯಸ್ಥ ಸಿವಾನ್ ಮುಂತಾದ ವಿಜ್ಞಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು. ಹಾಗೂ ದಕ್ಷಿಣ ಆಫ್ರಿಕಾದಲ್ಲಿನ ಬ್ರಿಕ್ಸ್ ದೇಶದ ಸಭೆಗಾಗಿ ಉಪಸ್ಥಿತರಿರಲು ಹೋಗಿದ್ದ ಪ್ರಧಾನಿ ನರೇಂದ್ರ ಮೋದಿ ಅಲ್ಲಿಂದ ಆನ್ಲೈನ್ ನಲ್ಲಿ ಇಸ್ರೋದ ನಿಯಂತ್ರಣ ಕಕ್ಷೆಗೆ ಜೋಡಣೆಯಾಗಿದ್ದರು.

ನಾನು ಬಹಳ ಆನಂದಿತನಾಗಿದ್ದೇನೆ ! – ಕೆ. ಸಿವನ್ ಮಾಜಿ ಮುಖ್ಯಸ್ಥ, ಇಸ್ರೋ

ಇಸ್ರೋದ ಮಾಜಿ ಮುಖ್ಯಸ್ಥ ಕೆ. ಸಿವನ್ ಇವರು ಕೂಡ ಶುಭಾಶಯ ನೀಡಿದರು. ಅವರು, ನಾವು ಬಹಳ ಸಮಯದಿಂದ ಈ ಕ್ಷಣದ ದಾರಿ ಕಾಯುತ್ತಿದ್ದೆವು, ನಾನು ಬಹಳ ಆನಂದಿತನಾಗಿದ್ದೇನೆ ಎಂದು ಹೇಳಿದರು.

ಕಾಂಗ್ರೆಸ್ ನಿಂದ ದೇಶದ ಜನತೆಗೆ ಶುಭಾಶಯಗಳು !

ಕಾಂಗ್ರೆಸ್ ಟ್ವೀಟ್ ಮಾಡಿ, ಚಂದ್ರಯಾನ-3 ಯಶಸ್ವಿಯಾಗಿ ಚಂದ್ರನ ಮೇಲೆ ಇಳಿದಿರುವುದರಿಂದ ಎಲ್ಲಾ ದೇಶವಾಸಿಯರಿಗೆ ಶುಭಾಶಯಗಳು !

ಪಂಡಿತ ನೆಹರು ಇವರು ಇಸ್ರೋದ ಸ್ಥಾಪನೆ ಮಾಡಿದ್ದರು. ಅವರ ದೂರ ದೃಷ್ಟಿಯ ಪರಿಣಾಮ ಇಂದು ಭಾರತ ಜಗತ್ತಿನ ಸಂಶೋಧನ ಕ್ಷೇತ್ರದಲ್ಲಿ ಮೈಲುಗಲ್ಲು ಸ್ಥಾಪಿಸಿದೆ ಎಂದು ಹೇಳಿದ್ದಾರೆ.

ಆಮ್ ಆದ್ಮಿ ಪಕ್ಷದಿಂದ ಕೂಡ ಶುಭಾಶಯಗಳು !

ಆಮ್ ಆದ್ಮಿ ಪಕ್ಷದ ಶಾಸಕ ರಾಘವ ಚಡ್ಡಾ ಇವರು ಟ್ವೀಟ್ ಮಾಡಿ. ಈ ಯಶಸ್ಸು ಇಸ್ರೋದ ಇಚ್ಛಾಶಕ್ತಿಯ ಸಾಕ್ಷಿ ಆಗಿದೆ. ಅವರ ತತ್ಪರತೆ ಮತ್ತು ಕಠೋರ ಪರಿಶ್ರಮದಿಂದ ಭಾರತೀಯರ ಹೃದಯ ಅಭಿಮಾನದಿಂದ ಅರಳಿದೆ ಎಂದು ಹೇಳಿದರು.

ಇಸ್ರೋದ ನಿಯಂತ್ರಣ ಕಕ್ಷೆಯಲ್ಲಿ ವಂದೇ ಮಾತರಂನ ಘೋಷಣೆ !

ಲ್ಯಾಡರ್ ವಿಕ್ರಂ ಚಂದ್ರನ ಮೇಲೆ ಇಳಿದ ನಂತರ ಇಸ್ರೋದ ನಿಯಂತ್ರಣ ಪಕ್ಷದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತ ಇರುವ ವಿಜ್ಞಾನಿಗಳು ಉತ್ಸಾಹದಿಂದ ವಂದೇ ಮಾತರಂನ ಘೋಷಣೆ ಕೂಗಿದರು.

ಭಾರತ, ನಾನು ನನ್ನ ಧ್ಯೇಯ ಸಾಧಿಸಿದ್ದೇನೆ ಮತ್ತು ನೀನು ಕೂಡ ! – ಚಂದ್ರಯಾನ 3

‘ಚಂದ್ರಯಾನ 3’ ಚಂದ್ರನ ಮೇಲೆ ಯಶಸ್ವಿಯಾಗಿ ಇಳಿದ ನಂತರ ‘ಇಸ್ರೋ’ ಟ್ವೀಟ್ ಮಾಡುತ್ತಾ, ”ಭಾರತ, ನಾನು ನನ್ನ ಧೈಯ್ಶ ಸಾಧಿಸಿದ್ದೇನೆ ಮತ್ತು ನೀನು ಕೂಡ !’, ಎಂದು ಚಂದ್ರಯಾನ-3 ಹೇಳುತ್ತಿದೆ. ಚಂದ್ರಯಾನ-3 ಯಶಸ್ವಿಯಾಗಿ ಚಂದ್ರನ ಮೇಲೆ ಸಾಫ್ಟ್ ಲ್ಯಾಂಡಿಂಗ್ ಮಾಡಿದೆ. ಭಾರತಕ್ಕೆ ಅಭಿನಂದನೆಗಳು !”