ಜಿ-20 ರಾಷ್ಟ್ರಗಳ ಸಭೆಗಾಗಿ ಅಮೆರಿಕಾದ ಅಧ್ಯಕ್ಷ ಜೋ ಬೈಡನ್ ಸೆಪ್ಟೆಂಬರ್ ನಲ್ಲಿ ಭಾರತಕ್ಕೆ ಆಗಮನ

ವಾಷಿಂಗ್ಟನ್ (ಅಮೇರಿಕಾ) – ಪ್ರಸ್ತುತ, ಭಾರತವು ‘ಜಿ-20’ ರಾಷ್ಟ್ರಗಳ ಸಂಘಟನೆಯ ಅಧ್ಯಕ್ಷತೆಯನ್ನು ವಹಿಸಿದೆ. ಈ ವರ್ಷ ಸಪ್ಟೆಂಬರ 9 ಮತ್ತು 10, 2023 ರಂದು ದೆಹಲಿಯಲ್ಲಿ ಈ ಸಂಘಟನೆಯ ಶೃಂಗಸಭೆಯನ್ನು ಆಯೋಜಿಸಲಾಗಿದೆ. ಈ ಸಂದರ್ಭದಲ್ಲಿ ಕೆಲವು ರಾಷ್ಟ್ರಾಧ್ಯಕರು ಉಪಸ್ಥಿತರಿರುತ್ತಾರೆ. ಇದರಲ್ಲಿ ಅಮೇರಿಕಾದ ಅಧ್ಯಕ್ಷ ಜೋ ಬೈಡೆನ್ ಕೂಡ ಬರಲಿದ್ದಾರೆ. ಜೊ ಬೈಡನ್ ಸೆಪ್ಟೆಂಬರ್ 7 ರಿಂದ 10 ರವರೆಗೆ ಭಾರತಕ್ಕೆ ಭೇಟಿ ನೀಡಲಿದ್ದಾರೆ ಎಂದು ಅಮೇರಿಕಾದಿಂದ ಅಧಿಕೃತ ಮಾಹಿತಿ ನೀಡಿದೆ. ಈ ಪ್ರವಾಸದ ಸಮಯದಲ್ಲಿ, ಜೋ ಬೈಡನ್ ಅವರು ಇತರೆ ದೇಶಗಳ ಅಧ್ಯಕ್ಷರೊಂದಿಗೆ ಉಕ್ರೇನ್-ರಷ್ಯಾ ಯುದ್ಧ ಮತ್ತು ಇತರ ಜಾಗತಿಕ ಸವಾಲುಗಳ ಬಗ್ಗೆ ಚರ್ಚಿಸಲಿದ್ದಾರೆ ಎಂದು ಅಮೇರಿಕಾ ಸ್ಪಷ್ಟಪಡಿಸಿದೆ.

G-20 ಭಾಗವಹಿಸುವವರು ಮತ್ತು ಅತಿಥಿ ರಾಷ್ಟ್ರಗಳು

ಜಿ-20 ಗುಂಪಿನಲ್ಲಿ ಅರ್ಜೆಂಟೀನಾ, ಬ್ರೆಜಿಲ್, ಮೆಕ್ಸಿಕೋ, ಅಮೇರಿಕಾ, ಕೆನಡಾ, ರಷ್ಯಾ, ಫ್ರಾನ್ಸ್, ಯುನೈಟೆಡ್ ಕಿಂಗ್ಡಮ್, ಜರ್ಮನಿ, ಇಟಲಿ, ಟರ್ಕಿ, ದಕ್ಷಿಣ ಆಫ್ರಿಕಾ, ಸೌದಿ ಅರೇಬಿಯಾ, ಭಾರತ, ಇಂಡೋನೇಷ್ಯಾ, ಚೀನಾ, ಕೊರಿಯಾ ಗಣರಾಜ್ಯ, ಜಪಾನ್ ಮತ್ತು ಆಸ್ಟ್ರೇಲಿಯಾ ಸಹಿತ ಯುರೋಪಿಯನ್ ಯೂನಿಯನ ದೇಶಗಳು ಸೇರಿವೆ. ಇದರೊಂದಿಗೆ ಅತಿಥಿ ರಾಷ್ಟ್ರಗಳಲ್ಲಿ ನೆದರ್ ಲ್ಯಾಂಡ್, ಸ್ಪೇನ್, ಈಜಿಪ್ಟ್, ಸಂಯುಕ್ತ ಅರಬ ಎಮಿರೇಟ್ಸ್, ಓಮನ್, ನೈಜೇರಿಯಾ, ಮಾರಿಷಸ್, ಬಾಂಗ್ಲಾದೇಶ ಮತ್ತು ಸಿಂಗಾಪುರ ಸೇರಿವೆ.