ಬೆಂಗಳೂರು – ಭಾರತದ `ಚಂದ್ರಯಾನ-3’ರ `ಲ್ಯಾಂಡರ ವಿಕ್ರಮ’ ಇಂದು ಸಾಯಂಕಾಲ 6 ಗಂಟೆ 04 ಗಂಟೆಗೆ ಚಂದ್ರನ ಮೇಲೆ ಇಳಿಯಲಿದೆ. ಸಾಯಂಕಾಲ 5 ಗಂಟೆ 47 ನಿಮಿಷದಿಂದ ಅದರ ಚಂದ್ರನ ಮೇಲೆ ಇಳಿಯುವ ಪ್ರಕ್ರಿಯೆ ಪ್ರಾರಂಭವಾಗಲಿದೆ. ಈ ಸಂಪೂರ್ಣ ಕಾಲಾವಧಿಯನ್ನು ‘ಫಿಪ್ಟೀನ್ ಮಿನಿಟ್ಸ ಆಫ್ ಟೆರರ್’ (ಭಯಾನಕ 15 ನಿಮಿಷಗಳು) ಎಂದು ಕರೆಯುತ್ತಾರೆ. ಒಂದು ವೇಳೆ ಲ್ಯಾಂಡರ್ ಚಂದ್ರನ ಮೇಲೆ ಇಳಿಯುವಲ್ಲಿ ಯಶಸ್ವಿಯಾದರೆ, ಚಂದ್ರನ ದಕ್ಷಿಣ ಧ್ರುವದ ಬಾಹ್ಯಾಕಾಶ ನೌಕೆಯನ್ನು ಇಳಿಸಿದ ವಿಶ್ವದ ಮೊದಲ ದೇಶ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಲಿದೆ.
ಚಂದ್ರನ ಮೇಲೆ ಇಳಿಯುವ 2 ಗಂಟೆಗಳ ಮೊದಲು, ಲ್ಯಾಂಡರ್ ವಿಕ್ರಮನ ಸ್ಥಿತಿ ಮತ್ತು ಚಂದ್ರನ ಮೇಲಿನ ಪರಿಸ್ಥಿತಿಯನ್ನು ಅಧ್ಯಯನ ಮಾಡಿ ಅದು ಚಂದ್ರನ ಮೇಲೆ ಇಳಿಯಲು ಸೂಕ್ತವೇ ಅಥವಾ ಇಲ್ಲವೇ ಎಂಬುದನ್ನು ನಿರ್ಧರಿಸಲಾಗುತ್ತದೆ. ಈ ಬಾರಿ ಏನಾದರೂ ಸಮಸ್ಯೆ ಎದುರಾದರೆ ಆಗಸ್ಟ್ 27 ರಂದು ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲೆ ಇಳಿಯಲಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ತಿಳಿಸಿದೆ.
ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲೆ ಇಳಿದ ನಂತರ ಏನಾಗುತ್ತದೆ ?
ಲ್ಯಾಂಡರ್ ವಿಕ್ರಮ್ ಚಂದ್ರನ ಮೇಲೆ ಸುರಕ್ಷಿತವಾಗಿ ಇಳಿದ ನಂತರ, ಸ್ವಲ್ಪ ಸಮಯದ ನಂತರ ಅದರಿಂದ ‘ರೋವರ್ ಪ್ರಗ್ಯಾನ್’ ಹೊರಗೆ ಬರುತ್ತದೆ. ಈ ಇಬ್ಬರೂ ಒಟ್ಟಾಗಿ ಚಂದ್ರನ ಮೇಲ್ಮೈಯ ಛಾಯಾಚಿತ್ರಗಳನ್ನು ತೆಗೆಯುತ್ತಾರೆ. ನಿಯಂತ್ರಣ ಕೊಠಡಿಯಿಂದ ಆದೇಶಗಳನ್ನು ಸ್ವೀಕರಿಸಿದ ನಂತರ, ರೋವರ್ ಪ್ರಗ್ಯಾನ್ ಚಂದ್ರನ ಮೇಲ್ಮೈಯಲ್ಲಿ ಚಲಿಸುತ್ತದೆ. ಈ ಸಮಯದಲ್ಲಿ, ಅದರ ಚಕ್ರಗಳು ಚಂದ್ರನ ಮಣ್ಣಿನಲ್ಲಿ ಭಾರತದ ರಾಷ್ಟ್ರೀಯ ಚಿಹ್ನೆ ಅಶೋಕ ಸ್ತಂಭ ಮತ್ತು ಇಸ್ರೋದ ಲೋಗೋ ಮುದ್ರೆಗಳನ್ನು ಬಿಡುತ್ತವೆ. ಮುಂದಿನ 14 ದಿನಗಳ ಕಾಲ ವಿಕ್ರಮ್ ಮತ್ತು ಪ್ರಗ್ಯಾನ್ ಚಂದ್ರನ ಬಗ್ಗೆ ಮಾಹಿತಿಯನ್ನು ಕಳುಹಿಸುತ್ತಾರೆ.
Chandrayaan-3 Updates: ಚಂದ್ರನ ಕಕ್ಷೆಯಲ್ಲಿ ಚಂದ್ರಯಾನ-2 ಜೊತೆ ಸಂಪರ್ಕ ಸಾಧಿಸಿದ ವಿಕ್ರಮ್ ಲ್ಯಾಂಡರ್ !
ಯಾರೂ ಗೊತ್ತಿಲ್ಲದ ಊರಲ್ಲಿ ಸಿಕ್ಕ ಹಳೆ ಗೆಳೆಯ.. ವಿಕ್ರಮ್ ಲ್ಯಾಂಡರ್ ಜೊತೆ ಸಂಪರ್ಕ ಸಾಧಿಸಿದ ಚಂದ್ರಯಾನ-2!#CHANDRAYAAN #NASA #ESA #CHANDRAYAAN3 #ISRO #MoonMission #SRIHARIKOTAhttps://t.co/ha7O1mPYxa
— Asianet Suvarna News (@AsianetNewsSN) August 21, 2023
(ಸೌಜನ್ಯ – ISRO Official)