ಲಂಡನ್ (ಬ್ರಿಟನ್) – ಲಂಡನ್ ಸೌತ್ ಹಾಲ್ ಪ್ರದೇಶದಲ್ಲಿ ಭಾರತದ ಸ್ವಾತಂತ್ರ್ಯ ದಿನ ಆಚರಿಸುವ ಭಾರತೀಯ ಮೂಲದ ನಾಗರಿಕರ ಮೇಲೆ ಚಾಕುಯಿಂದ ದಾಳಿ ನಡೆಸಿರುವ ಪ್ರಕರಣದಲ್ಲಿ ಪೊಲೀಸರು ೨ ಖಲಿಸ್ತಾನಿಗಳಿಗೆ ಬಂಧಿಸಿದ್ದಾರೆ. ಗುರುಪ್ರೀತ ಸಿಂಹ ಇವನು ಭಾರತೀಯ ಪ್ರಜೆಯಾಗಿದ್ದಾನೆ. ಮತ್ತೊಬ್ಬನನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ. ಗುರುಪ್ರೀತ ಸಿಂಹ ಇವನಿಗೆ ಪೊಲೀಸ ಕಸ್ತಡಿಗೆ ನೀಡಲಾಗಿದೆ.
ಈ ದಾಳಿಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರವಾಗಿದೆ. ಇದರಲ್ಲಿ, ಕೆಲವು ಭಾರತೀಯರು ಕೈಯಲ್ಲಿ ರಾಷ್ಟ್ರಧ್ವಜ ಹಿಡಿದು ಮೆರವಣಿಗೆ ನಡೆಸುತ್ತಿದ್ದಾರೆ. ದಾರಿಯಲ್ಲಿ ಗುರುದ್ವಾರ ಇರುವ ಸ್ಥಳದಲ್ಲಿ ಅವರಿಗೆ ಖಲಿಸ್ತಾನನಿಗಳಿಂದ ವಿರೋಧ ವ್ಯಕ್ತಪಡಿಸಲಾಯಿತು. ಆ ಸಮಯದಲ್ಲಿ ನಡೆದ ವಾದ ವಿವಾದದಿಂದ ಸ್ವಾತಂತ್ರ್ಯ ದಿನ ಆಚರಿಸುವವರ ಮೇಲೆ ದಾಳಿ ಮಾಡಲಾಯಿತು. ಈ ಗುರುದ್ವಾರದ ಗೋಡೆಯ ಮೇಲೆ ಖಲಿಸ್ತಾನಿ ಭಯೋತ್ಪಾದಕ ಬಿಂದ್ರನವಾಲೆಯ ಛಾಯಾಚಿತ್ರ ಅಂಟಿಸಲಾಗಿತ್ತು .
The Metropolitan Police released a statement saying that a Sikh man in his 20s was charged with stabbing two people during a community event in Southall, west Londonhttps://t.co/VwRwXvbwOe
— WION (@WIONews) August 18, 2023
ಸಂಪಾದಕರ ನಿಲುವು* ಬ್ರಿಟನ್ ನಲ್ಲಿ ಖಲಿಸ್ತಾನಿಗಳ ಚಟುವಟಿಕೆ ಹೆಚ್ಚುತ್ತಿರುವುದರಿಂದ ಅವರ ಮೇಲೆ ಕಠಿಣ ಕ್ರಮ ಕೈಗೊಳ್ಳುವ ಬದಲು ಭಾರತೀಯ ಮೂಲದ ಪ್ರಧಾನಿ ಋಷಿ ಸುನಕ್ ಇವರ ಸರಕಾರ ಬಾಲ ಮುದುಡಿಕೊಂಡಿರುವುದು, ಇದು ಅವರಿಗೆ ಲಜ್ಜಾಸ್ಪದ ! * ಭಾರತೀಯ ಮೂಲದ ನಾಗರಿಕ ವಿದೇಶದಲ್ಲಿನ ಉನ್ನತ ಸ್ಥಾನಕ್ಕೆ ತಲುಪಿರುವುದು ಇದು ಭಾರತೀಯರಿಗೆ ಅಭಿಮಾನವಾಗಿದ್ದರೂ ಇಂತಹ ನಾಗರೀಕರಿಂದ ಭಾರತಕ್ಕೆ ಮತ್ತು ಭಾರತೀಯರಿಗೆ ವಿಶೇಷ ಲಾಭ ಆಗುತ್ತಿಲ್ಲ, ಇದೇ ಇದರಿಂದ ತಿಳಿದು ಬರುತ್ತಿದೆ ! |