ಹರದೋಯಿ (ಉತ್ತರ ಪ್ರದೇಶ)ಯಲ್ಲಿ ಸ್ವಾತಂತ್ರ್ಯ ದಿನದಂದು ಮದರಸಾದಲ್ಲಿ ಭಾಷಣದಲ್ಲಿ ಮೌಲಾನಾ ಅಬ್ದುರ್ರಹಮಾನ್ ಜಾಮೈರವರ ಹೇಳಿಕೆ !
ಹರದೋಯಿ (ಉತ್ತರ ಪ್ರದೇಶ) – ಜಿಲ್ಲೆಯ ಗೋಪಾಮೌನಲ್ಲಿರುವ ಲಾಲ್ ಪಿರ್ ಮಸೀದಿಯ ಮದರಸಾದಲ್ಲಿ ಆಗಸ್ಟ್ 15 ರಂದು ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು. ಆ ಸಂದರ್ಭದಲ್ಲಿ ಮೌಲಾನಾ ಅಬ್ದುರ್ರಹಮಾನ್ ಜಾಮೈ ಮಾಡಿದ ಭಾಷಣ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗುತ್ತಿದೆ. ಭಾಷಣದಲ್ಲಿ ಮೌಲಾನಾ ‘ಯಾವ ಸ್ವಾತಂತ್ರ್ಯದಲ್ಲಿ ಮುಸಲ್ಮಾನರ ಮೇಲೆ ಅತ್ಯಾಚಾರವಾಗುತ್ತಿದೆಯೋ, ಅಂತಹ ಸ್ವಾತಂತ್ರ್ಯ ನಮಗೆ ಬೇಡ. ನಾವು ಅದನ್ನು ಒದೆಯುತ್ತೇವೆ’ ಎಂದು ಹೇಳಿದ್ದಾರೆ. ಈ ವಿಷಯದಲ್ಲಿ ಪೊಲೀಸ್ ಅಧೀಕ್ಷಕರು ಈ ವೀಡಿಯೋ ಬಗ್ಗೆ ತನಿಖೆ ನಡೆಸಿ ಮೌಲಾನಾ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
(ಸೌಜನ್ಯ – Punjab Kesari UP)
‘ನಮಗೆ ಧಾರ್ಮಿಕ ಸ್ವಾತಂತ್ರ್ಯ ಬೇಕಂತೆ !’
ಭಾಷಣದಲ್ಲಿ, ಮೌಲಾನಾ ಜಾಮೈ ಅವರು, ಮಸೀದಿಗಳಲ್ಲಿನ ಧ್ವನಿವರ್ಧಕದ ಮೂಲಕ ಅಜಾನ್ ಮಾಡಿದ್ದಕ್ಕೆ ದೂರು ದಾಖಲಿಸಲಾಗುತ್ತಿದೆ. ‘ಮುಸ್ಲಿಂ ಪರ್ಸನಲ್ ಲಾ’ ಬದಲಾಯಿಸಲು ಪ್ರಯತ್ಮ ಮಾಡಲಾಗುತ್ತಿದೆ. ಇದೆಂತಹ ಪ್ರಜಾಪ್ರಭುತ್ವವಾಗಿದೆ ? ಇದೆಂತಹ ಸ್ವಾತಂತ್ರ್ಯವಾಗಿದೆ ? ಇದಂತೂ ಮುಸಲ್ಮಾನರ ಧಾರ್ಮಿಕ ಪ್ರಕರಣದಲ್ಲಿ ನುಸುಳುವಿಕೆ ಮಾಡಲಾಗುತ್ತಿದೆ. ನಮಗೆ ಧಾರ್ಮಿಕ ಸ್ವಾತಂತ್ರ್ಯ ಬೇಕಾಗಿದೆ. (ಜಾತ್ಯಾತೀತ ಭಾರತದಲ್ಲಿ ಮುಸಲ್ಮಾನರಿಗೆ ಎಷ್ಟು ಧಾರ್ಮಿಕ ಸ್ವಾತಂತ್ರ್ಯವಿದೆಯೋ, ಅಷ್ಟು ಬಹುಸಂಖ್ಯಾತ ಹಿಂದೂಗಳಿಗೂ ಇಲ್ಲ. ಆದರೂ ಅವರು ತೃಪ್ತರಾಗುತ್ತಿಲ್ಲ ಎನ್ನುವುದನ್ನು ಗಮನಿಸಬೇಕಾಗಿದೆ ! – ಸಂಪಾದಕರು)
ಸಂಪಾದಕೀಯ ನಿಲುವು‘ಇಂತಹ ಮೌಲಾನಾರನ್ನು ಪಾಕಿಸ್ತಾನಕ್ಕೆ ಒದ್ದೋಡಿಸಬೇಕು. ಅಲ್ಲಿ ಅವರಿಗೆ ಬೇಕಾದಷ್ಟು ಸ್ವಾತಂತ್ರ್ಯ ಅನುಭವಿಸಲಿ’, ಎಂದು ಯಾರಾದರೂ ಹೇಳಿದರೆ ತಪ್ಪೆಂದು ತಿಳಿಯಬಾರದು ! ಇಂತಹ ಮಾನಸಿಕತೆಯಿಂದಲೇ ಮುಸಲ್ಮಾನರ ದೇಶಪ್ರೇಮದ ಬಗ್ಗೆ ಜನರಿಗೆ ಸಂದೇಹ ಮೂಡುತ್ತದೆ. ಇದನ್ನು ಭಾರತದ ಜಾತ್ಯತೀತವಾದಿಗಳು ಮತ್ತು ಪ್ರಗತಿ(ಅಧೋಗತಿ)ಪರರು ಇದನ್ನು ಗಮನಿಸುವರೇ ? |