ಅರರಿಯಾ (ಬಿಹಾರ)ದಲ್ಲಿ ಪತ್ರಕರ್ತನೊಬ್ಬನ ಮನೆಗೆ ನುಗ್ಗಿ ಕೊಲೆ !

  • ಬಿಹಾರದಲ್ಲಿ ಮತ್ತೆ ಜಂಗಲ್ ರಾಜ್ !

  • ಸಹೋದರನ ಹತ್ಯೆಯಲ್ಲಿ ಪ್ರಮುಖ ಸಾಕ್ಷಿಯಾಗಿದ್ದರಿಂದ ಆರೋಪಿಯೇ ಕೊಲೆ ಮಾಡಿದ್ದಾನೆ ಎಂದು ಕುಟುಂಬದವರ ಆರೋಪ

ಅರರಿಯಾ (ಬಿಹಾರ) – ಇಲ್ಲಿನ ರಾಣಿಗಂಜ್ ಪ್ರದೇಶದಲ್ಲಿ ದೈನಿಕ ‘ಅಖಬಾರ’ ಪತ್ರಿಕೆಯ ಪತ್ರಕರ್ತ ವಿಮಲ್ ಯಾದವ್ (ವಯಸ್ಸು 36 ವರ್ಷ) ಅವರ ಮನೆಗೆ ನುಗ್ಗಿದ ಅಪರಿಚಿತ ವ್ಯಕ್ತಿಗಳು ಅವರನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. 2019 ರಲ್ಲಿ ವಿಮಲ್ ಯಾದವ್ ಅವರ ಕಿರಿಯ ಸಹೋದರ ಗಬ್ಬು ಯಾದವರ ಹತ್ಯೆ ಯಾಗಿತ್ತು. ಅವರು ಬೇಲಸರ ಪಂಚಾಯತಿಯ ಸರಪಂಚರಾಗಿದ್ದರು. ಈ ಹತ್ಯೆಯ ಪ್ರಕರಣದಲ್ಲಿ ವಿಮಲ್ ಯಾದವ್ ಪ್ರಮುಖ ಸಾಕ್ಷಿದಾರರಾಗಿದ್ದರು. ಈ ಪ್ರಕರಣದ ವಿಚಾರಣೆ ತ್ವರಿತ ನ್ಯಾಯಾಲಯದಲ್ಲಿ ನಡೆದಿತ್ತು, ಅದರಲ್ಲಿ ವಿಮಲ್ ಯಾದವ್ ಅವರ ಸಾಕ್ಷ್ಯವನ್ನು ದಾಖಲಿಸಿಕೊಳ್ಳುವವರಿದ್ದರು. ಈ ಕಾರಣಕ್ಕಾಗಿಯೇ ಅವರನ್ನು ಹತ್ಯೆ ಮಾಡಲಾಗಿದೆ ಎಂದು ಕುಟುಂಬದವರು ಆರೋಪಿಸಿದ್ದಾರೆ. ಪೊಲೀಸರು ವಿಮಲ್ ಯಾದವ್ ಹತ್ಯೆಯ ತನಿಖೆಯನ್ನು ನಡೆಸುತ್ತಿದ್ದಾರೆ. ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಇವರು ಯಾದವ್ ರ ಹತ್ಯೆಗೆ ಸಂತಾಪ ಸೂಚಿಸಿದ್ದಾರೆ.

1. ವಿಮಲ್ ಯಾದವ್ ಇವರ ಕುಟುಂಬಸ್ಥರು, ಗಬ್ಬು ಯಾದವ್ ಹತ್ಯೆಗೆ ಸಂಬಂಧಿಸಿದಂತೆ ಸುಪೌಲ್ ಜೈಲಿನಲ್ಲಿ ಬಂಧಿತನಾಗಿರುವ ರೂಪೇಶ್ ಇವನು ವಿಮಲ್ ಹತ್ಯೆಗೆ ಸಂಚು ರೂಪಿಸಿದ್ದು, ಮತ್ತು ಅವನು ಜೈಲಿನಿಂದಲೇ ಕೊಲೆಗೆ ಸುಪಾರಿ ನೀಡಿದ್ದಾನೆ ಎಂದು ಆರೋಪಿಸಿದ್ದಾರೆ. ರೂಪೇಶನಿಗೆ ವಿಮಲರವರ ಸಾಕ್ಷ್ಯದ ನಂತರ ಆತನಿಗೆ ಜೀವಾವಧಿ ಶಿಕ್ಷೆಯಾಗುವ ಸಾಧ್ಯತೆಯಿದೆ ಎಂದು ಭಯವಿತ್ತು. ಅದಕ್ಕಾಗಿಯೇ ಅವನು ವಿಮಲನ ಹತ್ಯೆಗೆ ಸಂಚು ರೂಪಿಸಿದ್ದಾನೆ ಎಂದು ಹೇಳಿದ್ದಾರೆ.

2. ಕುಟುಂಬಸ್ಥರು, ವಿಮಲ್ ಯಾದವ್ ಅವರಿಗೆ ಯಾವಾಗಲೂ ಅವರ ಕೊಲೆಯಾಗುವ ಬಗ್ಗೆ ಭಯವಿತ್ತು. ಈ ಕಾರಣಕ್ಕಾಗಿಯೇ ಅವರು ಪಿಸ್ತೂಲು ಹೊಂದಲು ಪರವಾನಿಗೆಗಾಗಿ ಹಲವು ಬಾರಿ ಅರ್ಜಿ ಸಲ್ಲಿಸಿದ್ದರು; ಆದರೆ ಅವರಿಗೆ ಪರವಾನಗಿ ಸಿಕ್ಕಿರಲಿಲ್ಲ. (ಇದು ಬಿಹಾರದ ಆಡಳಿತದ ತತ್ಪರತೆ! ಬಿಹಾರ ಆಡಳಿತ ನಾಗರಿಕರನ್ನು ತಾವೂ ರಕ್ಷಿಸುವುದಿಲ್ಲ ಮತ್ತು ಅವರಿಗೂ ಹಾಗೆ ಮಾಡಲು ಬಿಡುವುದಿಲ್ಲ ಎಂದು ನಿರ್ಧರಿಸಿರುವಂತೆ ಇದರಿಂದ ಗಮನಕ್ಕೆ ಬರುತ್ತದೆ ! – ಸಂಪಾದಕರು)

ಸಂಪಾದಕೀಯ ನಿಲುವು

ಜನತಾ ದಳ (ಸಂಯುಕ್ತ) ಮತ್ತು ಆರ್.ಜೆ.ಡಿ ಅಧಿಕಾರದಲ್ಲಿರುವ ಬಿಹಾರದಲ್ಲಿ ಗೂಂಡಾಗಳ ಆಡಳಿತವಿದೆಯೇ ಹೊರತು ಕಾನೂನಿನ ಆಡಳಿತವಿಲ್ಲ ಎನ್ನುವುದು ಇಂತಹ ಘಟನೆಗಳಿಂದ ಗಮನಕ್ಕೆ ಬರುತ್ತದೆ ! ಎಲ್ಲಿ ಪತ್ರಕರ್ತರು ಸುರಕ್ಷಿತ ಇಲ್ಲ ಅಲ್ಲಿ ಸಾಮಾನ್ಯ ನಾಗರಿಕರು ಹೇಗೆ ಸುರಕ್ಷಿತವಾಗಿರಬಲ್ಲರು?