ಹಿಂದುತ್ವನಿಷ್ಠ ಜಾಲತಾಣದಲ್ಲಿ ‘ಆಪ್ ಇಂಡಿಯಾ’ದಿಂದ ಮಾಹಿತಿ !
ನವ ದೆಹಲಿ – ‘ಭಗವಾ ಲವ್ ಟ್ರಾಪ್’ ಈ ಹೆಸರಿನಲ್ಲಿ ಹಿಂದೂ ಪುರುಷ ಮತ್ತು ಮುಸಲ್ಮಾನ ಮಹಿಳೆಯ ವಿವಾಹಿತ ಜೋಡಿಗಳು ಅಥವಾ ಅವರಲ್ಲಿನ ಪ್ರೇಮ ಪ್ರಕರಣಗಳು ಹುಡುಕಿ ತೆಗೆದು ಅವರ ಮೇಲೆ ದಾಳಿ ಮಾಡುವುದಕ್ಕಾಗಿ ಮತಾಂಧ ಮುಸಲ್ಮಾನರಿಂದ ಪೂರ್ವ ನಿಯೋಜಿತ ಹಿಂಸಾಚಾರ ಮಾಡಲಾಗುತ್ತಿತ್ತು. ಸಂಬಂಧಪಟ್ಟ ಮುಸಲ್ಮಾನ ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ ಕೂಡ ಮಾಡಲಾಗುತ್ತಿತ್ತು ಹಾಗೂ ಸಾರ್ವಜನಿಕವಾಗಿ ಆಕೆಯನ್ನು ಅವಮಾನಿಸಲಾಗುತ್ತಿತ್ತು. ‘ಅಪ ಇಂಡಿಯಾ’ ಈ ಹಿಂದುತ್ವನಿಷ್ಠ ಜಾಲತಾಣವು ಈ ಕುರಿತಾದ ಆಘಾತಕಾರಿ ವಿಷಯ ಬಹಿರಂಗಗೊಳಿಸಿದೆ. ಈ ಜಾಲತಾಣವು, ಕಳೆದ ಕೆಲವು ತಿಂಗಳಲ್ಲಿ ಇಂತಹ ೫೦ ಕೂಹೆಚ್ಚಿನ ಘಟನೆಗಳು ದೊರೆತಿವೆ ಎಂದು ದಾವೆ ಮಾಡಿದೆ. ಇದರಲ್ಲಿ ಹಿಂದೂ ಪುರುಷ ಮತ್ತು ಮುಸಲ್ಮಾನ ಮಹಿಳೆ ಇವರು ಪರಸ್ಪರ ಪ್ರೀತಿಸುತ್ತಿದ್ದಾರೆ ಮತ್ತು ಅವರ ಮೇಲೆ ದಾಳಿ ನಡೆಯುತ್ತಿದೆ.
೧. ‘ಆಪ್ ಇಂಡಿಯಾ’ ಪ್ರಕಾಶಿತಗೊಳಿಸಿರುವ ವಾರ್ತೆಯಲ್ಲಿ, ಹಿಂದುಗಳು ಎಂದಿಗೂ ತಮ್ಮ ಗುರುತು ಮರೆಮಾಚಿ ಯಾರನ್ನು ಪ್ರೀತಿಯ ಬಲೆಗೆ ಸಿಲುಕಿಸುವುದಿಲ್ಲ. ಹೀಗೆ ಇರುವಾಗ ‘ಭಗವಾ ಲವ್ ಟ್ರಾಪ್’ ಎಂಬ ಕಾಲ್ಪನಿಕ ಹೆಸರಿನಲ್ಲಿ ವಾಟ್ಸಾಪ್ ಗುಂಪಿನ ಮೂಲಕ ಮುಸಲ್ಮಾನರನ್ನು ಪ್ರಚೋದಿಸಲಾಯಿತು.
೨. ‘ಆಪ್ ಇಂಡಿಯಾ’, ‘ಬಹನ್ ಬೇಟಿ ಬಚಾವೋ’ ಹೆಸರಿನ ಒಂದು ವಾಟ್ಸಾಪ್ ಗುಂಪಿನಲ್ಲಿ ಕೆಲವು ಪಾಕಿಸ್ತಾನಿ ಜನರು ಸಹಭಾಗಿಯಾಗಿದ್ದಾರೆ. ಈ ಗುಂಪಿನ ವಿವರಣೆಯಲ್ಲಿ, ‘ಕೇಸರಿ ಭಯೋತ್ಪಾದನೆಯಿಂದ ನಿಮ್ಮ ಸಹೋದರಿಯರನ್ನು ಮತ್ತು ಹುಡುಗಿಯರನ್ನು ರಕ್ಷಣೆ ಮಾಡುವುದಕ್ಕಾಗಿ ಏನು ಮಾಡಬೇಕು, ಇದರ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ ಎಂದು ಬರೆಯಲಾಗಿತ್ತು. ಗುಂಪಿನ ‘ಡಿಸ್ಪ್ಲೇ ಫೋಟೋ’ ಮೇಲೆ ಕಳೆದ ವರ್ಷ ಕರ್ನಾಟಕದಲ್ಲಿ ನಡೆದಿರುವ ಹಿಜಾಬ್ ವಿವಾದದ ಪ್ರಕರಣದಲ್ಲಿ ಹುಬ್ಬಳ್ಳಿಯಲ್ಲಿ ಹಿಂದುಗಳೆದರು ‘ಅಲ್ಲಾಹು ಅಕ್ಬರ್’ನ ಘೋಷಣೆ ನೀಡುವ ಬುರ್ಖಾಧಾರಿ ವಿದ್ಯಾರ್ಥಿನಿ ಮುಸ್ಕಾನ್ ಇವಳ ಛಾಯಾಚಿತ್ರವಿದೆ. ಈ ಗುಂಪು ಮೊದಲು ಕೇವಲ ಮಹಾರಾಷ್ಟ್ರಕ್ಕೆ ಸೀಮಿತವಾಗಿತ್ತು. ಈಗ ಅದು ಸಂಪೂರ್ಣ ಭಾರತದಲ್ಲಿ ಕಾರ್ಯನಿರತವಾಗಿದೆ. ಈ ಗುಂಪಿನಲ್ಲಿ ಅನೇಕ ಪ್ರಚೋದನೆಕಾರಿ ವಿಡಿಯೋಗಳು ಪೋಸ್ಟ್ ಮಾಡುತ್ತಾರೆ.
೩. ಈ ಗುಂಪಿನಲ್ಲಿ ಪ್ರಸಾರ ಮಾಡಿರುವ ಒಂದು ಪೋಸ್ಟನಲ್ಲಿ, ಭಾರತದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ ಪ್ರತಿ ವರ್ಷ ೧೦ ಲಕ್ಷ ಮುಸಲ್ಮಾನ ಹುಡುಗಿಯರನ್ನು ಹಿಂದೂ ಮಾಡುತ್ತಾರೆ. ಮಹಾರಾಷ್ಟ್ರದಲ್ಲಿನ ಅಮರಾವತಿ ನಗರದಲ್ಲಿ ೮೦೦ ಮುಸಲ್ಮಾನ ಮಹಿಳೆಯರು ಮತಾಂತರಗೊಳಿಸಿ ಅವರ ವಿವಾಹ ಮಾಡಲಾಗಿದೆ. (ಇಂತಹ ಮಾಹಿತಿ ಪ್ರಸಾರಿತಗೊಳಿಸಿ ಹಿಂದುತ್ವನಿಷ್ಠ ಸಂಘಟನೆಗಳನ್ನು ಕಳಂಕಿತಗೊಳಿಸುವ ಮತಾಂಧ ! – ಸಂಪಾದಕರು)
೪. ಈ ಗುಂಪಿನಲ್ಲಿ ಹಿಂದೂ ಪುರುಷ ಮತ್ತು ಮುಸಲ್ಮಾನ ಮಹಿಳೆ ಇವರ ಮಾಹಿತಿ ಪ್ರಸಾರ ಮಾಡಿ ಅವರ ಮೇಲೆ ದಾಳಿ ಮಾಡುವ ಯೋಜನೆ ರೂಪಿಸಲಾಗುತ್ತದೆ. ಈ ಗುಂಪಿನಲ್ಲಿ ಮಾಹಿತಿ ಆಕ್ರಮಣಕಾರಿ ಮುಸಲ್ಮಾನರಿಗೆ ನೀಡಲಾಗುತ್ತದೆ. ಅವರು ಇಬ್ಬರೂ ಪುರುಷ ಮತ್ತು ಮಹಿಳೆಯನ್ನು ಗುರುತಿಸಿ ಯೋಗ್ಯ ಸಮಯ ನೋಡಿ ಅವರ ಮೇಲೆ ದಾಳಿ ಮಾಡುತ್ತಾರೆ.
೫. ವಾಹಿದ್ ಎಂಬ ಒಬ್ಬ ಮುಸಲ್ಮಾನನು ಈ ಗುಂಪಿನಲ್ಲಿ ಒಂದು ವಿಡಿಯೋ ಪೋಸ್ಟ್ ಮಾಡಿದ್ದನು. ಅದರಲ್ಲಿ ಹಿಂದೂ ಪುರುಷ ಮತ್ತು ಮುಸಲ್ಮಾನ ಮಹಿಳೆಯ ಮಾಹಿತಿ ಹೇಗೆ ಹುಡುಕುವುದು, ಇದರ ಬಗ್ಗೆ ಹೇಳಲಾಗಿತ್ತು. ಈ ವಿಡಿಯೋದಲ್ಲಿ ವಿಶೇಷ ವಿವಾಹ ಕಾನೂನು – ೧೯೫೪ ರ ಅಂತರ್ಗತ ನಡೆದಿರುವ ವಿವಾಹದ ಸವಿಸ್ತಾರ ಮಾಹಿತಿ ಮಹಾರಾಷ್ಟ್ರ ಸರಕಾರದ ಜಾಲತಾಣದಿಂದ ಪಡೆಯಬಹುದು, ಎಂದು ಹೇಳಲಾಗಿದೆ. ಇದರಿಂದ ಮಾಹಿತಿ ಪಡೆದು ಮತಾಂಧ ಮುಸಲ್ಮಾನ ಸಂಬಂಧಿತ ಜೋಡಿಗಳನ್ನು ಗುರಿ ಮಾಡುತ್ತಾರೆ.
೬. ‘ಬಹನ್ ಬೇಟಿ ಬಚಾವೋ’ ಈ ಗುಂಪು ವಾಟ್ಸಾಪ್ನಲ್ಲಿ ‘ಇಸ್ಲಾಮಿಕ್ ಹಿಸ್ಟರಿ’ ಮತ್ತು ‘ಓನ್ಲಿ ಇಸ್ಲಾಮಿಕ್ ಗ್ರೂಪ್ ಲಿಂಕ್ಸ್’ ಇಂತಹ ಮುಸಲ್ಮಾನರ ಇತರ ಗುಂಪುಗಳ ಜೊತೆಗೆ ಸಮನ್ವಯ ಮಾಡುತ್ತದೆ.
೭. ಫೇಸ್ ಬುಕ್ ನಲ್ಲಿ ಮುಸಲ್ಮಾನ ಮಹಿಳೆಯರ ಹೆಸರಿನಲ್ಲಿ ಖಾತೆ ತೆರೆದು ಹಿಂದೂ ಪುರುಷರನ್ನು ಅವರ ಕಡೆಗೆ ಆಕರ್ಷಿತಗೊಳಿಸುವ ಪ್ರಯತ್ನ ಕೂಡ ಮಾಡಲಾಗುತ್ತದೆ. ಇದರಲ್ಲಿ ‘ಮುಸಲ್ಮಾನ ಹುಡುಗಿಯರ ಗುಂಪಿಗೆ ಜೋಡಿಸಿ ಈ ರೀತಿಯ ಗುಂಪು ತಯಾರಿಸಲಾಗಿದ್ದೂ ಅದರಲ್ಲಿ ೨೦ ಲಕ್ಷ ಸದಸ್ಯರಿದ್ದಾರೆ.
Exclusive: WhatsApp group by Islamists used to coordinate attacks on Hindu-Muslim couples in the name of ‘Bhagwa love trap’, members also include Pakistanishttps://t.co/zZGc29ylfp
— OpIndia.com (@OpIndia_com) August 16, 2023
ಸಂಪಾದಕರ ನಿಲುವು* ಹಿಂದುಗಳೇ, ಲವ್ ಜಿಹಾದ್ ನ ವಾಸ್ತವೀಕತೆಯ ಷಡ್ಯಂತ್ರದ ವಿರುದ್ಧ ಮತಾಂಧ ಮುಸಲ್ಮಾನರು ಯಾವ ರೀತಿಯ ಕಥಾವಸ್ತು ರಚಿಸಿ ಹಿಂದೂ ಪುರುಷರನ್ನು ಖಲನಾಯಕರನ್ನಾಗಿ ಮಾಡುತ್ತಿದ್ದಾರೆ ಇದನ್ನು ತಿಳಿದುಕೊಳ್ಳಿ ! * ಕಳೆದ ಕೆಲವು ತಿಂಗಳಿಂದ ವಿವಾಹಿತ ಅಥವಾ ಅವಿವಾಹಿತ ಹಿಂದೂ ಪುರುಷ ಮತ್ತು ಮುಸಲ್ಮಾನ ಮಹಿಳೆ ಇವರ ಮೇಲೆ ಮುಸಲ್ಮಾನರಿಂದ ನಿರಂತರವಾಗಿ ದಾಳಿ ನಡೆಯುತ್ತಿರುವ ಘಟನೆಗಳು ಬೆಳಕಿಗೆ ಬರುತ್ತಿವೆ. ಇದರ ಹಿಂದೆ ಪೂರ್ವನಿಯೋಜಿತ ಷಡ್ಯಂತ್ರ ಇದೆಯೇ, ಇದರ ಬಗ್ಗೆ ‘ಸನಾತನ ಪ್ರಭಾತ’ ಕೂಡ ಅನುಮಾನ ವ್ಯಕ್ತಪಡಿಸಿತ್ತು. ‘ಆಪ್ ಇಂಡಿಯಾ’ ಈ ಹಿಂದೂ ವಿರೋಧಿ ಷಡ್ಯಂತ್ರದ ಕೃತ್ಯ ಬಹಿರಂಗಪಡಿಸಿದ್ದರಿಂದ ಅಭಿನಂದನೆಗಳು ! ಈ ಷಡ್ಯಂತ್ರದ ವಿರುದ್ಧ ಕೂಡ ಈಗ ಸರಕಾರ ಕ್ರಮ ಕೈಗೊಳ್ಳುವುದು ಅವಶ್ಯಕ ! |