ಮುಂಬಯಿ, ಆಗಸ್ಟ್ ೧೭ (ವಾರ್ತೆ.) – ೧೯೪೭ ರಲ್ಲಿ ಭಾರತದ ವಿಭಜನೆಯಾಗಿ ಪಾಕಿಸ್ತಾನದ ನಿರ್ಮಾಣವಾಗಿರುವ ಸಮಯದಲ್ಲಿನ ಭಾರತೀಯರ ನರಸಂಹಾರದ ಭೀಕರತೆಯನ್ನು ತೋರಿಸುವ ಚಿತ್ರ ಪ್ರದರ್ಶನ ಮಹಾರಾಷ್ಟ್ರದ ಸಚಿವಾಲಯದಲ್ಲಿ ಹಾಕಲಾಗಿದೆ. ಕೇಂದ್ರ ಸರಕಾರವು ಆಗಸ್ಟ್ ೧೪ ಇದನ್ನು ‘ವಿಭಜನೆ ವಿಭಿಷಿಕಾ ಸ್ಮಾರಕ ದಿನ’ ಎಂದು ಆಚರಿಸುವ ನಿರ್ಣಯ ತೆಗೆದುಕೊಂಡಿತ್ತು. ಇದರ ಹಿನ್ನೆಲೆಯಲ್ಲಿ ಸಚಿವಾಲಯದಲ್ಲಿ ಈ ಪ್ರದರ್ಶನೀಯ ಆಯೋಜನೆ ಮಾಡಲಾಗಿತ್ತು.
ಸಚಿವಾಲಯದಲ್ಲಿನ ವಿವಿಧ ಇಲಾಖೆಯ ಅಧಿಕಾರಿ, ಸಿಬ್ಬಂದಿಗಳು ಹಾಗೂ ಸಚಿವಾಲಯಕ್ಕೆ ಬರುವ ನಾಗರೀಕರು ಈ ಪ್ರದರ್ಶನಿಗೆ ಭೇಟಿ ನೀಡಿ ವಿವರವಾದ ಮಾಹಿತಿ ತಿಳಿದುಕೊಂಡರು. ಭಾರತದ ವಿಭಜನೆಯಿಂದ ಪಾಕಿಸ್ತಾನಕ್ಕೆ ಹೋಗಿರುವ ಸರಿಸುಮಾರು ೬೦ ಲಕ್ಷ ಮುಸಲ್ಮಾನೆತರರಿಗೆ ಭಾರತಕ್ಕೆ ಹಿಂತಿರುಗಬೇಕಾಯಿತು. ಪಂಜಾಬ್, ದೆಹಲಿ ಮುಂತಾದ ಪ್ರದೇಶಗಳಿಂದ ೬೫ ಲಕ್ಷ ಮುಸಲ್ಮಾನರಿಗೆ ಪಾಕಿಸ್ತಾನಕ್ಕೆ ಹೋಗಬೇಕಾಯಿತು. ಪ್ರಧಾನಮಂತ್ರಿ ನರೇಂದ್ರ ಮೋದಿ ಇವರು ‘ದೇಶದ ವಿಭಜನೆಯ ದುಃಖ ಎಂದೂ ಮರೆಯಲು ಸಾಧ್ಯವಿಲ್ಲ, ದ್ವೇಷ ಮತ್ತು ಹಿಂಸಾಚಾರದಿಂದ ಲಕ್ಷಾಂತರ ಬಂಧು ಬಾಂಧವರಿಗೆ ಸ್ಥಳಾಂತರವಾಗಾಗಬೇಕಾಯಿತು, ತಮ್ಮ ಪ್ರಾಣಗಳನ್ನು ಕಳೆದುಕೊಳ್ಳಬೇಕಾಯಿತು’, ಎಂದು ತಮ್ಮ ಭಾವನೆ ವ್ಯಕ್ತಪಡಿಸಿದರು.