ಅನೇಕ ವರ್ಷಗಳಿಂದ ದೇಶದಲ್ಲಿ ಪ್ರತಿವರ್ಷ ‘ಸಸಿ’ಗಳನ್ನು ನೆಡಲಾಗುತ್ತದೆ ಮತ್ತು ಭ್ರಷ್ಟಾಚಾರದ ಪೆಡಂಭೂತವನ್ನು ಪೋಷಿಸಲಾಗುತ್ತದೆ, ಅದರಲ್ಲಿ ಹೆಚ್ಚಿನ ಸಸಿಗಳು ಮರಗಳಾಗುವುದಿಲ್ಲ. ಕಳೆದ ಕೆಲವು ದಶಕಗಳಿಂದ ದೇಶದಲ್ಲಿ ‘ಸಸಿ ನೆಡುವ ಯೋಜನೆ’ಗಳನ್ನು ಹಮ್ಮಿಕೊಳ್ಳಲಾಯಿತು. ಇದನ್ನು ಭ್ರಷ್ಟಾಚಾರ ರಹಿತವಾಗಿ ಮಾಡಿದ್ದರೆ ಇಂದು ಈ ಪರಿಸರ ಸಮಸ್ಯೆ ಉದ್ಭವಿಸುತ್ತಿರಲಿಲ್ಲ. ಸಂಕ್ಷಿಪ್ತವಾಗಿ ಹೇಳುವುದಾದರೆ ಎಲ್ಲಾ ರೀತಿಯ ಮಾಲಿನ್ಯಗಳು ಮನುಷ್ಯರು ಧರ್ಮದಿಂದ ದೂರವಾಗಿರುವುದರ ಪರಿಣಾಮವಾಗಿದೆ. ಭ್ರಷ್ಟಾಚಾರವಾಗಲಿ, ಭೋಗವಾಗಲಿ, ಇವು ಧರ್ಮದಿಂದ ದೂರ ಹೋಗಿರುವುದರ ಪರಿಣಾಮವಾಗಿದೆ. ಆದ್ದರಿಂದ ಎಲ್ಲಾ ದೈಹಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಮಾಲಿನ್ಯಗಳಿಗೆ ಉತ್ತರವು ಧರ್ಮದಲ್ಲಿದೆ. ಎಲ್ಲಾ ರೀತಿಯ ಮಾಲಿನ್ಯವನ್ನು ಹೋಗಲಾಡಿಸಲು ಹಿಂದೂ ಧರ್ಮ ರಾಜ್ಯದ ಸ್ಥಾಪನೆಯು ಅನಿವಾರ್ಯವಾಗಿದೆ. (ಸೌಜನ್ಯ : ಸಾಮಾಜಿಕ ಜಾಲತಾಣ)