ಅರವಿಂದ ಕೇಜ್ರಿವಾಲ್ ಅವರ ವಿಚಾರ ಮತ್ತು ನಡತೆ ಶುದ್ಧವಾಗಿಲ್ಲದ್ದರಿಂದ ಸೋಲು ! – ಅಣ್ಣಾ ಹಜಾರೆ, ಹಿರಿಯ ಸಮಾಜ ಸೇವಕ

ದೆಹಲಿ ವಿಧಾನಸಭಾ ಚುನಾವಣಾ ಫಲಿತಾಂಶಗಳು

ಮುಂಬಯಿ – ಅರವಿಂದ ಕೇಜ್ರಿವಾಲ್ ಅವರ ವಿಚಾರಗಳು ಮತ್ತು ನಡತೆ ಶುದ್ಧವಾಗಿಲ್ಲ; ಅದಕ್ಕಾಗಿಯೇ ಅವರು ಸೋತಿದ್ದಾರೆ. ಅವರ ಜೀವನವು ನಿಷ್ಕಳಂಕವಾಗಿರಲಿಲ್ಲ. ಅವರು ನಮಗಾಗಿ ಏನಾದರೂ ಮಾಡುತ್ತಾರೆ ಎಂದು ಮತದಾರರಿಗೆ ವಿಶ್ವಾಸವಿರಲಿಲ್ಲ. ನಾನು ಅವರಿಗೆ ಪದೇ ಪದೇ ಹೇಳಿದೆ; ಆದರೆ ಅವರು ಕೇಳಲಿಲ್ಲ ಎಂದು ಹಿರಿಯ ಸಮಾಜ ಸೇವಕ ಅಣ್ಣಾ ಹಜಾರೆ ಹೇಳಿದರು. ದೆಹಲಿ ವಿಧಾನಸಭಾ ಚುನಾವಣೆಯ ಫಲಿತಾಂಶಗಳ ಹಿನ್ನೆಲೆಯಲ್ಲಿ ಅವರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

ಅಣ್ಣಾ ಹಜಾರೆ ಮಾತು ಮುಂದುವರೆಸಿ,

1. ದೆಹಲಿಯಲ್ಲಿ ಮದ್ಯದ ಗುತ್ತಿಗೆಯ ಒಪ್ಪಂದಗಳ ಮೂಲಕ ನಡೆದ ಆರ್ಥಿಕ ಹಗರಣದಿಂದ ಅವರ ಅಪಕೀರ್ತಿಯಾಯಿತು. ಒಂದೆಡೆ, ಅರವಿಂದ ಕೇಜ್ರಿವಾಲ ಜನರ ನಡತೆಯ ಬಗ್ಗೆ ಮಾತನಾಡುತ್ತಾರೆ; ಆದರೆ ಮತ್ತೊಂದೆಡೆ, ಮದ್ಯದ ಒಪ್ಪಂದಗಳಲ್ಲಿ ಹಗರಣಗಳಿವೆ ಎಂದು ಜನರಿಗೆ ಅನಿಸುತ್ತಿದೆ.
2. ಅರವಿಂದ ಕೇಜ್ರಿವಾಲ ನನ್ನೊಂದಿಗಿದ್ದಾಗ, ಅವರ ಉದ್ದೇಶಗಳು ಶುದ್ಧವಾಗಿದ್ದವು. ಅವರಿಗೆ ಸಾಮಾಜಿಕ ಮತ್ತು ರಾಷ್ಟ್ರೀಯ ದೃಷ್ಟಿಕೋನವಿತ್ತು. ಆಗ ನನಗೆ, ಅವನು ಒಳ್ಳೆಯ ಕಾರ್ಯಕರ್ತನಾಗಿದ್ದಾನೆ ಎಂದು ಅನಿಸಿತ್ತು; ಆದರೆ ಕಾಲಕ್ರಮೇಣ ನನಗೆ ಅರವಿಂದ ಕೇಜ್ರಿವಾಲ ಸ್ವಾರ್ಥಿ ಎಂದು ತಿಳಿಯಿತು. ಇಂತಹ ಸ್ವಾರ್ಥಿ ಜನರ ಬಗ್ಗೆ ಸಾರ್ವಜನಿಕರು ಜಾಗರೂಕರಾಗಿರಬೇಕು.

3. ಚುನಾವಣೆಯಲ್ಲಿ ಸ್ಪರ್ಧಿಸುವಾಗ ಅಭ್ಯರ್ಥಿಯು ಶುದ್ಧ ನಡವಳಿಕೆ, ವಿಚಾರ, ಕಳಂಕವಿಲ್ಲದ ಜೀವನ ಮತ್ತು ತ್ಯಾಗವನ್ನು ಹೊಂದಿರುವುದು ಮುಖ್ಯವಾಗಿದೆ. ಅಭ್ಯರ್ಥಿಯಲ್ಲಿ ಈ ಗುಣಗಳಿದ್ದರೆ, ಮತದಾರರು ಅವನ ಮೇಲೆ ವಿಶ್ವಾಸವಿಡುತ್ತಾರೆ. ನಾನು ಅವರಿಗೆ ಪದೇ ಪದೇ ಹೇಳುತ್ತಲೇ ಇದ್ದೆ; ಆದರೆ ಅವರ ಗಮನಕ್ಕೆ ಬರಲಿಲ್ಲ ಮತ್ತು ಮದ್ಯ ತೆಗೆದುಕೊಂಡು ಬಂದರು. ಮದ್ಯ ಎಂದರೆ ಸಂಪತ್ತಿನೊಂದಿಗೆ ಸಂಬಂಧವಾಯಿತು.

4. ಜಾಗರೂಕ ಮತದಾರ ಪ್ರಜಾಪ್ರಭುತ್ವದ ಅಡಿಪಾಯವಾಗಿದೆ ಮತ್ತು ಇಂದಿನ ಮತದಾರ ಜಾಗೃತನಾಗಿದ್ದಾನೆ. ಅವರೆಲ್ಲರೂ ಈ ಜನರು ಮದ್ಯದ ವಿಚಾರ ಮಾಡುತ್ತಿರುವುದನ್ನು ನೋಡಿದರು. ಮದ್ಯ ಕಣ್ಣೆದುರಿಗೆ ಬಂದಾಗ ಹಣ, ಸಂಪತ್ತು ಮತ್ತು ದೌಲತ್ತು ಬಂದಿತು. ನಂತರ ಎಲ್ಲವೂ ಕೆಡಿಸಿತು ಮತ್ತು ಪರಿಣಾಮವಾಗಿ, ಜನರು ಅವರಿಗೆ ಸರಿಯಾಗಿ ಬುದ್ಧಿ ಕಲಿಸಿದರು. ಈ ರೀತಿ ವರ್ತಿಸುವ ಜನರು ಅಧಿಕಾರಕ್ಕೆ ಬಂದರೆ ದೇಶ ಮತ್ತು ದೆಹಲಿ ನಾಶವಾಗುತ್ತದೆ ಎಂಬ ಕಾರಣಕ್ಕೆ ಮತದಾರರು ಅವರನ್ನು ತಿರಸ್ಕರಿಸಿದರು.

5. ಅವನು ನನ್ನ ಜೊತೆ ಬಂದಾಗಲೇ, ಜನರ ಸೇವೆ ಮಾಡುವಂತೆ ನಾನು ಅವನಿಗೆ ಹೇಳಿದ್ದೆ. ಸೇವೆಯ ಅರ್ಥ ‘ನಿಷ್ಕಾಮ ಕರ್ಮ’ವಾಗಿದೆ. ಯಾವುದೇ ಫಲಾಪೇಕ್ಷೆ ಇಲ್ಲದೆ ಮಾಡುವ ಕರ್ಮವು ದೇವರ ಪೂಜೆಯಾಗಿದೆ. ಹೀಗೆ ಪೂಜೆ ಮಾಡುತ್ತಲೇ ಇರಿ, ಯಾರೂ ನಿಮ್ಮನ್ನು ದೂರ ಮಾಡುವುದಿಲ್ಲ’, ಎಂದು ಹೇಳಿದ್ದೆನು.