ಪಾಕಿಸ್ತಾನದಲ್ಲಿ ರಾಜಕೀಯ ಅವ್ಯವಸ್ಥೆ!

ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಗೆ ೩ ವರ್ಷ ಜೈಲು ಶಿಕ್ಷೆ

ಪಾಕಿಸ್ತಾನದ ಇತಿಹಾಸವನ್ನು ಅವಲೋಕಿಸಿದರೆ ಅದು ಸೇನಾಹಸ್ತಕ್ಷೇಪದಿಂದ ಅಧಿಕಾರ ಹಸ್ತಾಂತರ, ಹತ್ಯೆ, ಅಸ್ಥಿರತೆ ಮತ್ತು ತೀವ್ರ ರಾಜಕೀಯ ಹಗೆತನಗಳಿಂದ ತುಂಬಿದೆ. ನಿರಂತರವಾಗಿ ಭಾರತವನ್ನು ದ್ವೇಷಿಸುವ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರಿಗೆ ಇತ್ತೀಚೆಗೆ ‘ತೋಶಾಖಾನಾ’ ಪ್ರಕರಣದಲ್ಲಿ ೩ ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಲಾಗಿದೆ. ಇದೀಗ ಇಮ್ರಾನ್ ಖಾನ್ ರಿಗೆ ಜೈಲಿನಲ್ಲಿರುವಾಗ ಅಸ್ವಸ್ಥತೆ ಎನಿಸುತ್ತಿದೆ. ಇಮ್ರಾನ್ ಖಾನ್ ರ ವಿರುದ್ಧ ಡಜನ್ ಗಟ್ಟಲೆ ಅಪರಾಧಗಳು ದಾಖಲಾಗಿವೆ. ವಿರೋಧಿಗಳು ಅದನ್ನೇ ಬಂಡವಾಳ ಮಾಡಿಕೊಂಡರು. ಪ್ರಧಾನಮಂತ್ರಿಯಾಗಿದ್ದಾಗ ಅವರು ಪಡೆದ ದುಬಾರಿ ಉಡುಗೊರೆಗಳನ್ನು ಸರ್ಕಾರದ ಖಜಾನೆಗೆ (ತೋಶಾಖಾನಾ) ಜಮೆ ಮಾಡದೆ ಅವುಗಳನ್ನು ಮಾರಾಟ ಮಾಡಿ ಭ್ರಷ್ಟಾಚಾರ ಎಸಗಿದ್ದಾರೆ ಎನ್ನುವ ಆರೋಪ ಅವರ ಮೇಲೆ ಇತ್ತು. ಇಲ್ಲಿಯವರೆಗೆ ಪಾಕಿಸ್ತಾನದಲ್ಲಿ ಸೇನೆಯ ವಿರುದ್ಧ ನಿಲುವು ಅಥವಾ ನಿರ್ಣಯಗಳನ್ನು ತೆಗೆದುಕೊಳ್ಳುವ ನಾಯಕರು ಅಥವಾ ಪ್ರಧಾನಮಂತ್ರಿಗಳು ಒಂದೋ ಅಧಿಕಾರದಿಂದ ಕೆಳಗಿಳಿಯುತ್ತಾರೆ ಅಥವಾ ಅವರಿಗೆ ಭ್ರಷ್ಟಾಚಾರದ ಕಾರಣದಿಂದ ಶಿಕ್ಷೆಗೆ ಗುರಿಯಾಗುತ್ತಾರೆ ಇದು ಖಚಿತವಾಗಿದೆ. ಅದೇ ರೀತಿ ಖಾನ್ ಅವರ ಶಿಕ್ಷೆಯಾಗುವುದರ ಹಿಂದೆ ಅಲ್ಲಿನ ಸರ್ವಶಕ್ತ ಸೇನೆಯ ಕೈವಾಡವಿದೆ. ಅಧಿಕಾರದಿಂದ ಹೊರದೂಡಲ್ಪಟ್ಟ ನಂತರ, ಇಮ್ರಾನ್ ಖಾನ್ ‘ಲಾಂಗ್ ಮಾರ್ಚ್’ ನಡೆಸಿ ಶಾಹಬಾಜ್ ಷರೀಫ್ ಮತ್ತು ಸೇನೆಯ ವಿರುದ್ಧ ಸಾರ್ವಜನಿಕರಲ್ಲಿ ಆಕ್ರೋಶವನ್ನು ವ್ಯಕ್ತಪಡಿಸಿದ್ದರು.

ಇದುವರೆಗೆ ಪಾಕಿಸ್ತಾನದಲ್ಲಿ ಜುಲ್ಫಿಕಾರ್ ಅಲಿ ಭುಟ್ಟೊ ಅವರಿಂದ ಹಿಡಿದು ಅವರ ಪುತ್ರಿ ಬೆನಜೀರ್ ಭುಟ್ಟೊವರೆಗೆ, ನವಾಜ್ ಷರೀಫ್‌ರಿಂದ ಶಾಹಿದ್ ಖಾನ್ ಅಬ್ಬಾಸಿವರೆಗೆ ಅನೇಕ ಹಾಲಿ-ಮಾಜಿ ಪ್ರಧಾನಮಂತ್ರಿಗಳಿಗೆ ಕಠಿಣ ಶಿಕ್ಷೆ ವಿಧಿಸಿ, ರಾಜಕೀಯ ಕ್ಷೇತ್ರದಿಂದ ಹೊರದೂಡುವ ಪ್ರಕರಣ ಅಲ್ಲಿ ನಿಯಮಿತವಾಗಿ ನಡೆಯುತ್ತ ಬಂದಿದೆ. ಜುಲ್ಫಿಕರ್ ಅಲಿ ಭುಟ್ಟೊ ಅವರನ್ನಂತೂ ಗಲ್ಲಿಗೇರಿಸಲಾಯಿತು. ಸೇನೆ ನೀಡಿದ ತೊಂದರೆಯಿಂದ ಬೆನಜೀರ್ ಭುಟ್ಟೊ ಅಥವಾ ನವಾಜ್ ಷರೀಫ್ ದೇಶ ಬಿಟ್ಟು ಓಡಿ ಹೋಗಿದ್ದರು. ಪರ್ವೇಜ್ ಮುಷರಫ್ ಅವರಂತಹ ಮಾಜಿ ಸೇನಾ ಮುಖ್ಯಸ್ಥರಿಗೂ ಓಡಿಹೋಗಬೇಕಾದ ಪರಿಸ್ಥಿತಿ ಎದುರಾಯಿತು. ಹಾಗಾಗಿ ಇಮ್ರಾನ್ ಖಾನ್ ಅವರ ವಿಷಯದಲ್ಲಿ ಈಗ ಏನಾಗುತ್ತಿದೆಯೋ ಅದರಲ್ಲಿ ಆಶ್ಚರ್ಯವೇನಿಲ್ಲ. ಸ್ವತಃ ಸೈನ್ಯವೇ ಖಾನ್ ರನ್ನು ಬೆಳೆಸಿತ್ತು. ಆ ಸಮಯದಲ್ಲಿ ತಲೆಭಾರವಾಗಿದ್ದ ನವಾಜ್ ಷರೀಫ್ ರ ವಿರುದ್ಧ ಸೇನೆಯು ಹೊಸ ನಾಯಕನನ್ನು ಬಯಸಿತ್ತು. ಆಗ ಅದಕ್ಕೆ ಇಮ್ರಾನ್ ಖಾನ್ ರೂಪದಲ್ಲಿ ಸಿಕ್ಕಿತು. ಆದರೆ ಖಾನ್ ಇವರು ಸೇನಾ ವೆಚ್ಚವನ್ನು ಕಡಿಮೆ ಮಾಡಲು ನಿರ್ಧರಿಸಿದರು. ಇದರ ಪರಿಣಾಮವಾಗಿ ಸೇನೆಯ ಭಾರ ಪ್ರತಿಪಕ್ಷಗಳ ತಕ್ಕಡಿಗೆ ಬಿದ್ದಿತು ಮತ್ತು ಅವರು ಅವಿಶ್ವಾಸ ಗೊತ್ತುವಳಿ ಮಂಡಿಸಿ ಇಮ್ರಾನ್ ಖಾನ್ ಅವರನ್ನು ಕೆಳಗಿಳಿಸಿದರು. ಸೇನೆಗೆ ಬೇಡವಾದ ನಿಲುವು ತಳೆದಿದ್ದಕ್ಕಾಗಿ ಖಾನ್ ಅವರನ್ನು ತೆಗೆದುಹಾಕಲಾಯಿತು. ರಾಜಕೀಯ ನಾಯಕರನ್ನು ಸರ್ವಾಧಿಕಾರಿಯಂತೆ ಕುಣಿಸುವ ಸೇನೆಯ ನಿಲುವು ಮುಂದುವರಿದಿದೆ. ಪಾಕಿಸ್ತಾನಕ್ಕೆ ಅಪಘಾತಗಳು, ಸೇನೆಯ ದಂಗೆ ಹೊಸದಲ್ಲ, ರಾಜಕೀಯ ನಾಯಕರ ಬಂಧನ, ಅವರ ಹತ್ಯೆಯಾಗುವುದು ಮತ್ತು ಅದರಿಂದ ಸೇಡಿನ ರಾಜಕಾರಣ ರಂಗೇರುವುದು ಇದೂ ಹೊಸದಲ್ಲ. ಇಮ್ರಾನ್ ಖಾನ್ ಬಂಧನದ ಬಳಿಕ, ಪಾಕಿಸ್ತಾನದಲ್ಲಿ ಹಿಂಸಾಚಾರ ಮತ್ತು ಅಗ್ನಿ ಅವಘಡಗಳ ಸರಣಿಗಳಾಗಿ ಅವರ ಬೆಂಬಲಿಗರು ಸೇನಾ ಪ್ರಧಾನ ಕಚೇರಿಯವರೆಗೆ ಮೆರವಣಿಗೆ ನಡೆಸಿದರು. ಒಂದೆಡೆ ಪಾಕಿಸ್ತಾನದಲ್ಲಿ ಬೆಲೆಯೇರಿಕೆ ಉತ್ತುಂಗಕ್ಕೇರಿದೆ. ಜೀವನಾವಶ್ಯಕ ವಸ್ತುಗಳ ಕೊರತೆ ಇದೆ. ಪಾಕಿಸ್ತಾನದ ಆರ್ಥಿಕತೆ ಕುಸಿತದಲ್ಲಿದೆ; ಆದರೆ ಅಲ್ಲಿನ ರಾಜಕೀಯದ ರೂಪುರೇಷೆ ಬದಲಿಸುವ ಮತ್ತು ಆ ದೇಶವನ್ನು ಅಭಿವೃದ್ಧಿಯ ದಿಕ್ಕಿನಲ್ಲಿ ಸಾಗುವ ಯಾವುದೇ ಸಾಧ್ಯತೆ ಇಲ್ಲ ಎಂಬುದು ಇಮ್ರಾನ್ ಖಾನ್ ರ ಶಿಕ್ಷೆಯಿಂದ ಸಾಬೀತಾಗಿದೆ.

ನಿರಂತರವಾಗಿ ನಡೆಯುವ ಭಾರತ ವಿರೋಧಿ ರಾಜಕಾರಣ!

ಮಾಜಿ ಪ್ರಧಾನಮಂತ್ರಿ ಇಮ್ರಾನ್ ಖಾನ್ ಭ್ರಷ್ಟರಷ್ಟೇ ಅಲ್ಲ, ಅವರ ಈಗಿನ ಪತ್ನಿ ಬುಶರಾ ಬೀಬಿ ಮತ್ತು ಇತರ ಪಿಟಿಐ ನಾಯಕರ ಮೇಲೆ ಒಂದು ಆರ್ಥಿಕ ದುರುಪಯೋಗ ಪ್ರಕರಣದಲ್ಲಿ ಸಿಲುಕಿರುವ ಸಂಸ್ಥೆಯನ್ನು ರಕ್ಷಿಸಿರುವ ಪ್ರತಿಯಾಗಿ ಕೊಟ್ಯವಧಿ ರೂಪಾಯಿಗಳ ಲಂಚವನ್ನು ಸ್ವೀಕರಿಸಿದ್ದಾರೆ ಎಂದು ಆರೋಪಿಸಲಾಗಿದೆ. ಪಾಕಿಸ್ತಾನದಲ್ಲಿನ ಈ ಘಟನೆಗಳು ದೇಶದ ರಾಜಕೀಯ, ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಯ ಮೇಲೆ ಗಣನೀಯವಾಗಿ ಪರಿಣಾಮ ಬೀರಿದೆ. ಈ ದೇಶದಲ್ಲಿ ಮೊದಲ ಮಿಲಿಟರಿ ದಂಗೆ ೧೯೫೮ ರಲ್ಲಿ ನಡೆಯಿತು. ಸೇನೆಯು ನೇರವಾಗಿ ಹಸ್ತಕ್ಷೇಪ ನಡೆಸಿತು ಅಥವಾ ಆ ರೀತಿ ನಡೆಯುವಂತೆ ಮಾಡಿತು. ಆಗ ಪಾಕಿಸ್ತಾನದಲ್ಲಿ ಅಧಿಕಾರ ಹಸ್ತಾಂತರದ ಅನೇಕ ಉದಾಹರಣೆಗಳಿವೆ. ಧರ್ಮದ ಹೆಸರಿನಲ್ಲಿ ಭಾರತದಿಂದ ಬೇರ್ಪಟ್ಟ ಪಾಕಿಸ್ತಾನದಲ್ಲಿ ಯಾವತ್ತೂ ಪ್ರಜಾಪ್ರಭುತ್ವ ಬೇರೂರಲೇ ಇಲ್ಲ ಅಥವಾ ಅದನ್ನು ಅಲ್ಲಿ ಬೇರೂರುವಂತೆ ಮಾಡಲೇ ಇಲ್ಲ. ಇದರಿಂದಾಗಿ ಈ ದೇಶವು ಮಿಲಿಟರಿ ಆಡಳಿತವನ್ನು ಅನೇಕ ದಶಕಗಳ ವರೆಗೆ ಅನುಭವಿಸಬೇಕಾಯಿತು. ಅಲ್ಲಿ ರಾಜಕೀಯ ನಾಯಕರ ಹತ್ಯೆಯಂತೂ ಪದ್ಧತಿಯೇ ಆಗಿದೆ. ಇದನ್ನು ಗಮನಿಸಿದರೆ, ಇಮ್ರಾನ್ ಖಾನ್ ಅವರ ಬಂಧನ ಮತ್ತು ೩ ವರ್ಷಗಳ ಶಿಕ್ಷೆಯನ್ನು ಸೌಮ್ಯ ಕ್ರಮವೆಂದು ಹೇಳಬಹುದಾಗಿದೆ. ಈ ಘಟನೆಯಿಂದ ಪಾಕಿಸ್ತಾನದ ರಾಜಕೀಯದಲ್ಲಿ ದ್ವೇಷವನ್ನು ಹೆಚ್ಚಲಿದೆ ಮತ್ತು ಅದರಲ್ಲಿ ಆ ದೇಶದ ಪ್ರಮುಖ ಸಮಸ್ಯೆಗಳು ನಿರ್ಲಕ್ಷಕ್ಕೆ ಒಳಗಾಗುತ್ತಿವೆ. ಪಾಕಿಸ್ತಾನವು ಎಷ್ಟು ವೆಚ್ಚವನ್ನು ಭಯೋತ್ಪಾದಕ ಕೃತ್ಯಗಳು ಮತ್ತು ಭದ್ರತೆಗೆ ವೆಚ್ಚ ಮಾಡಿದೆಯೋ, ಅಷ್ಟು ವೆಚ್ಚವನ್ನು ದೇಶದ ಅಭಿವೃದ್ಧಿಗೆ ಮಾಡಿದ್ದರೆ, ಇಂದು ಪಾಕಿಸ್ತಾನದ ಪರಿಸ್ಥಿತಿ ಬೇರೆಯೇ ಇರುತ್ತಿತ್ತು. ಭಾರತದಲ್ಲಿ ಇಸ್ಲಾಮೋಫೋಬಿಯಾ ಇದೆ, ಮುಸ್ಲಿಮರು ಶೋಷಣೆಗೆ ಒಳಗಾಗಿದ್ದಾರೆ ಎಂದು ಅಣಿಮುತ್ತುಗಳನ್ನು ಅವರೂ ಉದುರಿಸಿದ್ದರು. ಸಂಪೂರ್ಣ ಜಗತ್ತಿನಲ್ಲಿ ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಹೆಸರು ಗಳಿಸಿದ್ದಾರೆ ಅಥವಾ ಭಾರತದ ಕೀರ್ತಿಯನ್ನು ಹರಡಿದ್ದಾರೆ, ಅದರ ತುಲನೆಯಲ್ಲಿ ಇದುವರೆಗೆ ಪಾಕಿಸ್ತಾನದಲ್ಲಿ ಆಗಿರುವ ಯಾವುದೇ ಪ್ರಧಾನಮಂತ್ರಿಗಳು ಹೆಸರನ್ನು ಗಳಿಸಿಲ್ಲ, ಇದಕ್ಕೆ ವಿರುದ್ಧವಾಗಿ ಅವರು ‘ಭಯೋತ್ಪಾದಕ ದೇಶ’ದ ಪ್ರಧಾನಮಂತ್ರಿಯೆಂದು ಬಿರುದು ಗಳಿಸಿದ್ದಾರೆ.!

ಪಾಕಿಸ್ತಾನದಲ್ಲಿ ಅರಾಜಕತೆಯ ಪರಿಸ್ಥಿತಿ ಇರುವುದರಿಂದ ಮತ್ತು ದೇಶದ ಆರ್ಥಿಕತೆಯು ದಿವಾಳಿಯ ಅಂಚಿಗೆ ತಲುಪಿರುವ ಕಾರಣ ಪಾಕಿಸ್ತಾನ ಯಾವಾಗಲೂ ಸೌದಿ ಅರೇಬಿಯಾ, ಚೀನಾ, ರಷ್ಯಾ ಮತ್ತು ಅಮೇರಿಕಾ ದೇಶಗಳಲ್ಲಿ ಭಿಕ್ಷೆ ಬೇಡುತ್ತಾ ಇರುತ್ತದೆ. ಪಾಕಿಸ್ತಾನದಲ್ಲಿ ಯಾರೇ ಅಧಿಕಾರಕ್ಕೆ ಬಂದರೂ ಅವರಿಗೆ ಭಾರತದ ಮೇಲಿನ ದ್ವೇಷ ಹಾಗೆಯೇ ಇರುತ್ತದೆ. ಅವರು ತಮ್ಮ ದೇಶದಲ್ಲಿ ಪ್ರತಿಸ್ಪರ್ಧಿಗಳಾಗುತ್ತಾರೆ; ಆದರೆ ಅಲ್ಲಿನ ಅವರ ರಾಜಕೀಯ ಭಾರತದ ವಿರೋಧದ ಮೇಲೆ ಸಾಗುತ್ತದೆ. ಯಾವುದೇ ದೇಶವು ಕಾನೂನಿನ ಆಡಳಿತ, ಶಾಂತಿ ಮತ್ತು ಸ್ಥಿರತೆ ಇಲ್ಲದೆ ಪ್ರಗತಿ ಸಾಧಿಸಲು ಸಾಧ್ಯವಿಲ್ಲ. ಪಾಕಿಸ್ತಾನ ಶಾಂತಿಯನ್ನು ಕಂಡೇ ಇಲ್ಲ, ಸ್ಥಿರತೆಯು ದೇಶಕ್ಕೆ ಅಲರ್ಜಿಯಂತಾಗಿದೆ. ಇದರಿಂದ ಒಂದು ಕಡೆ, ಆ ದೇಶದೊಂದಿಗೆ ಸ್ವತಂತ್ರಗೊಂಡ ಭಾರತವು ಚಂದ್ರಯಾನ ೩ ಅನ್ನು ಬಾಹ್ಯಾಕಾಶದಲ್ಲಿ ಬಿಟ್ಟು ವಿಶ್ವದ ಸೂಪರ್ ಪವರ್ ಆಗುವತ್ತ ಮುನ್ನಡೆಯುತ್ತಿರುವಾಗ, ಪಾಕಿಸ್ತಾನದಲ್ಲಿ ಇನ್ನೂ ಮನೆತನಗಳು ಮತ್ತು ಸಮುದಾಯಗಳ ವರ್ಚಸ್ಸಿನ ಅನುಗುಣವಾಗಿ ರಾಜಕೀಯದ ಸ್ವರೂಪ ನಿರ್ಧಾರಿತಗೊಳ್ಳುತ್ತದೆ. ಇಂತಹ ದೇಶದ ಜನತೆ ಆಹಾರವಿಲ್ಲದೇ ನರಳುತ್ತಿದ್ದರೂ, ಅಲ್ಲಿನ ರಾಜಕಾರಣಿಗಳು ಅದರ ಬಗ್ಗೆ ಕಿಂಚಿತ್ತೂ ಸಂಬಂಧವಿಲ್ಲದಂತಿರುತ್ತಾರೆ. ಇಮ್ರಾನ್ ಖಾನರನ್ನು ಶಿಕ್ಷಿಸಿದ ಬಳಿಕ ಪಾಕಿಸ್ತಾನದಲ್ಲಿ ಹೊಸ ಅಧ್ಯಾಯ ಪ್ರಾರಂಭವಾಗಬಹುದು; ಆದರೆ ಅದು ಸೇಡಿನ, ದ್ವೇಷದ ಮತ್ತು ದುರುದ್ದೇಶಪೂರಕವಾಗಿರುತ್ತದೆ.
ಜನತೆಯು ಆಹಾರವಿಲ್ಲದೇ ನರಳುತ್ತಿದ್ದರೂ, ಅದರ ಬಗ್ಗೆ ಕಿಂಚಿತ್ತೂ ಸಂಬಂಧವಿಲ್ಲದಂತಿರುವ ಪಾಕಿಸ್ತಾನದ ರಾಜಕೀಯ ಜನಪ್ರತಿನಿಧಿಗಳು