|
ಅಯೋಧ್ಯೆ (ಉತ್ತರಪ್ರದೇಶ) – ಜನವರಿ ೨೦೨೪ ರಂದು ಅಯೋಧ್ಯೆಯಲ್ಲಿನ ರಾಮಲಲ್ಲನ ಮೂರ್ತಿಗಳ ಪ್ರಾಣಪ್ರತಿಷ್ಠೆ ಮಾಡಲಾಗುವುದು, ಅದರಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಸಹಿತ ಅನೇಕ ಗಣ್ಯರು ಭಾಹವಹಿಸುವರು. ಇಂತಹದರಲ್ಲಿ ಅಯೋಧ್ಯೆಯ ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಪಾಕಿಸ್ತಾನದ ಗೂಢಚಾರ ಸಂಘಟನೆ ಐ.ಎಸ್.ಐ. ನ ಏಜೆಂಟ್ ಗಳು, ಭಯೋತ್ಪಾದಕರು ಮತ್ತು ‘ಸ್ಲೀಪರ್ ಸೆಲ್’ (ಅಡಗಿಕೊಂಡು ಭಯೋತ್ಪಾದಕರಿಗೆ ಸಹಾಯ ಮಾಡುವ ಸ್ಥಳೀಯ ಮತಾಂಧರ ಗುಂಪು) ಇವರುಗಳನ್ನು ನಿರಂತರವಾಗಿ ಬಂಧಿಸಲಾಗುತ್ತಿದೆ
೧. ಶ್ರೀರಾಮ ಜನ್ಮಭೂಮಿಯ ತೀರ್ಪು ಬಂದ ನಂತರ ಆಗಸ್ಟ್ ೨೦೨೦ ರಲ್ಲಿ ಬಲರಾಮಪುರದಿಂದ ಒಬ್ಬ ಭಯೋತ್ಪಾದಕನನ್ನು, ೨೦೨೧ ರ ಫೆಬ್ರುವರಿ-ಜುಲೈ ಮತ್ತು ಸಪ್ಟೆಂಬರ್ ನಲ್ಲಿ ಲಕ್ಷ್ಮಣಪುರಿಯಿಂದ ೪ ಭಯೋತ್ಪಾದಕರನ್ನು, ಸೆಪ್ಟೆಂಬ 2021 ರಲ್ಲಿ ಪ್ರಯಾಗರಾಜ್, ರಾಯಬರೆಲಿ ಮತ್ತು ಬಹರಾಯಿಜ್ ನಿಂದ ೩ ಭಯೋತ್ಪಾದಕರು ಮತ್ತು ಗೋರಕಪುರದಿಂದ ೨೦೨೨ ರಲ್ಲಿ ಒಬ್ಬ ಭಯೋತ್ಪಾದಕನನ್ನು ಬಂಧಿಸಲಾಗಿತ್ತು.
೨. ಈಗ ಹೊಸದಾಗಿ ೨೦೨೩ ರಲ್ಲಿ ಉತ್ತರಪ್ರದೇಶ ರಾಜ್ಯ ಉಗ್ರ ನಿಗ್ರಹ ದಳದಿಂದ ಜುಲೈ ೨ ರಂದು ಗೊಂಡಾದಿಂದ ಸದ್ದಾಮ್, ಆಗಸ್ಟ್ ೧ ರಂದು ಮುಕೀಮ್, ಜುಲೈ ೧೬ ರಂದು ರಯಿಸ್ ಹಾಗೂ ಜುಲೈ ೧೮ ರಂದು ಸಲ್ಮಾನ್ ಮತ್ತು ಅರ್ಮಾನ್ ಈ ‘ಐ.ಎಸ್.ಐ. ನ ಏಜೆಂಟ್ ಮತ್ತು ಭಯೋತ್ಪಾದಕರನ್ನು ಬಂಧಿಸಿದ್ದಾರೆ. ಈ ಪ್ರಕರಣದಲ್ಲಿ ಜುಲೈ ೬ ರಂದು ತಾರಿಕ ಎಂಬ ವ್ಯಕ್ತಿಯನ್ನು ಕೂಡ ಗೋರಕಪುರದಿಂದ ಬಂದಿಸಲಾಗಿತ್ತು.
೩. ಈ ಎಲ್ಲಾ ಪ್ರಕರಣದಲ್ಲಿ ‘ಬಾಬ್ರಿ ಢಾಚಾ’ ಈ ಹೆಸರಿನಿಂದ ಭಯೋತ್ಪಾದಕರಿಗೆ ಪ್ರಚೋದಿಸಲಾಗಿದೆ ಎಂದು ಉಗ್ರ ನಿಗ್ರಹ ದಳದ ಪ್ರಾಥಮಿಕ ತನಿಖೆಯಿಂದ ಮಾಹಿತಿ ಬೆಳಕಿಗೆ ಬಂದಿದೆ. ಎಲ್ಲರಿಗೂ ‘ಸ್ಲೀಪರ್ ಸೆಲ್’ ರೀತಿಯ ಪ್ರಶಿಕ್ಷಣ ನೀಡಿದ್ದಾರೆ ಮತ್ತು ಆದೇಶ ದೊರೆತನಂತರ ಅವರು ಕಾರ್ಯನಿರತ ಆಗುವವರಿದ್ದರು.
೪. ಉತ್ತರಪ್ರದೇಶ ರಾಜ್ಯ ಉಗ್ರ ನಿಗ್ರಹ ದಳದ ಒಬ್ಬ ಹಿರಿಯ ಅಧಿಕಾರಿಗಳು, ಬಾಬ್ರಿ ಮಸೀದಿ ನೆಲಸಮ ಮಾಡಿರುವುದಾಗಿ ಹೇಳುತ್ತಾ ಎಲ್ಲರನ್ನು ಪ್ರಚೋದಿಸಲಾಗಿತ್ತು. ಬಾಬ್ರಿ ಮಸೀದಿ ಧ್ವಂಸದ ಸೇಡು ತೀರಿಸಿಕೊಳ್ಳೋದು, ಈ ಜನರ ಧ್ಯೇಯವಾಗಿತ್ತು. ಅಯೋಧ್ಯೆಯ ಹತ್ತಿರ ಈ ಎಲ್ಲರ ಉಪಸ್ಥಿತಿ ಕೆಲವು ಭಯೋತ್ಪಾದಕ ಕಾರಾಸ್ಥಾನದ ಕಡೆಗೆ ಬೊಟ್ಟು ಮಾಡುತ್ತಿದೆ.
೫. ಅಧಿಕಾರಿಗಳು ಮಾತು ಮುಂದುವರಿಸಿ, ಬಾಬ್ರಿ ಮಸೀದಿ ಧ್ವಂಸ ಮಾಡಿದ ನಂತರ ಅಯೋಧ್ಯೆಯಲ್ಲಿನ ಭದ್ರತಾ ವ್ಯವಸ್ಥೆಯು ಉತ್ತರ ಪ್ರದೇಶದಲ್ಲಿನ ಇತರ ಜಿಲ್ಲೆಯ ತುಲನೆಯಲ್ಲಿ ಹೆಚ್ಚು ಬಿಗಿ ಇದೆ. ಅಯೋಧ್ಯೆಯು ಭಯೋತ್ಪಾದಕ ಸಂಘಟನೆಗಳ ಗುರಿಯಾಗಬಹುದು, ಅದು ಪಕ್ಕದ ಗೊಂಡಾ, ಬಲರಾಮಪುರ, ಬಹರಾಯಿಚ, ಬಾರಾಬಂಕಿ, ಗೋರಖಪುರ ಮತ್ತು ಅಂಬೇಡ್ಕರ್ ನಗರ ಈ ಜಿಲ್ಲೆಯಲ್ಲಿ ನುಸಳುತ್ತಿದ್ದಾರೆ. ಭಯೋತ್ಪಾದಕ ಸಂಘಟನೆಯ ‘ಸ್ಲೀಪರ್ ಸೆಲ್’ ನಲ್ಲಿ ವಾಸಿಸುತ್ತಿದ್ದಾರೆ. ೨೦೧೯ ರಿಂದ ಇಲ್ಲಿ ಸತತವಾಗಿ ಐ.ಎಸ್.ಐ.’ನ ಏಜೆಂಟ್ ಗಳು ಪತ್ತೆಯಾಗಿದೆ.
೬. ಅಧಿಕಾರಿಗಳ ಹೇಳಿಕೆಯ ಪ್ರಕಾರ, ಐ.ಎಸ್.ಐ. ಮತ್ತು ಭಯೋತ್ಪಾದಕ ಸಂಘಟನೆಯ ಗುರಿ ಜನೆವರಿ ೨೦೨೪ ರಲ್ಲಿ ಅಯೋಧ್ಯೆಯಲ್ಲಿ ನಡೆಯುವ ಕಾರ್ಯಕ್ರಮ ಆಗಿದೆ.
अयोध्या के आसपास के जिलों से लगातार ISI एजेंट्स, आतंकी और स्लीपर सेल मेंबर्स के मिलने से सुरक्षा एजेंसियों की चिंता बढ़ी; जमीनी हकीकत जानने के लिए पढ़ें स्पेशल रिपोर्ट https://t.co/AeHVNLkCJq #UttarPradesh #Rammandir #Ayodhya #groundreport By @kunwarjourno
— Dainik Bhaskar (@DainikBhaskar) August 16, 2023
ಭಯೋತ್ಪಾದಕ ಸದ್ದಾಮ ಶೇಖ ಮೂಲತಃ ಹಿಂದೂ,ಮುಸಲ್ಮಾನನಾಗಿ ‘ಲವ್ ಜಿಹಾದ್’ ಮಾಡಿದ !
ಲಕ್ಷ್ಮಣಪುರಿ ಇಂದ ಬಂಧಿಸಿರುವ ಸದ್ದಾಮ ಶೇಖ ಈ ಭಯೋತ್ಪಾದಕ ಅಲ್ ಕಾಯ್ದ, ಹಿಜಬುಲ್ ಮುಜಾಹಿದ್ದಿನ್ ಮತ್ತು ‘ಅನ್ಸಾರ್ ಗಜವಾತುಲ್ ಹಿಂದ’ ಇವುಗಳೊಂದಿಗೆ ಸಂಬಂಧ ಇರುವುದು ಎಂದು ಬೆಳಕಿಗೆ ಬಂದಿದೆ. ಅವನ ಪತ್ನಿ ರುಬಿನ, ಸದ್ದಾಮ್ ಹಿಂದೆ ಹಿಂದೂ ಆಗಿದ್ದನು, ಅವನ ಹೆಸರು ರಣಜಿತ ಸಿಂಹ ಇತ್ತು. ಅವನು ಬೆಂಗಳೂರಿನಲ್ಲಿ ಟ್ರಕ್ ಚಾಲಕನಾಗಿದ್ದನು. ಅವನು ನನಗೆ ಮೋಸ ಮಾಡಿದನು. ಮುಸಲ್ಮಾನನಾಗಿದ್ದರೂ ಸುಳ್ಳು ಹೇಳಿ ನನ್ನ ಜೊತೆಗೆ ವಿವಾಹ ಮಾಡಿಕೊಂಡನು. ದೇಶಕ್ಕೆ ಅಪಾಯ ತಂದು ಒಡ್ಡುವವನಿಂದ ನಾನು ಏನು ಅಪೇಕ್ಷಿಸಲಿ ? ನನಗೆ ಅವನ ಮೇಲೆ ವಿಶ್ವಾಸವಿಲ್ಲ. ಅವನು ಅವನ ಮಕ್ಕಳಿಗೆ ಇಸ್ಲಾಂನ ಕಟ್ಟರ ಶಿಕ್ಷಣ ನೀಡುತ್ತಿದ್ದನು, ಎಂದು ಹೇಳಿದಳು.
ಇನ್ನೊಬ್ಬ ಭಯೋತ್ಪಾದಕ ಮಹಮ್ಮದ್ ರಯಿಸ್ ಇವನು ‘ಐ.ಎಸ್’ಐ.’ ನ ಏಜೆಂಟ್ ಆಗಿದ್ದು ಅವನು ಪಾಕಿಸ್ತಾನದಲ್ಲಿನ ಭಯೋತ್ಪಾದಕರಿಗೆ ಗೌಪ್ಯ ಮಾಹಿತಿ ಪೂರೈಸಿದ್ದನು. ಮತ್ತೋರ್ವ ಭಯೋತ್ಪಾದಕ ಮುಕಿಮ ಇವನು ಕೂಡ ‘ಐ.ಎಸ್.ಐ. ಏಜೆಂಟ್. ಆಗಿದ್ದಾನೆ ಮುಕಿಮನ ತಾಯಿ ಪತ್ರಕರ್ತರಿಗೆ, ಮುಕಿಮ ಬಹಳ ಮುಗ್ಧನಾಗಿದ್ದ. ರಯಿಸನು ಅವನನ್ನು ಸಿಲುಕಿಸಿದ್ದಾನೆ. ಇನ್ನೋರ್ವ ಭಯೋತ್ಪಾದಕ ಸಲ್ಮಾನ್ ಸಿದ್ದಿಕಿ ಇವನು ಕೂಡ ‘ಐ.ಎಸ್’ಐ’ ನ ಏಜೆಂಟ್ ಆಗಿದ್ದ. ಅವನ ಕುಟುಂಬದವರು. ಸದ್ದಾಮ್ ಮತ್ತು ರಯಿಸ್ ಇವರು ಅವನನ್ನು ಸಿಲುಕಿಸಿದ್ದಾರೆ. ತಾರಾಬಗಂಜ್ ತಾಲೂಕಿನಲ್ಲಿನ ರಯಿಸನ ಮನೆಯಿಂದ ೩೦ ಕಿಲೋಮೀಟರ್ ಅಂತರದಲ್ಲಿ ಸಲ್ಮಾನ ಸಿದ್ದಿಕಿ ಇವನ ಮನೆ ಇದೆ. ಅವನನ್ನು ಕೂಡ ಬಂಧಿಸಲಾಗಿದೆ.
ಸಂಪಾದಕರ ನಿಲುವು* ಹಿಂದುಗಳ ದೇಶದಲ್ಲಿ ಅವರ ಆರಾಧ್ಯ ಪ್ರಭು ಶ್ರೀರಾಮನ ಜನ್ಮಸ್ಥಾನವೆ ಭಯೋತ್ಪಾದಕರ ಕರಿನೆರಳಿನಲ್ಲಿರುವುದು, ಇದು ಹಿಂದುಗಳಿಗಾಗಿ ಅತ್ಯಂತ ಲಜ್ಜಾಸ್ಪದ ವಿಷಯ ! ಇಂತಹ ದುಸ್ಥಿತಿ ಇರುವ ಜಗತ್ತಿನಲ್ಲಿ ಏಕೈಕ ದೇಶ ಭಾರತ ! * ‘ಸಾಂಸ್ಕೃತಿಕ ರಾಷ್ಟ್ರೀಯತೆ’ಯನ್ನು ಪೋಷಿಸುವ ಹಿಂದುಗಳ ದೇವಸ್ಥಾನಗಳು ಮತ್ತು ತೀರ್ಥಕ್ಷೇತ್ರಗಳ ಜೀರ್ಣೋದ್ಧಾರ ಮತ್ತು ಅಲಂಕಾರಕ್ಕಾಗಿ ಸರಕಾರದಿಂದ ಮಾಡಿರುವ ಪ್ರಯತ್ನ ಶ್ಲಾಘನೀಯವಾಗಿದೆ, ಆದರೆ ಅದರ ಸಂರಕ್ಷಣೆಗಾಗಿ ನಾವು ಸಿದ್ದರಿದ್ದೇವೆಯೆ ? |