ಹಿಂದೂ ಎಂದು ನಂಬಿಸಿ ಹಿಂದೂ ಮಹಿಳೆಯನ್ನು ಮದುವೆಯಾದ ಶಹನವಾಜ್ ನ ಬಂಧನ

ಉತ್ತರ ಪ್ರದೇಶದಲ್ಲಿ ‘ಲವ್ ಜಿಹಾದ್’ ಪ್ರಕರಣ ಬೆಳಕಿಗೆ !

ಶಾಹನವಾಜ್  ಮತ್ತು ಮಾಲತಿ

ಅಯೋಧ್ಯೆ (ಉತ್ತರ ಪ್ರದೇಶ) – ಅಯೋಧ್ಯೆಯ ಶಾಹನವಾಜ್ ಹೆಸರಿನ ಮುಸ್ಲಿಂ ವ್ಯಕ್ತಿಯು ತಾನು ಹಿಂದೂ ಎಂದು ನಂಬಿಸಿ ಮಾಲತಿ ಹೆಸರಿನ ಹಿಂದೂ ಮಹಿಳೆಯನ್ನು ವಿವಾಹವಾದನು. ಸಂತ್ರಸ್ತ ಮಹಿಳೆ ವಿಧವೆಯಾಗಿದ್ದು, 2 ಮಕ್ಕಳ ತಾಯಿಯಾಗಿದ್ದಾಳೆ. ಮದುವೆಯಾದ ಕೆಲವು ದಿನಗಳ ನಂತರ ಶಹನವಾಜ್ ಅವಳ ಮಕ್ಕಳಿಗೆ ಸುನ್ನತಿ ಮಾಡಲು ಪ್ರಯತ್ನಿಸಿದನು. ಪತಿ ಮುಸ್ಲಿಂ ಎಂದು ತಿಳಿದ ಬಳಿಕ ಆಕೆ ಪೊಲೀಸರಲ್ಲಿ ದೂರು ದಾಖಲಿಸಿದಳು. ಪೊಲೀಸರು ಆರೋಪಿ ವಿರುದ್ಧ ಮತಾಂತರ ಮತಾಂತರದ ಕಾಯಿದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಅವನನ್ನು ಬಂಧಿಸಿದ್ದಾರೆ.

1. ಸಂತ್ರಸ್ತೆ ತನ್ನ ಪತಿ ಮತ್ತು ಇಬ್ಬರು ಮಕ್ಕಳೊಂದಿಗೆ ಮುಂಬಯಿನಲ್ಲಿ ವಾಸಿಸುತ್ತಿದ್ದಳು. ಪತಿಯ ತೀರಿಕೊಂಡ ಬಳಿಕ ಪಕ್ಕದ ಮನೆಯಲ್ಲೇ ವಾಸಿಸುತ್ತಿದ್ದ ಆರೋಪಿ ಶಹನವಾಜ್ ಆಕೆಯೊಂದಿಗೆ ಸ್ನೇಹ ಬೆಳೆಸಿದ್ದನು. ತನ್ನನ್ನು ದಿಲೀಪ್ ಎಂದು ಪರಿಚಯಿಸಿಕೊಂಡು ಹಿಂದೂ ಎಂದು ಸುಳ್ಳು ಹೇಳಿದ್ದನು. ಇದಾದ ಬಳಿಕ ಇಬ್ಬರೂ ಅಲ್ಲಿನ ದೇವಸ್ಥಾನದಲ್ಲಿ ಮದುವೆಯಾದರು.

2. ಕುಟುಂಬವು ಇತ್ತೀಚೆಗೆ ಅಯೋಧ್ಯೆಯ ಅವರ ಸ್ವಂತ ಗ್ರಾಮ ಭಗ್ಗು ಜಲಾಲ್‌ಪುರಕ್ಕೆ ಬಂದರು. ಗ್ರಾಮವನ್ನು ತಲುಪಿದ ಬಳಿಕ ಶಹನವಾಜ್ ಸಂತ್ರಸ್ತೆಯೊಂದಿಗೆ ಬಲವಂತವಾಗಿ ಇಸ್ಲಾಮಿಕ್ ಪದ್ಧತಿಯಲ್ಲಿ ವಿವಾಹವಾಗಿ ‘ನೀನು ಇಸ್ಲಾಮಿಕ್ ಪದ್ಧತಿಗಳ ಪ್ರಕಾರ ಬದುಕಬೇಕು’ ಎಂದು ಹೇಳಿದನು.

3. ಹಿಂದೂ ಯುವತಿಗೆ ತಾನು ಮೋಸ ಹೋಗಿರುವ ಬಗ್ಗೆ ಅರಿವಾದ ಕೂಡಲೇ ಅವಳು ಪೊಲೀಸರಿಗೆ ದೂರು ನೀಡಿದ್ದಾಳೆ. ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ತನಿಖೆ ಆರಂಭಿಸಿದ್ದಾರೆ. ಸಂತ್ರಸ್ತೆ ಈಗ ಸದ್ಯಕ್ಕೆ ಗೋರಖ್‌ಪುರದ ತನ್ನ ತವರು ಮನೆಯಲ್ಲಿ ವಾಸವಾಗಿದ್ದಾಳೆ.