ತಮ್ಮ ಸಹವಾಸದಲ್ಲಿ ಎಲ್ಲರನ್ನೂ ಪ್ರೀತಿಯಿಂದ ತಮ್ಮವರನ್ನಾಗಿಸುವ ಮತ್ತು ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರ ಪ್ರತಿರೂಪವೆನಿಸುವ ಸನಾತನದ ೭೫ ನೇ ಸಂತ ಪೂ. ರಮಾನಂದ ಗೌಡ

ಪೂ. ರಮಾನಂದ ಗೌಡ

೧. ಕರ್ನಾಟಕದ ಕ್ಷೇತ್ರಗಳನ್ನು ವೀಕ್ಷಿಸುವ ಮೊದಲು ಮಂಗಳೂರಿಗೆ ಹೋದಾಗ, ಅಲ್ಲಿ ಪೂ. ರಮಾನಂದ ಅಣ್ಣನವರ ಭೇಟಿಯಾಗಿ ಅವರು ಆತ್ಮೀಯತೆಯಿಂದ ಮಾತನಾಡಿಸಿದಾಗ ಭಾವಜಾಗೃತಿ ಆಗುವುದು: ‘ಕೆಲವು ದಿನಗಳ ಹಿಂದೆ ನಾನು, ನನ್ನ ತಂದೆ-ತಾಯಿ (ಸೌ. ಅಂಜಲಿ ಮತ್ತು ಶ್ರೀ. ಶ್ರೀರಾಮ ಕಾಣೆ) ಹಾಗೂ ನಮ್ಮ ಕೆಲವು ಸಂಬಂಧಿಕರು ಕರ್ನಾಟಕದಲ್ಲಿರುವ ಕೆಲವು ಕ್ಷೇತ್ರಗಳನ್ನು ವೀಕ್ಷಿಸಲು ಹೋಗಿದ್ದೆವು. ಮಧ್ಯಂತರ ಅವಧಿಯಲ್ಲಿ ಸ್ವಲ್ಪ ಸಮಯವಿದ್ದ ಕಾರಣ ನಾವು ಮಂಗಳೂರಿಗೆ ಹೋದೆವು. ಆ ಸಮಯದಲ್ಲಿ ಪೂ. ರಮಾನಂದ ಗೌಡ (ಸನಾತನದ ೭೫ ನೇ ಸಂತರು, ೪೭ ವರ್ಷಗಳು) ಅಧ್ಯಾತ್ಮ ಪ್ರಸಾರಕ್ಕಾಗಿ ಪ್ರವಾಸಕ್ಕೆ ಹೊರಡುವ ಗಡಿಬಿಡಿಯಲ್ಲಿದ್ದರು. ಆದರೂ ಅವರು ನಮ್ಮನ್ನು ಆತ್ಮೀಯತೆಯಿಂದ ಮಾತನಾಡಿಸಿದರು ಮತ್ತು ನಮ್ಮೊಂದಿಗೆ ಸಾಕಷ್ಟು ಸಮಯ ಮಾತನಾಡಿದರು. ನಮ್ಮ ಮುಂದಿನ ಆಯೋಜನೆಯನ್ನು ಕೇಳಿಕೊಂಡು ಅವರು ನಮಗೆ ಸ್ಥಳೀಯ ದೇವಸ್ಥಾನಗಳು ಮತ್ತು ಪ್ರೇಕ್ಷಣೀಯ ಸ್ಥಳಗಳ ಹೆಸರುಗಳನ್ನು ಬರೆದುಕೊಟ್ಟರು. ‘ಯಾವ ಸ್ಥಳದಲ್ಲಿ ಏನನ್ನು ನೋಡಬಹುದು ? ಯಾವ ಯಾವ ಊರುಗಳಲ್ಲಿ ಸಾಧಕರಿದ್ದಾರೆ ? ನಾವು ಯಾರಲ್ಲಿ ಹೋಗಬಹುದು ?’ ಇತ್ಯಾದಿ ವಿಷಯಗಳನ್ನು ನಮಗೆ ಹೇಳಿದರು. ಅಷ್ಟೇ ಅಲ್ಲದೇ ಅವರು ಒಬ್ಬ ಸಾಧಕನನ್ನು ನಮ್ಮ ವಾಹನ ಚಾಲಕನ  ಬಳಿಗೆ ಕಳುಹಿಸಿ ನಮಗೆ ಮಂಗಳೂರಿನಲ್ಲಿ ಯಾವ ದೇವಸ್ಥಾನಗಳನ್ನು ತೋರಿಸಬೇಕು’ ಎಂದು ಕನ್ನಡದಲ್ಲಿ ಮಾಹಿತಿಯನ್ನು ನೀಡಲು ಹೇಳಿದರು. ಅವರ ಪ್ರೀತಿಯನ್ನು ನೋಡಿ ನಮಗೆ ಭಾವಜಾಗೃತಿಯಾಯಿತು.

ಕು. ಗೀತಾಂಜಲಿ ಕಾಣೆ

೨. ಸಾಧಕರಿಗೆ ಪ್ರತಿಯೊಂದು ವಿಷಯದಿಂದ ಆನಂದ ಮತ್ತು ಚೈತನ್ಯವನ್ನು ನೀಡುವ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಗುಣವನ್ನು ಪೂ. ರಮಾನಂದ ಅಣ್ಣನವರಲ್ಲಿಯೂ ಅನುಭವಿಸುವುದು: ಪೂ. ರಮಾನಂದ ಅಣ್ಣನವರು ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರ ಪ್ರತಿರೂಪದಂತೆ ಕಂಡುಬಂದರು. ಮೊದಲು ಗುರುದೇವರು ಗೋವಾಕ್ಕೆ ಬರುವ ಸಾಧಕರಿಗೆ ಗೋವಾ ನೋಡಲು ಕಳುಹಿಸುತ್ತಿದ್ದರು ಮತ್ತು ಭೇಟಿಯಲ್ಲಿ ಆ ವಿಷಯದ ಕುರಿತು ಕೇಳುತ್ತಿದ್ದರು. ಈಗಲೂ ಅವರು ಗೋವಾದ ಪ್ರಸಿದ್ಧ ಶಿಮಗೊತ್ಸವಕ್ಕೆ (ಗೋವಾದ ವಾರ್ಷಿಕ ಜಾತ್ರೆ) ಸಾಧಕರನ್ನು ಕಳಿಸುವ ಆಯೋಜನೆ ಮಾಡಲು ಹೇಳುತ್ತಾರೆ. ಎಲ್ಲ ಸಾಧಕರನ್ನು ತಮ್ಮ ಕುಟುಂಬದವರೇ ಎಂದು ತಿಳಿದು ಅವರಿಗೆ ಪ್ರತಿಯೊಂದು ವಿಷಯದಿಂದಲೂ ಆನಂದ ಮತ್ತು ಚೈತನ್ಯವನ್ನು ನೀಡುವ, ಅವರೊಂದಿಗೆ ಪೂರ್ಣ ಒಂದಾಗುವ ವಿಶಿಷ್ಟ ಗುಣ ಗುರುದೇವರಲ್ಲಿದೆ. ಪೂ. ರಮಾನಂದ ಅಣ್ಣನವರಲ್ಲಿಯೂ ನಮಗೆ ಇದೇ ಗುಣಗಳ ದರ್ಶನವಾಯಿತು.

ಕೆಲವೇ ನಿಮಿಷಗಳ ಸತ್ಸಂಗದಲ್ಲಿ ನಾವು ಪೂ. ರಮಾನಂದ ಅಣ್ಣನವರಲ್ಲಿ ಪ್ರೀತಿ, ಭಾವ ಮತ್ತು ನಮ್ರತೆಯನ್ನು ಅನುಭವಿಸಿದೆವು. ನಾಲ್ಕು ದಿನಗಳಲ್ಲಿ ನಾವು ಮರಳಿ ಹೋಗುವವರಿದ್ದೆವು. ಆಗ ಮಂಗಳೂರಿನಲ್ಲಿ ಮಹಾಪ್ರಸಾದ ತೆಗೆದುಕೊಳ್ಳಲು ಮತ್ತು ವಿಶ್ರಾಂತಿ ಪಡೆಯಲು ಬರುವಂತೆ ಒತ್ತಾಯಿಸಿ, ‘ಸಾಧಕರು ನಿಮ್ಮನ್ನು ರೈಲು ನಿಲ್ದಾಣಕ್ಕೆ ತಲುಪಿಸುವರು’ ಎಂದು ಹೇಳಿದರು. ನಿಜಹೇಳಬೇಕೆಂದರೆ, ನಾವು ಮೂರು ಸ್ಥಳಗಳಿಗೆ ಬೇರೆ ಬೇರೆ ಸಮಯದಲ್ಲಿ ಹೊರಡುವವರಿದ್ದೆವು. ಆದರೂ ಅವರು ನಮಗೆ ಮಂಗಳೂರಿಗೆ ಬರಲು ಹೇಳಿದರು. ಹೊರಡುವಾಗ ಮೂವರಿಗೂ ಪ್ರತ್ಯೇಕವಾಗಿ ಪ್ರಸಾದವನ್ನು ನೀಡಿದರು. ನಾನು ಮರಳಿ ರಾಮನಾಥಿ ಆಶ್ರಮಕ್ಕೆ ಹೋಗುವವಳಿದ್ದೆ. ಆದರೂ ಅವರು ಎಲ್ಲರಿಗೂ ಪ್ರಸಾದವನ್ನು ನೀಡುವಂತೆ ಸಂದೇಶ ನೀಡಿಟ್ಟಿದ್ದರು. ನಿಜವಾಗಿ ಹೇಳಬೇಕೆಂದರೆ, ನಾವು ಪ್ರವಾಸಕ್ಕೆಂದು ಹೋಗಿದ್ದೆವು. ನಮ್ಮ ಸಂಬಂಧಿಕರು ಸನಾತನ ಸಂಸ್ಥೆಯ ಮಾರ್ಗದರ್ಶನದಂತೆ ಸಾಧನೆ ಮಾಡುವುದಿಲ್ಲ. ಆದರೂ ಗುರುದೇವರ ಕೃಪೆಯಿಂದ ಪ್ರಾರಂಭದಲ್ಲಿಯೇ ಸಂತರ ದರ್ಶನ ವಾಗಿ ಮುಂದಿನ ನಮ್ಮ ಎಲ್ಲ ಪ್ರವಾಸ ನಿರ್ವಿಘ್ನವಾಗಿ ಮತ್ತು ಚೈತನ್ಯಮಯವಾಯಿತು. ಕೆಲವೇ ನಿಮಿಷಗಳ ಸಹವಾಸದಲ್ಲಿ ಸನಾತನದ ಸಂತರಲ್ಲಿ ಇರುವ ಅವರ್ಣನೀಯ ಪ್ರೀತಿಯನ್ನು ಎಲ್ಲರೂ ಅನುಭವಿಸಿದರು.

‘ಗುರುದೇವಾ, ನಮ್ಮಲ್ಲಿ ಅರ್ಹತೆಯಿಲ್ಲದಿದ್ದರೂ ನೀವು ಪ್ರತಿಕ್ಷಣವೂ ನಮ್ಮ ಮೇಲೆ ಕೃಪಾದೃಷ್ಟಿಯನ್ನು ಹರಿಸಿದ್ದೀರಿ. ಇದಕ್ಕಾಗಿ ನಾವು ನಿಮ್ಮ ಚರಣಗಳಲ್ಲಿ ಕೃತಜ್ಞರಾಗಿದ್ದೇವೆ. – ಕು. ಗೀತಾಂಜಲಿ ಕಾಣೆ, ಸನಾತನ ಆಶ್ರಮ, ಗೋವಾ(೨೯.೫.೨೦೨೩)