ಭಕ್ತಿಯೋಗದ ಆಧ್ಯಾತ್ಮಿಕ ಗುಣವೈಶಿಷ್ಟ್ಯಗಳು ಮತ್ತು ಇತರ ಯೋಗಮಾರ್ಗಗಳ ತುಲನೆಯಲ್ಲಿ ಭಕ್ತಿಮಾರ್ಗದಿಂದ ಸಾಧನೆಯನ್ನು ಮಾಡಿ ಸಂತಪದವಿ ಪ್ರಾಪ್ತವಾದವರ ಸಂಖ್ಯೆ ಹೆಚ್ಚು ಇರುವುದರ ಹಿಂದಿನ ಕಾರಣಗಳು !

‘ಅಧ್ಯಾತ್ಮದಲ್ಲಿ ಜ್ಞಾನಯೋಗ, ಧ್ಯಾನಯೋಗ, ಕರ್ಮಯೋಗ, ಹಠಯೋಗ, ಶಕ್ತಿಪಾತಯೋಗ, ನಾಮಸಂಕೀರ್ತನಯೋಗ ಮತ್ತು ಭಕ್ತಿಯೋಗ ಹೀಗೆ ವಿವಿಧ ಯೋಗಮಾರ್ಗಗಳಿವೆ. ವಿವಿಧ ಯೋಗ ಮಾರ್ಗಗಳಿಗನುಸಾರ ಸಾಧನೆಯನ್ನು ಮಾಡಲು ಆವಶ್ಯಕವಾಗಿರುವ ಗುಣಗಳು ಮತ್ತು ಅವುಗಳಿಂದ ವಿಕಸಿತವಾಗುವ ಗುಣಗಳು ಮುಂದಿನಂತಿವೆ. ೨೪/೪೭ ನೇ ಸಂಚಿಕೆಯಲ್ಲಿ ಯೋಗಮಾರ್ಗಗಳ ಬಗೆಗಿನ ಕೆಲವು ಭಾಗಗಳನ್ನು ನೋಡಿದೆವು. ಇಂದು ಮುಂದಿನ ಭಾಗವನ್ನು ನೋಡೋಣ. – ಭಾಗ ೨

ಕು. ಮಧುರಾ ಭೋಸಲೆ

೪ ಇ. ಭಕ್ತಿಮಾರ್ಗಿ ಜೀವದ ಭಾವವು ಭಕ್ತಿಯಲ್ಲಿ ಮತ್ತು ಪ್ರೇಮಭಾವವು ಪ್ರೀತಿಯಲ್ಲಿ ರೂಪಾಂತರವಾಗುವುದರಿಂದ ಸಕಾಮ ಸಾಧನೆಯಿಂದ ನಿಷ್ಕಾಮ ಸಾಧನೆಯ ಕಡೆಗೆ ಅದರ ಪ್ರವಾಸವಾಗಿ ಅದಕ್ಕೆ ಸಂತಪದವಿಯು ಬೇಗ ಪ್ರಾಪ್ತವಾಗುವುದು : ಭಕ್ತಿಯೋಗದಿಂದ ಸಾಧನೆ ಮಾಡುವ ಜೀವದಲ್ಲಿ ಭಗವಂತನ ಬಗ್ಗೆ ಬಾಲಕಭಾವ, ಸಮರ್ಪಣಭಾವ, ದಾಸ್ಯಭಾವ, ಸಖ್ಯಭಾವ, ಸೇವಾಭಾವ ಹೀಗೆ ಅನೇಕ ಪ್ರಕಾರದ ಭಾವ ಗಳಿರುತ್ತವೆ. ಅದರ ಆಧ್ಯಾತ್ಮಿಕ ಮಟ್ಟ ಕಡಿಮೆ ಇದ್ದರೂ, ಭಾವ ವಿರುವುದರಿಂದ ಅದರ ಮೇಲಿನ ಮಾಯೆಯ ಅಥವಾ ಅಜ್ಞಾನದ ಆವರಣ ದೂರವಾಗಿ ಅವನು ತಕ್ಷಣ ಮತ್ತು ಸಹಜವಾಗಿ ಭಗವಂತನ ಅನುಸಂಧಾನದಲ್ಲಿರಬಲ್ಲನು. ಅದೇ ರೀತಿ ಭಕ್ತಿಮಾರ್ಗಿ ಜೀವದಲ್ಲಿ ಪ್ರೇಮಭಾವವೂ ಇರುತ್ತದೆ. ಆದ್ದರಿಂದ ಅದು ತನ್ನಲ್ಲಿ ಸಿಲುಕದೇ ಇತರರ ಬಗ್ಗೆ ಹೆಚ್ಚು ಪ್ರಮಾಣದಲ್ಲಿ ವಿಚಾರ ಮಾಡುತ್ತಿರುತ್ತದೆ. ಈ ರೀತಿ ಭಕ್ತಿಮಾರ್ಗಿ ಜೀವಗಳು ಇತರರ ವಿಚಾರ ಮಾಡಿ ಸಮಷ್ಟಿ ರೂಪಿ ಈಶ್ವರನ ಅನುಸಂಧಾನದಲ್ಲಿರುತ್ತವೆ. ಭಾವ ಮತ್ತು ಪ್ರೇಮಭಾವ ಈ ಎರಡು ಗುಣಗಳಿಂದ ಭಕ್ತಿಮಾರ್ಗಿ ಜೀವದ ವ್ಯಷ್ಟಿ ಸಾಧನೆಯು ಒಳ್ಳೆಯ ರೀತಿಯಿಂದಾಗಿ ಅದರ ಅಹಂ ಬೇಗ ಕಡಿಮೆಯಾಗತೊಡಗುತ್ತದೆ. ಅದರ ಪರಿಣಾಮ ಅವನಲ್ಲಿರುವ ಭಾವದಿಂದಾಗಿ ಅವನಿಗೆ ಈಶ್ವರನ ಚೈತನ್ಯಲಹರಿಗಳು ಮತ್ತು ಪ್ರೇಮಭಾವದಿಂದಾಗಿ ಈಶ್ವರನ ಆನಂದಲಹರಿಗಳನ್ನು ಹೆಚ್ಚು ಪ್ರಮಾಣದಲ್ಲಿ ಗ್ರಹಿಸಲು ಸಾಧ್ಯವಾಗುತ್ತದೆ. ಅವನಲ್ಲಿನ ಭಾವದಿಂದಾಗಿ ‘ಪ್ರತಿಯೊಂದು ಕರ್ಮದ ಕರ್ತೃತ್ವವನ್ನು ತನ್ನಲ್ಲಿ ತೆಗೆದುಕೊಳ್ಳುವುದು’ ಮತ್ತು ಪ್ರೇಮಭಾವದಿಂದಾಗಿ ‘ಇತರರಿಂದ ಅನೇಕ ಅಪೇಕ್ಷೆಯನ್ನು ಮಾಡುವುದು’, ಈ ಅಹಂನ ಸೂಕ್ಷ್ಮ ಮಜಲುಗಳು ದೂರವಾಗುತ್ತವೆ. ಆದ್ದರಿಂದ ಭಕ್ತಿಮಾರ್ಗಿ ಜೀವದ ಸಕಾಮ ಸಾಧನೆಯು ಮುಗಿದು ಅವನ ನಿಷ್ಕಾಮ ಸಾಧನೆ ಪ್ರಾರಂಭವಾಗುತ್ತದೆ. ಆದ್ದ ರಿಂದ ಅವನಲ್ಲಿನ ವ್ಯಷ್ಟಿ ಸಾಧನೆಯ ಸ್ತರದ ಭಾವವು ಭಕ್ತಿಯಲ್ಲಿ ಮತ್ತು ಸಮಷ್ಟಿ ಸಾಧನೆಯ ಅಂತರ್ಗತ (ಅಡಿಯಲ್ಲಿ) ಪ್ರೇಮ ಭಾವವು ಪ್ರೀತಿಯಲ್ಲಿ ರೂಪಾಂತರವಾಗಿ ಅವನು ಬೇಗ ಸಂತಪದವಿಗೆ ಪಾತ್ರನಾಗುತ್ತಾನೆ. ಭಕ್ತಿಮಾರ್ಗಿ ಜೀವದಲ್ಲಿರುವ ಭಾವ ಮತ್ತು ಭಕ್ತಿ ಈ ಗುಣಗಳಿಂದ ಅವನು ಭಗವಂತನ ಸೂಕ್ಷ್ಮ ರೂಪದೊಂದಿಗೆ ಹಾಗೂ ಪ್ರೇಮಭಾವ ಮತ್ತು ಪ್ರೀತಿ ಈ ಗುಣಗಳಿಂದ ಅವನು ಭಗವಂತನ ವ್ಯಾಪಕ ರೂಪದೊಂದಿಗೆ ಬೇಗ ಏಕರೂಪನಾಗುತ್ತಾನೆ. ಆದ್ದರಿಂದ ಭಗವಂತನಿಗೆ ಇಂತಹ ಭಕ್ತನು ಅತ್ತಂತ ಪ್ರಿಯನಾಗಿರುತ್ತಾನೆ.

ಉದಾ.: ಪಂಢರಾಪುರದ ಪಾಂಡುರಂಗನಲ್ಲಿ ಪ.ಪೂ. ಭಕ್ತರಾಜ ಮಹಾರಾಜರಿಗಿದ್ದ ಅಪಾರ (ಅಚಲ) ಭಕ್ತಿಯಿಂದ ಅವರು ತಿನ್ನಿಸಿದ ಪೇಡಾವನ್ನು ಪಾಂಡುರಂಗನು ತಕ್ಷಣ ಸ್ವೀಕರಿಸಿದನು. ಅದೇ ರೀತಿ ಸಂತ ಏಕನಾಥ ಮಹಾರಾಜರಿಗೆ ಬಾಲಕೃಷ್ಣನಲ್ಲಿದ್ದ ಅಪಾರ ಭಕ್ತಿಯಿಂದ ಅವರು ತಮ್ಮ ದೇವರ ಕೋಣೆಯಲ್ಲಿದ್ದ ಹಿತ್ತಾಳೆಯ ಬಾಲಕೃಷ್ಣನ ಮೂರ್ತಿಗೆ ಬೆಣ್ಣೆ ಯನ್ನು ತಿನ್ನಿಸುತ್ತಿರುವಾಗ, ಹಿತ್ತಾಳೆಯ ಮೂರ್ತಿಯಲ್ಲಿದ್ದ ಬಾಲಕೃಷ್ಣನು ತನ್ನ ಬಲಗೈಯನ್ನು ಮೇಲೆ ಎತ್ತಿದನು. ಅದೇ ರೀತಿ ಸಂತ ಏಕನಾಥ ಮಹಾರಾಜರಿಗೆ ಭಗವಂತನಲ್ಲಿದ್ದ ಪ್ರೀತಿಯಿಂದ ಅವರಿಗೆ ಮರುಭೂಮಿಯಲ್ಲಿ ನೀರಿಗಾಗಿ ಒದ್ದಾಡುತ್ತಿರುವ ಕತ್ತೆಯಲ್ಲಿ ಭಗವಂತನ ಅಂಶದ ಅನುಭೂತಿ ಬಂದಿತು ಮತ್ತು ಅವರಲ್ಲಿ ಕರುಣಾಭಾವವು ಜಾಗೃತವಾಯಿತು. ಆದ್ದರಿಂದ ಅವರು ಕಾಶಿಯಿಂದ ತಂದಿರುವ ಗಂಗೆಯ ನೀರನ್ನು ಬಾಯಾರಿಕೆಯಿಂದ ಬಳಲುತ್ತಿರುವ ಕತ್ತೆಗೆ ಕುಡಿಸಿದರು.

ಹಾಗೆಯೇ ಒಂದು ನಾಯಿಯು ರೊಟ್ಟಿಯ ತುಂಡನ್ನು ತೆಗೆದುಕೊಂಡು ಓಡುತ್ತಿರುವಾಗ ‘ನಾಯಿ ಯಲ್ಲಿರುವ ಭಗವಂತನ ಅಂಶಕ್ಕೆ ಒಣ ರೊಟ್ಟಿಯನ್ನು ತಿನ್ನಿಸಬಾರದೆಂದು, ಅದಕ್ಕೆ ತುಪ್ಪವನ್ನು ಕೊಡಲು ಸಂತ ನಾಮದೇವರು ತುಪ್ಪದ ಗಿಂಡಿಯನ್ನು ಹಿಡಿದು ಆ ನಾಯಿಯ ಹಿಂದೆ ಓಡುತ್ತಿದ್ದರು.

೪ ಈ. ಭಕ್ತಿಮಾರ್ಗಿ ಜೀವದಲ್ಲಿರುವ ಸೇವಾವೃತ್ತಿಯಿಂದ ಸೇವಕಭಾವ ಮತ್ತು ದಾಸ್ಯಭಾವವು ಜಾಗೃತವಾಗಿರುವುದರಿಂದ ಅವರ ಅಹಂ ಕಡಿಮೆಯಾಗುವುದು: ಪ್ರಗಟ(ಪ್ರತ್ಯಕ್ಷ) (ಸ್ಥೂಲ ಮತ್ತು ವ್ಯಕ್ತ) ಮತ್ತು ಅಪ್ರಗಟ (ಪರೋಕ್ಷ) (ಸೂಕ್ಷ್ಮ ಮತ್ತು ಅವ್ಯಕ್ತ) ಹೀಗೆ ಅಹಂಕಾರದ ಎರಡು ಮುಖ್ಯ ಪ್ರಕಾರಗಳಿವೆ. ಇತರ ಯೋಗಮಾರ್ಗಗಳ ತುಲನೆಯಲ್ಲಿ ಭಕ್ತಿಮಾರ್ಗದಲ್ಲಿರುವ ಜೀವದಲ್ಲಿ ಸೇವಾಭಾವವು ಹೆಚ್ಚು ಪ್ರಮಾಣದಲ್ಲಿರುತ್ತದೆ. ಹಾಗೆಯೇ ಅದು ಇತರರ, ಗುರುಗಳ ಮತ್ತು ದೇವರ ಸೇವೆಯನ್ನು ಮನಃಪೂರ್ವಕವಾಗಿ ಮಾಡುತ್ತಿರುತ್ತದೆ. ಆದ್ದರಿಂದ ಅದರ ‘ಪ್ರಗಟ ಸ್ವರೂಪದಲ್ಲಿನ ಅಹಂ ಬೇಗ ಕಡಿಮೆಯಾಗುತ್ತದೆ. ಅವನ ಮಟ್ಟ ಹೆಚ್ಚಾಗುತ್ತ ಹೋದಂತೆ, ಅದರ ಸೇವಾಭಾವವು ‘ದಾಸ್ಯಭಕ್ತಿ’ಯಲ್ಲಿ ಅಥವಾ ‘ಸೇವಾಭಕ್ತಿ’ಯಲ್ಲಿ ರೂಪಾಂತರವಾಗಿ ಅದರ ‘ಅಪ್ರಗಟ’ ಸ್ವರೂಪದ ಅಹಂ ಬೇಗ ಕಡಿಮೆಯಾಗುತ್ತದೆ. ಈ ರೀತಿ ಇತರ ಯೋಗ ಮಾರ್ಗಗಳ ಜೀವಗಳ ತುಲನೆಯಲ್ಲಿ ಭಕ್ತಿಮಾರ್ಗಿ ಜೀವಗಳ ಅಹಂ ಬೇಗ ಕಡಿಮೆಯಾಗುತ್ತದೆ. ಕೆಲವೊಮ್ಮೆ ಭಕ್ತಿಮಾರ್ಗಿ ಜೀವದ ಮೇಲಿನ ಅವಿದ್ಯೆಯ ಆವರಣದೂರವಾಗದಿರುವುದರಿಂದ ಅವನಿಗೆ ‘ತಾನು ಶ್ರೇಷ್ಠವಾದ ಭಕ್ತಿಯನ್ನು ಮಾಡುತ್ತೇನೆ’, ಎಂಬ ಭಕ್ತಿಯ ಸೂಕ್ಷ್ಮ ಅಹಂ ಉಂಟಾಗುತ್ತದೆ; ಆದರೆ ಅದರ ಮೇಲಿನ ಶ್ರೀಗುರುಕೃಪೆಯಿಂದ ಅದರ ಸೂಕ್ಷ್ಮ ಅಹಂವೂ ನಾಶವಾಗುತ್ತದೆ.

೪ ಉ. ಸಮರ್ಪಣಭಾವ ಮತ್ತು ಕೃತಜ್ಞತಾಭಾವದಿಂದ ಭಕ್ತಿಮಾರ್ಗಿ ಜೀವದಲ್ಲಿ ಭಗವಂತನ ಬಗೆಗಿನ ಸಂಪೂರ್ಣ ಶರಣಾಗತಭಾವ ಜಾಗೃತವಾಗಿ ಅದರ ಅಹಂಕಾರ ಲಯವಾಗುವುದು: ಭಕ್ತಿಮಾರ್ಗದ ಜೀವವು ಭಗವಂತನಿಗೆ ಬೇಗನೇ ಶರಣಾಗಿ ಹೋಗಿ ಅದು ಕಾಯಾ, ವಾಚಾ ಮತ್ತು ಮನಸ್ಸಿನಿಂದ ಮಾಡಿದ ಎಲ್ಲ ಕರ್ಮಗಳನ್ನು ಅದು ಭಗವಂತನಿಗೆ ಸಹಜವಾಗಿ ಅರ್ಪಿಸುತ್ತದೆ. ಆದ್ದರಿಂದ ಈ ಕರ್ಮಗಳ ಕರ್ತೃತ್ವದ ಅಹಂಕಾರವು ಕಡಿಮೆ ಯಾಗುತ್ತದೆ. ಅದೇ ರೀತಿ ಪ್ರತಿಯೊಂದು ಕರ್ಮವು ಭಗವಂತನ ಇಚ್ಛೆಯಿಂದ ಆಗುತ್ತಿರುವುದರಿಂದ ಅವನಿಂದಾದ ಒಳ್ಳೆಯ ಕರ್ಮದ ಕರ್ತೃತ್ವವನ್ನು ಅವನು ತನ್ನಲ್ಲಿ ಇಟ್ಟುಕೊಳ್ಳದೇ ಅದರ ಶ್ರೇಯಸ್ಸನ್ನು ಭಗವಂತನಿಗೆ ಕೊಡುತ್ತಾನೆ. ಆದ್ದರಿಂದ ಅವನಲ್ಲಿ ಭಗವಂತನ ಬಗ್ಗೆ ಕೃತಜ್ಞತಾಭಾವವು ಉತ್ಪನ್ನವಾಗುತ್ತದೆ. ಸಮರ್ಪಣಭಾವ ಮತ್ತು ಕೃತಜ್ಞತಾಭಾವದಿಂದ ಭಕ್ತಿಮಾರ್ಗಿ ಜೀವವು ತನ್ನ ಗೌರವ, ಖ್ಯಾತಿ, ಪ್ರತಿಷ್ಠೆ, ಕರ್ತೃತ್ವ ಇತ್ಯಾದಿಗಳನ್ನು ಬಿಟ್ಟು ಭಗವಂತನಲ್ಲಿ ಸಂಪೂರ್ಣ ಶರಣಾಗುತ್ತದೆ. ಆದ್ದರಿಂದ ಅದರಲ್ಲಿ ಸಂಪೂರ್ಣ ಶರಣಾಗತಭಾವ ಮೂಡಿ ಅದರ ಅಹಂ ಲಯವಾಗುತ್ತದೆ, ಉದಾ. ಸಂತ ತುಕಾರಾಮ ಮಹಾರಾಜರು ಬಡತನದ ಜೀವನವನ್ನು ಜೀವಿಸುತ್ತಿದ್ದರೂ ಅವರು ಭಗವಂತನ ಬಗ್ಗೆ ಕೃತಜ್ಞರಾಗಿದ್ದರು. ಅವರು ಪ್ರತಿಯೊಂದು ಕರ್ಮವನ್ನು ಭಗವಂತನಿಗೆ ಸಮರ್ಪಿಸುತ್ತಿದ್ದರು. ದೇಹುವಿನ ಶ್ರೀ ವಿಠ್ಠಲನ ದೇವಸ್ಥಾನದಲ್ಲಿ ಕೀರ್ತನೆಯಲ್ಲಿ ಮಗ್ನರಾಗಿದ್ದ ಛತ್ರಪತಿ ಶಿವಾಜಿ ಮಹಾರಾಜರನ್ನು ಮೊಗಲ್‌ ಸೈನಿಕರು ಸೆರೆಹಿಡಿಯಲು ಬಂದಾಗ ತುಕಾರಾಮ ಮಹಾರಾಜರು ಆರ್ತಭಾವದಿಂದ ಮಾಡಿದ ಪ್ರಾರ್ಥನೆಯನ್ನು ಕೇಳಿ ಶ್ರೀ ವಿಠ್ಠಲನು ಅವರ ಮೇಲೆ ಪ್ರಸನ್ನನಾದನು ಮತ್ತು ಅವನು ಶಿವಾಜಿ ಮಹಾರಾಜರ ಅನೇಕ ರೂಪಗಳನ್ನು ತಯಾರಿಸಿದನು. ಆದ್ದರಿಂದ ಮೊಗಲ್‌ ಸೈನಿಕರಿಗೆ ನಿಜವಾದ ಶಿವಾಜಿ ಮಹಾರಾಜರು ಎಲ್ಲಿದ್ದಾರೆ ? ಎಂಬುದು ಗೊತ್ತಾಗಲಿಲ್ಲ ಮತ್ತು ನಿಜವಾದ ಶಿವಾಜಿ ಮಹಾರಾಜರಿಗೆ ಮೊಗಲ್‌ ಸೈನಿಕರ ಮುತ್ತಿಗೆಯಿಂದ ತಪ್ಪಿಸಿಕೊಳ್ಳಲು ಸಾಧ್ಯ ವಾಯಿತು. ಈ ಉದಾಹರಣೆಯಿಂದ ಎಲ್ಲ ಪ್ರಕಾರದ ಭಾವಗಳಲ್ಲಿ ಶರಣಾಗತಭಾವವು ಸರ್ವಶ್ರೇಷ್ಠವಾಗಿರುವ ಅನುಭವ ಬಂದಿತು.

೪ ಊ. ಭಕ್ತಿಮಾರ್ಗಿ ಜೀವಕ್ಕೆ ಪರೇಚ್ಛೆಯಿಂದ ವರ್ತಿಸುವ ಅಭ್ಯಾಸವಾಗಿರುವುದರಿಂದ ಬೇಗನೇ ಮನೋಲಯವಾಗಿ ಸಂತ ಪದವಿಯು ಬೇಗ ಪ್ರಾಪ್ತವಾಗುವುದು ಮತ್ತು ಈಶ್ವರೇಚ್ಛೆಯಿಂದಲೇ ಮುಂದಿನ ಜೀವನ ಸಾಗುವುದು : ಭಕ್ತಿಮಾರ್ಗಿ ಜೀವವು ಸ್ವೇಚ್ಛೆಯನ್ನು ಕಾಯ್ದುಕೊಳ್ಳದೇ ಪರೇಚ್ಛೆಯಿಂದ ವರ್ತಿಸಲು ಪ್ರಾಧಾನ್ಯತೆ ನೀಡುತ್ತದೆ. ಆದ್ದರಿಂದ ಬೇಗನೇ ಮನೋಲಯವಾಗಿ ಸಂತಪದವಿಯ ಕಡೆಗೆ ಅದು ಮಾರ್ಗಕ್ರಮಿಸುತ್ತದೆ. ಸಂತಪದವಿ ಪ್ರಾಪ್ತವಾದ ನಂತರ ಭಕ್ತಿ ಮಾರ್ಗಿ ಜೀವಕ್ಕೆ ತನ್ನ ಭಕ್ತಿಯಿಂದ ಈಶ್ವರೇಚ್ಛೆಯ ಜ್ಞಾನವು ಬೇಗ ಪ್ರಾಪ್ತವಾಗುತ್ತದೆ ಮತ್ತು ಅದು ಮುಂದಿನ ಜೀವನವನ್ನು ಸಂಪೂರ್ಣವಾಗಿ ಈಶ್ವರೇಚ್ಛೆಯಿಂದ ಜೀವಿಸುತ್ತದೆ.

೪ ಎ. ಭಕ್ತಿಯೋಗದ ವಿವಿಧ ಹಂತಗಳು : ದೇವರ ಮೇಲಿನ ನಂಬಿಕೆ, ಶ್ರದ್ಧೆ, ವ್ಯಕ್ತ ಭಾವ, ಅವ್ಯಕ್ತ ಭಾವ, ಸಗುಣ ಭಾವ, ನಿರ್ಗುಣ ಭಕ್ತಿ ಮತ್ತು ಜ್ಞಾನೋತ್ತರ ಭಕ್ತಿ ಇವು ವಿವಿಧ ಆಧ್ಯಾತ್ಮಿಕ ಹಂತಗಳಾಗಿವೆ.

೪ ಎ ೧. ಭಕ್ತಿಯೋಗದ ವಿವಿಧ ಹಂತಗಳು, ಸಂಬಂಧಿಸಿದ ಆಧ್ಯಾತ್ಮಿಕ ಮಟ್ಟ (ಶೇಕಡ) ಮತ್ತು ಭಕ್ತನಿಗೆ ದೊರಕುವ ವಿವಿಧ ಪ್ರಕಾರದ ಮುಕ್ತಿ

೪ ಐ. ಭಕ್ತಿಯೋಗದ ಸಾಧನೆಯ ವಿಧಗಳು ಮತ್ತು ಮಟ್ಟ : ಭಕ್ತಿಯೋಗದ ಸಾಧನೆಯಲ್ಲಿ ‘ಕರ್ಮಕಾಂಡ, ಉಪಾಸನಾ ಕಾಂಡ ಮತ್ತು ಭಕ್ತಿಕಾಂಡ’, ಹೀಗೆ ವಿವಿಧ ಮಟ್ಟಗಳು ಮತ್ತು ವಿಧಗಳಿವೆ. ಅದೇ ರೀತಿ ಭಕ್ತಿಯೋಗಾಂತರ್ಗತ ಸಕಾಮ ಸಾಧನೆ ಮತ್ತು ನಿಷ್ಕಾಮ ಸಾಧನೆ ಹೀಗೆ ಎರಡು ಮುಖ್ಯ ವಿಧಗಳಿವೆ. ಶೇ. ೩೦ ರಿಂದ ೪೫ ರಷ್ಟು ಮಟ್ಟವಿರುವ ಭಕ್ತಿಯೋಗದ ಸಾಧಕನು ಕರ್ಮಕಾಂಡಾಂತರ್ಗತ ‘ಮಂತ್ರಯೋಗ’ದ ಅಂದರೆ ಸಗುಣ ಸ್ತರದ ಸಾಧನೆಯನ್ನು ಮಾಡುತ್ತಿರುತ್ತಾನೆ. ಆದ್ದರಿಂದ ಸ್ಥೂಲದಿಂದ ಸೂಕ್ಷ್ಮದ ಕಡೆಗೆ ಅವನ ಸಾಧನೆಯ ಪ್ರವಾಸವು ಪ್ರಾರಂಭವಾಗುತ್ತದೆ. ಅವನ ಮಟ್ಟವು ಹೆಚ್ಚಾಗಿ ಅದು ಶೇ. ೫೦ ರಷ್ಟಾದಾಗ ಅವನು ಉಪಾಸನಾಕಾಂಡದಲ್ಲಿನ ನಾಮಸಂಕೀರ್ತನಯೋಗಾನುಸಾರ ನಾಮಜಪವನ್ನು ಮಾಡ ತೊಡಗುತ್ತಾನೆ. ಮುಂದೆ ಅವನ ಮಟ್ಟ ಹೆಚ್ಚಾಗಿ ಅದು ಶೇ. ೭೦ ರಷ್ಟಾದಾಗ ಉಪಾಸನಾಕಾಂಡದಿಂದ ಭಕ್ತಿಕಾಂಡದ ಕಡೆಗೆ ಅವನ ಆಧ್ಯಾತ್ಮಿಕ ಪ್ರವಾಸ ಪ್ರಾರಂಭವಾಗುತ್ತದೆ. ಆಗ ಸೂಕ್ಷ್ಮದಿಂದ ಸೂಕ್ಷ್ಮತರದ ಕಡೆಗೆ ಅವನ ಸಾಧನೆಯ ಪ್ರವಾಸ ಪ್ರಾರಂಭವಾಗುತ್ತದೆ. ಈ ಮಟ್ಟದಲ್ಲಿ ಮೊದಲು ಅವನು ಭಗವಂತನ ಸಗುಣ ಭಕ್ತಿಯನ್ನು ಮಾಡತೊಡಗುತ್ತಾನೆ. ಆದ್ದರಿಂದ ಅವನು ಸಗುಣ ಸ್ಥೂಲದೇಹಧಾರಿ ಸಂತರ ಅಥವಾ ಗುರುಗಳ ಮತ್ತು ಭಗವಂತನ ಸಗುಣ ರೂಪವನ್ನು ಹೆಚ್ಚು ಇಷ್ಟಪಡುತ್ತಾನೆ. ಆದ್ದರಿಂದ ಅವನಿಗೆ ಸಲೋಕಮುಕ್ತಿ, ಸರೂಪ ಮುಕ್ತಿ ಇತ್ಯಾದಿ ವಿವಿಧ ಪ್ರಕಾರದ ಮುಕ್ತಿಗಳು ದೊರಕುತ್ತವೆ. ಅನಂತರ ಶ್ರೀಗುರುಗಳು ಅವನ ಸಗುಣ ಭಕ್ತಿಗೆ ಪ್ರಸನ್ನರಾಗಿ ಅವನ ಮೇಲೆ ಕೃಪಾವಂತರಾಗುತ್ತಾರೆ. ಆದ್ದರಿಂದ ಸಗುಣದಿಂದ ನಿರ್ಗುಣದ ಕಡೆಗೆ ಅವನ ಭಕ್ತಿಯ ಮಾರ್ಗಕ್ರಮಣವು ಪ್ರಾರಂಭವಾಗುತ್ತದೆ ಮತ್ತು ಅವನು ನಿಷ್ಕಾಮ ಮತ್ತು ನಿರ್ಗುಣ ಭಕ್ತಿಯನ್ನು ಮಾಡತೊಡಗುತ್ತಾನೆ. ಈ ರೀತಿ ಮುಕ್ತಿಯಿಂದ ಮೋಕ್ಷದ ಕಡೆಗೆ ಭಕ್ತಿಮಾರ್ಗಿ ಸಂತರ ಸಾಧನೆಯಲ್ಲಿನ ಮಾರ್ಗಕ್ರಮಣವು ಪ್ರಾರಂಭವಾಗುತ್ತದೆ.

(ಆಧಾರ – ಸನಾತನ ಗ್ರಂಥ : ‘ಭಾವ ಮತ್ತು ಭಾವದ ವಿಧಗಳು’)

– ಕು. ಮಧುರಾ ಭೋಸಲೆ (ಸೂಕ್ಷ್ಮದಿಂದ ದೊರಕಿದ ಜ್ಞಾನ), (ಆಧ್ಯಾತ್ಮಿಕ ಮಟ್ಟ ಶೇ. ೬೫), ಸನಾತನ ಆಶ್ರಮ, ರಾಮನಾಥಿ, ಗೋವಾ. (೮.೬.೨೦೨೩)