ದೇಶಕ್ಕಾಗಿ ಅತ್ಯುತ್ತಮ ಕಾರ್ಯ ಮಾಡುವುದಕ್ಕೆ ಹಿಂದೂ ಧರ್ಮ ನನಗೆ ಧೈರ್ಯ ಮತ್ತು ಬಲ ನೀಡುತ್ತದೆ ! – ಋಷಿ ಸುನಕ, ಬ್ರಿಟನ್ ಪ್ರಧಾನ ಮಂತ್ರಿ

ಲಂಡನ್ – ಬ್ರಿಟನ್ ಪ್ರಧಾನ ಮಂತ್ರಿ ಋಷಿ ಸುನಕ ಇವರು ಆಗಸ್ಟ್ ೧೫ ರಂದು ಕೇಂಬ್ರಿಜ್ ವಿದ್ಯಾಪೀಠದಲ್ಲಿ ನಡೆಯುತ್ತಿರುವ ಮೋರಾರಿ ಬಾಪು ಇವರ ರಾಮಕಥಾಗೆ (ಪ್ರವಚನಕ್ಕೆ) ಉಪಸ್ಥಿತರಾದರು. ಆ ಸಮಯದಲ್ಲಿ ಮಾತನಾಡಿದ ಸುನಕ ಇವರು, ”ನಾನು ಪ್ರಧಾನಮಂತ್ರಿ ಎಂದು ಅಲ್ಲ, ಒರ್ವ ಹಿಂದೂ ಎಂದು ರಾಮ ಕಥಾದಲ್ಲಿ ಸಹಭಾಗಿ ಆಗಿದ್ದೇನೆ. ಆ ಸಮಯದಲ್ಲಿ ಅವರು ‘ಜೈ ಶ್ರೀ ರಾಮ’ ಎಂದು ಘೋಷಣೆ ಕೂಡ ನೀಡಿದರು. ‘ದೇಶಕ್ಕಾಗಿ ಅತ್ಯುತ್ತಮ ಕಾರ್ಯ ಮಾಡುವುದಕ್ಕಾಗಿ ಹಿಂದೂ ಧರ್ಮ ನನಗೆ ಧೈರ್ಯ ಮತ್ತು ಬಲ ನೀಡುತ್ತದೆ. ಶ್ರೀರಾಮ ನನಗೆ ಸದಾ ಪ್ರೇರಣೆ ನೀಡುತ್ತಾರೆ. ಅವರು ಜೀವನದಲ್ಲಿನ ಸವಾಲುಗಳಿಗೆ ಧೈರ್ಯದಿಂದ ಎದುರಿಸಲು, ನಮ್ರತೆಯಿಂದ ರಾಜ್ಯ ನಡೆಸಲು ಮತ್ತು ನಿಸ್ವಾರ್ಥದಿಂದ ಕಾರ್ಯ ಮಾಡಲು ಕಲಿಸುತ್ತಾರೆ.’ ಎಂದು ಹೇಳಿದರು.

(ಸೌಜನ್ಯ – India Today)

ಸುನಕ ಮಾತು ಮುಂದುವರೆಸುತ್ತಾ, ”ಭಾರತದ ಸ್ವಾತಂತ್ರ್ಯ ದಿನದ ಪ್ರಯುಕ್ತ ಆಯೋಜಿಸಿರುವ ರಾಮಕಥೆಯ ಕಾರ್ಯಕ್ರಮದಲ್ಲಿ ಸಹಭಾಗಿ ಆಗುವದು ಇದು ನನಗೆ ಹೆಮ್ಮೆ ಅನಿಸಿದೆ. ರಾಮಾಯಣದ ಜೊತೆಗೆ ನಾನು ಭಗವದ್ಗೀತೆ ಮತ್ತು ಹನುಮಾನ ಚಾಲಿಸಾಗಳನ್ನೂ ಓದುತ್ತೇನೆ. ನನ್ನ ಕಚೇರಿಯಲ್ಲಿನ ಟೇಬಲ್ ಮೇಲೆ ನಾನು ಶ್ರೀ ಗಣೇಶನ ಸುವರ್ಣ ವಿಗ್ರಹ ಇಟ್ಟಿದ್ದೇನೆ. ಶ್ರೀ ಗಣೇಶ ನನಗೆ ಯಾವುದೇ ಕಾರ್ಯ ಮಾಡುವ ಮೊದಲು ಕೇಳುವ ಮತ್ತು ಯೋಚನೆ ಮಾಡುವುದರ ನೆನಪು ಮಾಡಿಕೊಡುತ್ತಾನೆ.” ಸುನಕರವರು ಮೋರಾರಿ ಬಾಪು ಇವರಿಗೆ, ನಿಮ್ಮ ಆಶೀರ್ವಾದದಿಂದ ನನಗೆ ನಮ್ಮ ಧರ್ಮ ಗ್ರಂಥಗಳಲ್ಲಿ ಹೇಳಿರುವ ರೀತಿಯಲ್ಲಿ ಆಡಳಿತ ನಡೆಸುವುದಿದೆ ಎಂದು ಹೇಳಿದರು.

ಸಂಪಾದಕೀಯ ನಿಲುವು

ಭಾರತದಲ್ಲಿನ ಎಷ್ಟು ಹಿಂದೂ ಜನಪ್ರತಿನಿಧಿಗಳು ಹೀಗೆ ಬಹಿರಂಗವಾಗಿ ಹೇಳುತ್ತಾರೆ ?