ಏಟಾದಲ್ಲಿ (ಉತ್ತರ ಪ್ರದೇಶ) ಹಿಂದೂಗಳ ಪುನರುಚ್ಚರಣೆ!
ಅವಾಘಢ (ಉತ್ತರ ಪ್ರದೇಶ) – ನಮಗೆ ಭಾರತವನ್ನು ‘ಸನಾತನ ರಾಷ್ಟ್ರ’ ಎಂದು ಘೋಷಿಸ ಬೇಕಿದೆ. ಇದರೊಂದಿಗೆ ಅಖಂಡ ಭಾರತಕ್ಕಾಗಿ ಹೋರಾಡಬೇಕಿದೆ ಎಂದು ಹಿಂದೂ ಪರಿಷತ್ತಿನ ರಾಷ್ಟ್ರೀಯ ಮಹಾಮಂತ್ರಿ ಮಹಾವೀರ್ ಅವರು ಹೇಳಿಕೆ ನೀಡಿದ್ದಾರೆ. ರಾಜ್ಯದ ಏಟಾ ಜಿಲ್ಲೆಯ ಅವಘಢನಲ್ಲಿ ಆಯೋಜಿಸಿದ್ದ ಹಿಂದುತ್ವನಿಷ್ಠರ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು. ಹಿಂದೂ ಏಕತಾ ಸಮೂಹ, ಅಂತರಾಷ್ಟ್ರೀಯ ಹಿಂದೂ ಪರಿಷತ್ ಮತ್ತು ಬಜರಂಗದಳ ಈ ಕರ‍್ಯಕ್ರಮವನ್ನು ಆಯೋಜಿಸಿತ್ತು. ಅವರ ಹೇಳಿಕೆಯನ್ನು ಉಪಸ್ಥಿತರು ಅನುಮೋದಿಸಿದರು.
ಈ ಸಂದರ್ಭದಲ್ಲಿ ಹಿಂದೂ ಏಕತಾ ಸಮೂಹದ ಸಂಸ್ಥಾಪಕ ಹಾಗೂ ರಾಷ್ಟ್ರೀಯ ಅಧ್ಯಕ್ಷರಾದ ಶುಭಂ ಹಿಂದೂ ಮಾತನಾಡಿ, ಎಲ್ಲಾ ಸನಾತನಿ ಸಂಘಟನೆಗಳನ್ನು ಒಗ್ಗೂಡಿಸಿ ರಾಷ್ಟ್ರೀಯ ಸಂಘಟನೆಯನ್ನು ರೂಪಿಸಬೇಕಿದೆ. ಬ್ರಿಟಿಷರು ಮಾಡಿದ ಕಾನೂನನ್ನು ಕೊನೆಗಾಣಿಸಲು ನಮ್ಮ ಸಂಘಟನೆ ನಿರಂತರವಾಗಿ ಹೋರಾಟ ಮುಂದುವರಿಸಲಿದೆ. ನಾವು ಸನಾತನ ವಿರೋಧಿಗಳನ್ನು ಆರ್ಥಿಕವಾಗಿ ಬಹಿಷ್ಕರಿಸಬೇಕು ಎಂದು ಹೇಳಿದರು.
ವಿಹಿಂಪ ಹಾಗೂ ಬಜರಂಗದಳ ಆಯೋಜಿಸಿದ್ದ ನಗರದಲ್ಲಿನ ಮತ್ತೊಂದು ಕರ‍್ಯಕ್ರಮದಲ್ಲಿ ವಿಹಿಂಪನ ಶಿವಾಂಗ್ ಗುಪ್ತಾ ಮಾತನಾಡಿ, ತಡವಾದರೂ ಭಾರತದಲ್ಲಿ ಹಿಂದೂಗಳು ಎಚ್ಚೆತ್ತುಕೊಳ್ಳುತ್ತಿದ್ದಾರೆ. ಮತಾಂತರ ಚಟುವಟಿಕೆಗಳನ್ನು ತಡೆಯುವ ಪ್ರಯತ್ನಗಳನ್ನು ಹೆಚ್ಚಿಸಲಾಗಿದೆ. ನಮ್ಮ ಸಮಾಜ ಶಕ್ತಿಯುತವಾಗುತ್ತದೆ ಎಂದು ಹೇಳಿದರು.