ಭೂತೋಚ್ಚಾಟನೆ, ಹಣದ ಆಮಿಷವನ್ನು ತೋರಿಸಿ ಹಿಂದೂಗಳ ಮತಾಂತರಕ್ಕೆ ಯತ್ನ !

  • ಅಜಂಗಢ (ಉತ್ತರ ಪ್ರದೇಶ) ಘಟನೆ

  • ಇಬ್ಬರು ಮಹಿಳೆಯರ ಬಂಧನ!


ಅಜಂಗಢ (ಉತ್ತರ ಪ್ರದೇಶ) – ಜಿಲ್ಲೆಯ ಮಹಾರಾಜ ಗಂಜ್‌ನಲ್ಲಿ ಹಿಂದೂಗಳನ್ನು ಮತಾಂತರಿಸುವ ಪ್ರಕರಣದ ಪ್ರಯತ್ನವೊಂದು ಬೆಳಕಿಗೆ ಬಂದಿದೆ. ಇಲ್ಲಿನ ಶಿವಶಂಕರಿ ಮಹೇಶಪುರ ಗ್ರಾಮದಲ್ಲಿ ಧಾರ್ಮಿಕ ಸಭೆ ಏರ್ಪಡಿಸಿ ಅಲ್ಲಿ ದುಷ್ಟಶಕ್ತಿಗಳನ್ನು ಹೋಗಲಾಡಿಸುವುದು, ಹಣದ ಆಮಿಷ ತೋರಿಸಿ ಅಲ್ಲಿದ್ದ ಹಿಂದೂಗಳನ್ನು ಮತಾಂತರ ಮಾಡುವ ಪ್ರಯತ್ನ ನಡೆದಿತ್ತು. ಈ ವಿಷಯದ ಮಾಹಿತಿ ಸಿಗುತ್ತಲೇ ಬಜರಂಗದಳದ ಕಾರ್ಯಕರ್ತರು ಕಾರ್ಯಕ್ರಮದ ಸ್ಥಳಕ್ಕೆ ಆಗಮಿಸಿ ಪ್ರತಿಭಟನೆ ನಡೆಸಿದರು. ಪೊಲೀಸರನ್ನು ಕರೆಸಿ ದಾಳಿ ನಡೆಸಲಾಯಿತು. ಈ ವೇಳೆ ಇಬ್ಬರು ಮಹಿಳೆಯರನ್ನು ಬಂಧಿಸಲಾಯಿತು.

ಪೊಲೀಸ್ ಆಯುಕ್ತ ಸಂಜಯ ಕುಮಾರ ಮಾತನಾಡಿ, ಜಿಲ್ಲೆಯಲ್ಲಿ ಮತಾಂತರದ ಪ್ರಕರಣ ಈ ಹಿಂದೆಯೂ ನಡೆದಿದೆ. ಮತಾಂತರಗೊಳಿಸುವವರನ್ನು ಬಂಧಿಸಿ ಕಠಿಣ ಕ್ರಮ ಕೈಗೊಂಡ ಬಳಿಕವೂ ಜಿಲ್ಲೆಯಲ್ಲಿ ಮತಾಂತರ ನಿಂತಿಲ್ಲ ಎಂದು ಹೇಳಿದರು.

ಸಂಪಾದಕೀಯ ನಿಲುವು

ಕ್ರೈಸ್ತ ಮಿಷನರಿಗಳಿಗೆ ರಾಜ್ಯದಲ್ಲಿ ಜಾರಿಯಲ್ಲಿರುವ ಮತಾಂತರ ನಿಷೇಧ ಕಾಯಿದೆಯ ಬಗ್ಗೆ ಯಾವುದೇ ಭಯವಿಲ್ಲ ಎನ್ನುವುದು ಮೇಲಿಂದಮೇಲೆ ನಡೆಯುತ್ತಿರುವ ಇಂತಹ ಘಟನೆಗಳಿಂದ ಗಮನಕ್ಕೆ ಬರುತ್ತದೆ. ಇವರಿಗೆ ಇಷ್ಟೊಂದು ಧೈರ್ಯ ಎಲ್ಲಿಂದ ಬರುತ್ತದೆ, ಇವರ ಹಿಂದೆ ಯಾವ ರಾಜಕೀಯ ಶಕ್ತಿ ಅಡಗಿದೆ ಎಂಬುದನ್ನು ತನಿಖೆ ನಡೆಸಿ ಅವರ ವಿರುದ್ಧ ಕ್ರಮ ಕೈಗೊಳ್ಳುವುದು ಆವಶ್ಯಕವಿದೆ !