ನಾವು ನಮ್ಮ ಭೂಮಿಯನ್ನು ಚೀನಾಗೆ ಆಕ್ರಮಿಸಲು ಬಿಟ್ಟಿದ್ದೇವೆ ! (ಅಂತೆ) – ಅಸದುದ್ದೀನ ಓವೈಸಿ

ಅಸದುದ್ದೀನ ಓವೈಸಿಯವರು ಪ್ರಧಾನಮಂತ್ರಿ ಮೋದಿಯವರ ಮೇಲೆ ಆರೋಪ ಹೊರಿಸುವಾಗ ನೀಡಿರುವ ಬೇಜವಾಬ್ದಾರಿ ಹೇಳಿಕೆ !

ನವದೆಹಲಿ – ಲಡಾಖನಲ್ಲಿ ಇಂದಿಗೂ ಚೀನಾದ ಸೈನ್ಯವಿದೆ; ಆದರೆ ಅಲ್ಲಿ ನಮ್ಮ ಸೈನ್ಯವಿಲ್ಲ. ಈ ಮೂಲಕ ನಾವು ಚೀನಾಗೆ ನಮ್ಮ ಭೂಮಿ ಆಕ್ರಮಿಸಲು ಬಿಡುತ್ತಿದ್ದೇವೆ. ಭಾರತವು ಇದರ ಬಗ್ಗೆ ಮೌನವಾಗಿದೆ. ನಾವು ಏನನ್ನು ಮರೆಮಾಚುತ್ತಿದ್ದೇವೆ ? ಭಾರತದ ಇಂತಹ ನಿಲುವಿನ ಹಿಂದೆ ಪ್ರಧಾನಮಂತ್ರಿ ಮೋದಿಯವರ ಚೀನಾ ರಾಷ್ಟ್ರಪತಿ ಶಿ ಜನಪಿಂಗ್ ರೊಂದಿಗೆ ಇರುವ ಸ್ನೇಹ ಕಾರಣವಾಗಿದೆಯೇ ?, ಎಂಬಂತಹ ಬೇಜವಾಬ್ದಾರಿ ಹೇಳಿಕೆಯನ್ನು ಎಂಐಎಂ ಪಕ್ಷದ ಸಂಸದ ಅಸದುದ್ದೀನ ಓವೈಸಿ ನೀಡಿದ್ದಾರೆ. ಅವರು ಮಾತು ಮುಂದುವರೆಸುತ್ತಾ ಚೀನಾ ಮತ್ತು ಭಾರತ ಗಡಿಯಲ್ಲಿ ಲಡಾಖಿನ ೨೫ ಜಾಗಗಳಲ್ಲಿ ಭಾರತೀಯ ಸೈನ್ಯ ಹೋಗಲು ಸಾಧ್ಯವಿಲ್ಲ, ಎಂದು ಸೈನ್ಯವು ಮೊದಲೇ ಘೋಷಿಸಿದೆ, ಎಂದು ಹೇಳಿದರು. (ಈ ರೀತಿಯ ಭಾಷಣ ಮಾಡಿ ಓವೈಸಿಯವರಿಗೆ ಏನು ಹೇಳಲಿಕ್ಕಿದೆ ? – ಸಂಪಾದಕರು)

ಸಂಪಾದಕೀಯ ನಿಲುವು

ಭಾರತದ ಐಕ್ಯತೆ ಮತ್ತು ಅಖಂಡತೆಗೆ ಧಕ್ಕೆ ತರಲು ಧೂರ್ತ ಚೀನಾ ಮತ್ತು ಜಿಹಾದಿ ಪಾಕಿಸ್ತಾನವು ಮೊದಲೇ ಕಾದು ಕುಳಿತಿವೆ. ಹೀಗಿರುವಾಗ ಈ ರೀತಿಯ ರಾಷ್ಟ್ರಘಾತಕ ಹೇಳಿಕೆಗಳು ಶತ್ರು ರಾಷ್ಟ್ರಗಳ ಕೂಟನೀತಿಯ ಯುದ್ಧಕ್ಕೆ ಕಾರಣ ಆಗಬಹುದು ಎಂಬುದು ಓವೈಸಿಯವರಿಗೆ ಹೇಗೆ ತಿಳಿಯಲಿಲ್ಲ ?