ಸ್ವಾತಂತ್ರ್ಯ ಬಂದು 75 ವರ್ಷಗಳಾದರೂ ಭಯೋತ್ಪಾದನೆಯ ಕರಿ ನೆರಳಿನಲ್ಲಿ ಸ್ವಾತಂತ್ರ್ಯದಿನವನ್ನು ಆಚರಿಸಬೇಕಾಗಿರುವುದು ಲಜ್ಜಾಸ್ಪದವಾಗಿದೆ !
ಲಕ್ಷ್ಮಣಪುರಿ (ಉತ್ತರಪ್ರದೇಶ) – ಭಾರತದ ಸ್ವಾತಂತ್ರ್ಯದಿನ ಅಂದರೆ ಆಗಸ್ಟ್ 15 ರಂದು ಹಿಜಬುಲ ಉಗ್ರರು ದೇಶದಲ್ಲಿ ಭಯೋತ್ಪಾದಕ ಚಟುವಟಿಕೆಗಳನ್ನು ನಡೆಸುವ ಷಡ್ಯಂತ್ರವನ್ನು ರೂಪಿಸಿದ್ದ. ಉತ್ತರಪ್ರದೇಶದ ಭಯೋತ್ಪಾದನಾ ವಿರೋಧಿ ದಳವು ಬಂಧಿಸಿದ್ದ ಹಿಜಬುಲ್ ಮುಜಾಹಿದನ ಭಯೋತ್ಪಾದಕ ಅಹಮದ ರಝಾನ ವಿಚಾರಣೆ ನಡೆಸುತ್ತಿದೆ. ಈ ವಿಚಾರಣೆಯಲ್ಲಿ ಅಹಮದ ರಝಾನು ಅನೇಕ ಗುಪ್ತ ಸಂಗತಿಗಳನ್ನು ಬಹಿರಂಗಗೊಳಿಸಿದನು. ಈ ವಿಚಾರಣೆಯಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿನ ಸಂಭಾಷಣೆ, ಭಯೋತ್ಪಾದಕ ತರಬೇತಿ, ಪಾಕಿಸ್ತಾನದಿಂದ ತಾಲಿಬಾನಿನ ಸಂಬಂಧಗಳ ಬಗ್ಗೆ ತಿಳಿದು ಬಂದಿದೆ. ವಿಚಾರಣೆಯ ಸಮಯದಲ್ಲಿ ರಝಾ ಹಾಗೂ ಅವನ ಸಹಚರನು ಭಾರತದಲ್ಲಿ ಭಯೋತ್ಪಾದನಾ ಚಟುವಟಿಕೆಗಳನ್ನು ನಡೆಸುವ ಷಡ್ಯಂತ್ರವನ್ನು ರಚಿಸಿರುವುದು ಬೆಳಕಿಗೆ ಬಂದಿದೆ. ಈ ಮಾಹಿತಿಯ ಮೇರೆಗೆ ಪೊಲೀಸರು ಕಾರ್ಯಾಚರಣೆಯನ್ನು ನಡೆಸಿದ್ದರಿಂದ ಈ ಷಡ್ಯಂತ್ರವು ವಿಫಲಗೊಳಿಸಲಾಯಿತು.
1. ಅಹಮದ ರಝಾನಿಂದ ದೊರೆತ ಮಾಹಿತಿಯ ಆಧಾರದಲ್ಲಿ ಭಯೋತ್ಪಾದನಾ ವಿರೋಧಿ ದಳವು ಅವನ ಮನೆಯಿಂದ ಕೆಲವು ಶಸ್ತ್ರಾಸ್ತ್ರಗಳನ್ನು ಜಪ್ತು ಮಾಡಿತು. ಪಾಕಿಸ್ತಾನಿ ಭಯೋತ್ಪಾದಕರೊಂದಿಗೆ ಸಂಪರ್ಕ ಸಾಧಿಸಿರುವುದು ಬಹಿರಂಗವಾದ ನಂತರ ಅಹಮದ ರಝಾನನ್ನು ಬಂಧಿಸಲಾಗಿತ್ತು.
2. ಭಯೋತ್ಪಾದಕ ಅಹಮದ ರಝಾನು ಜೈಶ-ಎ-ಮಹಮ್ಮದನ ಪಾಕಿಸ್ತಾನಿ ಭಯೋತ್ಪಾದಕ ವಾಲೀದನ ಸಂಪರ್ಕದಲ್ಲಿದ್ದನು. ಅವನ ಸಲಹೆಯ ಮೇರೆಗೆ ರಝಾನು ಸ್ವಯಂಚಾಲಿತ ಪಿಸ್ತೂಲು ಖರೀದಿಸಿದ್ದನು.
ಸ್ವಾತಂತ್ರ್ಯದಿನದ ನಿಮಿತ್ತ ದೆಹಲಿಯಲ್ಲಿ ಬಿಗಿ ಸುರಕ್ಷಾವ್ಯವಸ್ಥೆ
ನವದೆಹಲಿ – ಸ್ವಾತಂತ್ರ್ಯದಿನದ ನಿಮಿತ್ತ ದೆಹಲಿಯಲ್ಲಿ ಸುರಕ್ಷಾವ್ಯವಸ್ಥೆಯನ್ನು ಬಿಗಿಯಾಗಿಸಲಾಗಿದೆ. ಕೆಂಪು ಕೋಟೆ ಹಾಗೂ ರಾಜಘಾಟ ಸಹಿತ ರಾಜಧಾನಿಯ ಮೂಲೆ ಮೂಲೆಗಳಲ್ಲಿ ಪೊಲೀಸ ಬಂದೋಬಸ್ತು ಇಡಲಾಗಿದೆ. (ಭಾರತಕ್ಕೆ ಸ್ವಾತಂತ್ರ್ಯ ದೊರೆತು 76 ವರ್ಷಗಳಾದವು. ಆದರೂ ಸ್ವಾತಂತ್ರ್ಯ ದಿನದಂದು ರಾಜಧಾನಿಯಲ್ಲಿ ಬಿಗಿಯಾದ ಸುರಕ್ಷಾ ವ್ಯವಸ್ಥೆಯನ್ನು ಏಕೆ ಕಲ್ಪಿಸಬೇಕಾಗುತ್ತದೆ ? – ಸಂಪಾದಕರು) ಭಾರತವು ಆಗಸ್ಟ್ 15 ರಂದು 77 ನೇ ಸ್ವಾತಂತ್ರ್ಯ ದಿನವನ್ನು ಆಚರಿಸಲಿದೆ. ದೇಶದಾದ್ಯಂತ ಈ ಮಹೋತ್ಸವದ ಉತ್ಸಾಹಪೂರ್ಣ ಸಿದ್ಧತೆ ನಡೆದಿದೆ. ದೇಶದ ರಾಜಧಾನಿಯಾದ ದೆಹಲಿಯಲ್ಲಿ ಮುಖ್ಯ ಕಾರ್ಯಕ್ರಮಗಳು ನಡೆಯಲಿವೆ. ಪ್ರಧಾನಿ ನರೇಂದ್ರ ಮೋದಿಯವರು ಕೆಂಪು ಕೋಟೆಯಲ್ಲಿ ರಾಷ್ಟ್ರಧ್ವಜವನ್ನು ಹಾರಿಸಿ ದೇಶವನ್ನು ಸಂಬೋಧಿಸಲಿದ್ದಾರೆ.
UP on alert ahead of Independence Day celebrations #Anantnag #Carry #Independence #Jammu #JammuKashmir https://t.co/6aQCmbQfG4
— TeluguStop.com (@telugustop) August 12, 2023