ಚೀನಾ ಮತ್ತು ಪಾಕಿಸ್ತಾನದ ಮೇಲೆ ನಿಗಾ ಇಡಲು ‘ಹೆರಾನ್ ಮಾರ್ಕ್ 2’ ಡ್ರೊನಗಳ ನೇಮಕ !

ಭಾರತದಲ್ಲಿ ತಯಾರಾದ ಈ ಡ್ರೋನ್ ಗಳಲ್ಲಿ 36 ಗಂಟೆ ಕಾರ್ಯ ಮಾಡುವ ಕ್ಷಮತೆ !

ನವ ದೆಹಲಿ – ಚೀನಾ ಮತ್ತು ಪಾಕಿಸ್ತಾನದ ಚಟುವಟಿಕೆಗಳ ಮೇಲೆ ನಿಗಾ ಇಡಲು ಭಾರತೀಯ ವಾಯುಪಡೆಯು ಗಡಿಭಾಗದಲ್ಲಿ ‘ಹೆರಾನ್ ಮಾರ್ಕ್ 2’ ಡ್ರೋನ್ ಗಳನ್ನು ನೇಮಿಸಿದೆ. ಈ ಡ್ರೋನ್ ಗಳು ಏಕಕಾಲದಲ್ಲಿ ಚೀನಾ ಮತ್ತು ಪಾಕಿಸ್ತಾನ ಎರಡರ ಮೇಲೂ ನಿಗಾ ಇಡಬಲ್ಲವು. ವಿಶೇಷವೆಂದರೆ ಈ ಡ್ರೋನ್ ಗಳು ದೂರದವರೆಗೆ ಹೊಡೆಯುವ ಕ್ಷಮತೆ ಹೊಂದಿರುವ ಕ್ಷಿಪಣಿಗಳನ್ನು ಮತ್ತು ಇತರ ಶಸ್ತ್ರಾಸ್ತ್ರಗಳನ್ನು ಸಾಗಿಸುವ ಸಾಮರ್ಥ್ಯ ಹೊಂದಿವೆ. ಇದೇ ರೀತಿ ಶಸ್ತ್ರಾಸ್ತ್ರಗಳನ್ನು ಒಳಗೊಂಡಿದೆ. ಈ ರೀತಿಯ ನಾಲ್ಕು ಡ್ರೋನ್ ಗಳನ್ನು ನೇಮಿಸಲಾಗಿದೆ. ಈ ಡ್ರೋನ್ ಗಳು ಸಾಧಾರಣವಾಗಿ ದೂರದ ಅಂತರದಲ್ಲಿ 36 ಗಂಟೆಗಳ ಕಾಲ ಕಾರ್ಯ ನಿರ್ವಹಿಸಬಲ್ಲವು.

ಈ ಡ್ರೋನ್ ನ ಅಧಿಕಾರಿ ವಿಂಗ್ ಕಮಾಂಡರ್ ಪಂಕಜ ರಾಣ ಮಾತನಾಡುತ್ತಾ, ಈ ಡ್ರೋನ್ ಗಳು ಯಾವುದೇ ಹವಾಮಾನದಲ್ಲಿ ಹಾಗೆಯೇ ಯಾವುದೇ ಸ್ಥಳದಲ್ಲಿ ಕಾರ್ಯನಿರ್ವಹಿಸಬಲ್ಲವು. ಈ ಡ್ರೋನ್ ಗಳನ್ನು ‘ಮೇಕ್ ಇನ್ ಇಂಡಿಯಾ’ ದ ಅಡಿಯಲ್ಲಿ ಭಾರತದಲ್ಲಿ ತಯಾರಿಸಲಾಗಿದೆ ಎಂದು ಹೇಳಿದರು.