ಜೌನ್‌ಪುರ (ಉತ್ತರ ಪ್ರದೇಶ)ದಲ್ಲಿ ‘ಪಾಕಿಸ್ತಾನ್ ಜಿಂದಾಬಾದ್’ ಎಂದು ಘೋಷಣೆ ಕೂಗಿದ 13 ಮುಸ್ಲಿಮರಿಗೆ ಒಟ್ಟು 1 ಕೋಟಿ ರೂಪಾಯಿಗಳ ದಂಡ !

  • ಸರಕಾರಿ ಜಾಗದಲ್ಲಿ ಮನೆ ಕಟ್ಟಿರುವುದು ಕಂಡು ಬಂದಿದೆ !

  • ದಂಡ ಹಾಗೂ ತಾವೇ ಅತಿಕ್ರಮಣವನ್ನು ತೆಗೆದುಹಾಕಲು ಆಡಳಿತವು 15 ದಿನಗಳ ಕಾಲಾವಕಾಶ !

ಜೌನ್‌ಪುರ (ಉತ್ತರ ಪ್ರದೇಶ) – ಜುಲೈ 29 ರಂದು ಮೊಹರಂ ಸಂದರ್ಭದಲ್ಲಿನ ಮೆರವಣಿಗೆಯಲ್ಲಿ 33 ಮುಸ್ಲಿಮರು ‘ಪಾಕಿಸ್ತಾನ್ ಜಿಂದಾಬಾದ್’ ಘೋಷಣೆಗಳನ್ನು ಕೂಗಿದ್ದರು. ಅವರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾದಾಗ ಪೊಲೀಸರು ಎಲ್ಲರ ವಿರುದ್ಧ ಪ್ರಕರಣವನ್ನು ದಾಖಲಿಸಿದ್ದರು. ಈ 33 ಆರೋಪಿಗಳ ಪೈಕಿ 13 ಜನರ ಮನೆಗಳು ಜಿಲ್ಲಾಡಳಿತದ ಭೂಮಿಯ ಮೇಲೆ ಅನಧಿಕೃತವಾಗಿ ಒತ್ತುವರಿ ಮಾಡಿಕೊಂಡು ನಿರ್ಮಿಸಿಕೊಂಡಿರುವುದು ಪತ್ತೆಯಾಗಿದೆ. ಆದ್ದರಿಂದ 15 ದಿನಗಳೊಳಗೆ ತಾವಾಗಿಯೇ ಒತ್ತುವರಿ ತೆರವು ಮಾಡುವಂತೆ ಸಂಬಂಧಪಟ್ಟ 13 ಜನರಿಗೆ ನೋಟಿಸ್ ನೀಡಲಾಗಿದೆ. ಅಲ್ಲದೆ, ಈ 13 ಜನರಿಗೆ ಒಟ್ಟು 1 ಕೋಟಿ ರೂಪಾಯಿಗಳ ದಂಡವನ್ನು ವಿಧಿಸಲಾಗಿದ್ದು, ಪ್ರತಿಯೊಬ್ಬರು ಕನಿಷ್ಠ 32 ಸಾವಿರದಿಂದ ಗರಿಷ್ಠ 19.8 ಲಕ್ಷ ರೂಪಾಯಿವರೆಗೆ ಪಾವತಿಸಬೇಕಾಗುತ್ತದೆ ಎಂದು ಸರಕಾರಿ ಅಧಿಕಾರಿಗಳು ತಿಳಿಸಿದ್ದಾರೆ. 15 ದಿನದೊಳಗೆ ಮಾಡದಿದ್ದರೆ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದ್ದಾರೆ.

ಸ್ಥಳೀಯ ಮಾಧ್ಯಮಗಳು ನೀಡಿರುವ ಮಾಹಿತಿಯನುಸಾರ ಜೌನಪುರ ಜಿಲ್ಲೆಯ ಮಿರ್‌ಗಂಜ್ ಬಳಿಯ ಗೋಧನಾ ಮತ್ತು ಕಿಶುನದಾಸ್‌ಪುರದಲ್ಲಿ ನಡೆದ ಪ್ರಕರಣವಾಗಿದೆ. ಅಗಸ್ಟ್ 9 ಮತ್ತು ಆಗಸ್ಟ್ 12 ಈ ಎರಡು ದಿನಗಳಂದು ಸ್ಥಳೀಯ ಆಡಳಿತವು ಆರೋಪಿಗಳ ಮನೆಗಳನ್ನು ಶೋಧಿಸಿದಾಗ 13 ಆರೋಪಿಗಳು ಸರಕಾರಿ ಭೂಮಿಯ ಮೇಲೆ ಹಿಡಿತ ಸಾಧಿಸಿರುವುದು ಗಮನಕ್ಕೆ ಬಂದಿದೆ.

ಬಂಧಿತ 33 ಜನರ ಹೆಸರು !
ಪಾಕಿಸ್ತಾನವನ್ನು ಬೆಂಬಲಿಸಿ ಘೋಷಣೆ ಕೂಗಿದವರಲ್ಲಿ ಸಾಹಿಲ್ ಅಲಿ, ಈದು, ಕೈಫ್, ಮೊಹಮ್ಮದ್ ಕೈಶ್, ಮೊಹಮ್ಮದ್ ಶರೀಫ್, ಸಲೀಮ್, ದಿಲಶಾದ್, ಸಜ್ಜಾಕನ ಮಗ ಸಂಜಯ, ತಾಲೀಮ್, ನೌಶಾದ್, ಮೊಹಮ್ಮದ್ ಅಲಿ, ವಸಿಮ್, ಅಫಜಲ್, ಮೊಹಮ್ಮದ್ ಕೈಫ್, ಇಬ್ರಾರ್, ಅಫ್ತಾಬ್, ಇರ್ಷಾದ್, ಮುಷ್ತಾಕ್, ದಿಲ್ಶಾದ್ ಅಲಿ, ಶೇರ್ ಅಲಿ, ರಫೀಕ್, ಇಶ್ತಿಯಾಕ್, ಎಜಾಜ್, ಇಬನೈನ್, ಮಜೀದ್, ಸರ್ಫರಾಜ್, ಕೈಫ್, ಅಸಲಮ್, ಮೆಹತಾಬ್, ಅಬ್ದುಲ್ ಅಜೀಜ್, ಮೊಹಮ್ಮದ್ ಶಮೀಮ್, ಇಜಾಜ್ ಅಹ್ಮದ್ ಮತ್ತು ಮೊಹಮ್ಮದ್ ಫಿರೋಜ್ ಅವರನ್ನು ಬಂಧಿಸಲಾಗಿದೆ. ಇವರು ಜೌನಪುರ ಜಿಲ್ಲೆ ಹಾಗೂ ಪ್ರಯಾಗರಾಜ್ ನಿವಾಸಿಗಳಾಗಿದ್ದಾರೆ.

ಸಂಪಾದಕೀಯ ನಿಲುವು

ದೇಶವಿರೋಧಿ ಚಟುವಟಿಕೆಗಳನ್ನು ನಡೆಸುವವರಿಗೆ ಈ ರೀತಿ ಕಠಿಣ ಶಿಕ್ಷೆಯಾದಾಗ ಮಾತ್ರ ಅವರು ಸರಿದಾರಿಗೆ ಬರುತ್ತಾರೆ. ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಅವರ ಆಡಳಿತದಂತಹ ಕಠಿಣ ನಿಯಮಗಳನ್ನು ಇತರ ಭಾಜಪ ಆಡಳಿತವಿರುವ ರಾಜ್ಯಗಳಲ್ಲಿಯೂ ಜಾರಿಗೆ ತರುವುದು ಆವಶ್ಯಕವಾಗಿದೆ !

‘ಭಾರತ್ ತೇರೆ ತುಕಡೆ ಹೋಂಗೆ’ ಎಂಬ ಘೋಷಣೆಯನ್ನು ಬೆಂಬಲಿಸುವ ಮತ್ತು ಜಾತ್ಯತೀತತೆಯ ಡಂಗುರ ಬಾರಿಸುವುದರಲ್ಲಿ ಧನ್ಯತೆ ತಿಳಿಯುವ ಉತ್ತರ ಪ್ರದೇಶ ಸರಕಾರದ ಈ ಕ್ರಮವನ್ನು ವಿರೋಧಿಸಿದರೆ ಆಶ್ಚರ್ಯಪಡಬೇಕಿಲ್ಲ !