ಮಾಲೆಗಾಂವ್‌ ನಲ್ಲಿ ‘ಪಿಎಫ್‌ಐ’ನ ನಿಕಟವರ್ತಿ ಶಂಕಿತನ ಬಂಧನ !

ಮಾಲೆಗಾಂವ್‌ನಲ್ಲಿ ರಾಷ್ಟ್ರೀಯ ತನಿಖಾ ದಳ ತಂಡದ ಕಾರ್ಯಾಚರಣೆ

ಮಾಲೆಗಾಂವ್ – ರಾಷ್ಟ್ರೀಯ ತನಿಖಾ ದಳ(‘ಎನ್.ಐ.ಎ.’) ತಂಡವು ಅಗಸ್ಟ 13 ರಂದು ಮುಂಜಾನೆ ಪುನಃ ಮಾಲೆಗಾಂವ್ ನಗರದ ಮೊಮಿನ್‌ಪುರ ಪ್ರದೇಶದ ನಿವಾಸಿ ಮತ್ತು ‘ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ’ (‘ಪಿಎಫ್‌ಐ’) ನೊಂದಿಗೆ ಸಂಬಂಧ ಹೊಂದಿದ್ದ ಗುಫರಾನ್ ಖಾನ್ ಸುಭಾನ್ ಖಾನ್ ನನ್ನು ವಶಕ್ಕೆ ಪಡೆದು ನಗರ ಪೊಲೀಸ್ ಠಾಣೆಯಲ್ಲಿ 5 ಗಂಟೆಗಳ ಕಾಲ ವಿಚಾರಣೆ ನಡೆಸಿತು. `ಮತ್ತೆ ವಿಚಾರಣೆಗೆ ಕರೆಸಲಾಗುವುದು’ ಎಂದು ಹೇಳಿ ಬಿಡುಗಡೆ ಮಾಡಿದ್ದಾರೆ.

1. ಕೆಲವು ತಿಂಗಳ ಹಿಂದೆ ಉಗ್ರ ನಿಗ್ರಹ ದಳ (‘ಎ.ಟಿ.ಎಸ್.’ನ) ಮಾಧ್ಯಮದಿಂದ ‘ಪಿ.ಎಫ್.ಐ.’ ನೊಂದಿಗೆ ಸಂಬಂಧ ಹೊಂದಿರುವ ಓರ್ವ ಶಂಕಿತನನ್ನು ಬಂಧಿಸಲಾಗಿತ್ತು.

2. ಗುಫರಾನ್ ಖಾನ್ ಸುಭಾನ್ ಖಾನ್ ಮನೆಗೆ ಮುಂಜಾನೆ 4.30 ರ ಸುಮಾರಿಗೆ ದಾಳಿ ನಡೆಸಿ, ಅವನನ್ನು ಮನೆಯಿಂದ ವಶಕ್ಕೆ ಪಡೆದು, ಹೆಚ್ಚಿನ ವಿಚಾರಣೆಗಾಗಿ ನಗರ ಪೊಲೀಸ್ ಠಾಣೆಗೆ ಕರೆದೊಯ್ಯಲಾಯಿತು.

3. ಗುಫರಾನ ಮೊಬೈಲ ಫೋನ್‌ ಮೂಲಕ ವಿದೇಶದಲ್ಲಿರುವ ಯಾರನ್ನಾದರೂ ಸಂಪರ್ಕಿಸುತ್ತಾನೆ. ಹಾಗೆಯೇ ಅವನು ಪಿ.ಎಫ್.ಐ. ಸಂಘಟನೆಯ ಸದಸ್ಯನಾಗಿದ್ದೂ ಜಿಹಾದಿ ಯುವಕರಿಗೆ ದೈಹಿಕ ತರಬೇತಿ ನೀಡುವಲ್ಲಿ ತೊಡಗಿಸಿಕೊಂಡಿದ್ದಾನೆ ಎಂದು ಅವನ ಮೇಲೆ ಸಂದೇಹವಿತ್ತು.

4. ಈ ಹಿಂದೆ, `ರಾಷ್ಟ್ರೀಯ ತನಿಖಾ ದಳ’ದ ಅಧಿಕಾರಿಗಳು ದಾಳಿ ನಡೆಸಿ ‘ಪಿ.ಎಫ್.ಐ.’ಗೆ ಸಂಬಂಧಿಸಿದ ಕೆಲವು ಜಿಹಾದಿ ಕಾರ್ಯಕರ್ತರನ್ನು ಬಂಧಿಸಿದ್ದರು. ತದನಂತರ ಭಯೋತ್ಪಾದಕ ಸಂಘಟನೆಗಳಿಗೆ ಸಹಾಯ ಮಾಡಿರುವ ಕಾರಣದಿಂದ ಮಧ್ಯಂತರ ಕಾಲದಲ್ಲಿ ಒಬ್ಬನನ್ನು ಬಂಧಿಸಲಾಗಿತ್ತು. ಕಳೆದ ವರ್ಷ ಮಾಲೆಗಾಂವ್‌ನಲ್ಲಿ ಪಿ.ಎಫ್.ಐ. ಸಂಘಟನೆಯ ವಿರುದ್ಧ ದಾಖಲಾಗಿದ್ದ ಒಂದು ಪ್ರಕರಣದಲ್ಲಿ ಗುಫರಾನ್ ಕೂಡ ಆರೋಪಿಯಾಗಿದ್ದನು.

5. ದಾಳಿಯ ಸಮಯದಲ್ಲಿ ‘ಆಕ್ಷೇಪಾರ್ಹ ದಾಖಲೆಗಳನ್ನು ವಶಪಡಿಸಲಾಗಿದೆಯೇ?’, ಎಂಬ ಮಾಹಿತಿ ಇದುವರೆಗೂ ಸಿಗಲಿಲ್ಲ.