ಆಂಧ್ರಪ್ರದೇಶದಲ್ಲಿ ‘ವಂದೇ ಭಾರತ್’ಎಕ್ಸ ಪ್ರೆಸ್ ರೈಲಿನಲ್ಲಿ ಸಿಗರೇಟ್ ಹಚ್ಚಿದ್ದರಿಂದ ಗೊಂದಲ !

ಗಾಡಿಯ ಗಾಜನ್ನು ಒಡೆದು ಹೊರಗೆ ಜಿಗಿದರು

ತಿರುಪತಿ – ತಿರುಪತಿಯಿಂದ ಸಿಕಂದರಾಬಾದ್ ಗೆ ಹೋಗುವ ‘ವಂದೇ ಭಾರತ್’ ಎಕ್ಸ ಪ್ರೆಸ್ ರೈಲಿನಲ್ಲಿ ಭಾರಿ ಗೊಂದಲ ಆಗಿರುವ ವಿಡಿಯೋ ವೈರಲ್ ಆಗಿದೆ. ಪ್ರಯಾಣಿಕರು ಎದ್ದುಬಿದ್ದು ಗಾಡಿಯ ಗಾಜನ್ನು ಒಡೆದು ಹೊರ ಜಿಗಿಯಲು ಪ್ರಯತ್ನಿಸಿದರು. ಈ ಎಲ್ಲಾ ಗೊಂದಲದಲ್ಲಿ ಪ್ರಯಾಣಿಕನೊಬ್ಬನು ನಿಯಮಬಾಹಿರವಾಗಿ ಸಿಗರೇಟ್ ಅನ್ನು ಹಚ್ಚಿದ್ದೇ ಕಾರಣ ಎಂದು ಗೊತ್ತಾಗಿದೆ.

ಈ ಗಾಡಿಯಲ್ಲಿ ಓರ್ವ ಪ್ರಯಾಣಿಕನಿಗೆ ಸಿಗರೇಟ್ ಸೇದುವ ಇಚ್ಛೆಯಾಯಿತು. ಆದರೆ ರೈಲಿನಲ್ಲಿ ಎಲ್ಲರ ಮುಂದೆ ಸಿಗರೇಟ್ ಸೇದುವುದು ಸಾಧ್ಯವಿರಲಿಲ್ಲ. ಅವನು ಶೌಚಾಲಯದ ಒಳಗೆ ಹೋಗಿ ಸಿಗರೇಟ್ಅನ್ನು ಹಚ್ಚಿದನು. ಸ್ವಲ್ಪ ಸಮಯದ ನಂತರ ಶೌಚಾಲಯದ ಒಳಗಿನಿಂದ ಸಿಗರೇಟಿನ ಹೊಗೆ ಬರಲು ಪ್ರಾರಂಭವಾಯಿತು ತಕ್ಷಣ “ಫೈರ್ ಅಲಾರಂ” ಬಾರಿಸಿತು. ಆನಂತರ ಸ್ವಯಂ ಚಾಲಿತ ಅಗ್ನಿಶಾಮಕ ವ್ಯವಸ್ಥೆಯನ್ನು ಸಕ್ರಿಯಗೊಳಿಸಲಾಯಿತು. ‘ಪಾಯರ್ ಅಲಾರಾಂ’ ಬಾರಿಸಿದಾಗ ಪ್ರಯಾಣಿಕರು ಹೆದರಿದರು. ಮತ್ತು ಭಯದಿಂದ ಜೀವ ಉಳಿಸಿಕೊಳ್ಳಲು ಪ್ರಯಾಣಿಕರು ಓಡಲಾರಂಭಿಸಿದರು. ರೈಲಿಗೆ ಬೆಂಕಿ ತಗಲಿದೆ ಎಂಬ ಭಯದಿಂದ ಕೆಲವರು ಭೋಗಿಯಲ್ಲಿನ ಗಾಜನ್ನು ಹೊಡೆದು ಹೊರಬರಲು ಪ್ರಯತ್ನಿಸಿದರು. (ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸುವಾಗ ಅದರ ಬಗ್ಗೆ ಅಷ್ಟೇ ಅರಿವು ಮೂಡಿಸುವುದು ಅವಶ್ಯಕವಾಗಿದೆ, ಇದು ರೈಲ್ವೆಯ ಆಡಳಿತ ಮಂಡಳಿ ಗಮನಕ್ಕೆ ಬರುವುದಿಲ್ಲವೇ ? -ಸಂಪಾದಕರು) ಈ ಎಲ್ಲಾ ಗೊಂದಲಗಳಿಗೆ ಕಾರಣನಾದ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಪ್ರಕರಣದ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ. (ಆರೋಪಿಯ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು. ಇದರಿಂದ ಇತರ ಪ್ರಯಾಣಿಕರು ಇಂತಹ ಕೃತ್ಯಗಳನ್ನು ಮಾಡಲು ಧೈರ್ಯ ಮಾಡುವುದಿಲ್ಲ ! -ಸಂಪಾದಕರು)