ಕೇರಳದ ಮುಖ್ಯಮಂತ್ರಿಯವರ ಪುತ್ರಿ ಯಾವುದೇ ಕೆಲಸ ಮಾಡದೆ ಪ್ರತಿ ತಿಂಗಳು 8 ಲಕ್ಷ ರೂಪಾಯಿ ಪಡೆದರು !

ತಿರುವನಂತಪುರಂ – ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಪುತ್ರಿ ವೀಣಾ ವಿಜಯನ್ ವಿರುದ್ಧ ಭ್ರಷ್ಟಾಚಾರ ಆರೋಪಗಳು ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಕೇರಳದಲ್ಲಿ ರಾಜಕೀಯ ವಾತಾವರಣ ಪ್ರಕ್ಷುಬ್ಧಗೊಂಡಿದೆ. ವೀಣಾ ವಿಜಯನ್ ಮತ್ತು ಅವರ ಕಂಪನಿ ಯಾವುದೇ ಕೆಲಸ ಮಾಡದೆ ಪ್ರತಿ ತಿಂಗಳು 8 ಲಕ್ಷ ರೂಪಾಯಿ ಪಡೆಯುತ್ತಿರುವುದು ಎಂದು ಆದಾಯ ತೆರಿಗೆ ಇಲಾಖೆಯ ತನಿಖೆಯಿಂದ ಬಹಿರಂಗವಾಗಿದೆ. ವೀಣಾ ಮತ್ತು ಅವರ ಕಂಪನಿ ಕಳೆದ 3 ವರ್ಷಗಳಿಂದ ಯಾವುದೇ ಕೆಲಸ ಮಾಡದೆ ಖಾಸಗಿ ಕಂಪನಿಗಳಿಂದ ಹಣ ಪಡೆದಿರುವ ಆರೋಪವಿದೆ. ಸುದ್ದಿ ಸಂಸ್ಥೆಯೊಂದರ ಪ್ರಕಾರ, ವೀಣಾ ವಿಜಯನ್ ಮತ್ತು ಅವರ ಕಂಪನಿಗೆ ‘ಕೊಚ್ಚಿ ಮಿನರಲ್ಸ್ ಮತ್ತು ರೂಟೈಲ್ ಲಿಮಿಟೆಡ್’ ಎಂಬ ಕಂಪನಿಯ ವತಿಯಿಂದ ಮೂರು ವರ್ಷಗಳವರೆಗೆ ಪ್ರತಿ ತಿಂಗಳು 8 ಲಕ್ಷ ರೂಪಾಯಿ ನೀಡಲಾಗುತ್ತಿತ್ತು. ವೀಣಾ ವಿಜಯನ್ ಅವರ ಪತಿ ಮೊಹಮ್ಮದ್ ರಿಯಾಜ್ ಅವರು ಪಿಣರಾಯಿ ವಿಜಯನ್ ಸರಕಾರದಲ್ಲಿ ಲೋಕೋಪಯೋಗಿ ಸಚಿವರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಸಂಪಾದಕೀಯ ನಿಲುವು

ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಸಂಪೂರ್ಣ ಕುಟುಂಬವೇ ಭ್ರಷ್ಟಾಚಾರದಲ್ಲಿ ಮುಳುಗಿರುವುದರ ಉದಾಹರಣೆ