ಸತತ ಮಳೆಯಿಂದ ವಾತಾವರಣ ತಣ್ಣಗಾಗುತ್ತಿದ್ದಂತೆ ಹಲವರು ಕೈಕಾಲುಗಳ ಸಂಧಿ ನೋವಿನಿಂದ (ಕೀಲುನೋವು) ಬಳಲುತ್ತಾರೆ. ಈ ರೀತಿ ಸಂಧುಗಳಲ್ಲಿ ನೋವಾಗುತ್ತಿದ್ದಲ್ಲಿ, ಹೀಟಿಂಗ್ ಪ್ಯಾಡ್ ನ ಸಹಾಯದಿಂದ ಕೈಕಾಲುಗಳಿಗೆ ಶಾಖ ನೀಡಿ. ಆಗ ನೋವು ತಕ್ಷಣ ಕಡಿಮೆಯಾಗಿ ಆರಾಮವೆನಿಸತೊಡಗುತ್ತದೆ. ಶಾಖ ನೀಡಲು ಬಿಸಿನೀರು, ಹೇರ್ ಡ್ರೈಯರ್ (ಕೂದಲು ಒಣಗಿಸುವ ಯಂತ್ರ)ವನ್ನು ಸಹ ಬಳಸಬಹುದು. ಆದರೆ ಯಾವುದಾದರೊಂದು ಪದ್ಧತಿಯಿಂದ ನೋವಿರುವ ಭಾಗಕ್ಕೆ ಶಾಖ ನೀಡುವುದು ಮಹತ್ವದ್ದಾಗಿದೆ. – ವೈದ್ಯ ಮೇಘರಾಜ ಮಾಧವ ಪರಾಡಕರ, ಸನಾತನ ಆಶ್ರಮ, ರಾಮನಾಥಿ, ಗೋವಾ. (23.7.2023)