ಭಾರತ ಮತ್ತು ಲೋಕಸಭೆ ಮಣಿಪುರದಲ್ಲಿನ ಮಾತೆ-ಭಗಿನಿಯರ ಜೊತೆಗಿದೆ !

  • ವಿಶ್ವಾಸ ವ್ಯಕ್ತಪಡಿಸಿದ ಪ್ರಧಾನಿ ನರೇಂದ್ರ ಮೋದಿ !

  • ಲೋಕಸಭೆಯಲ್ಲಿ ಅವಿಶ್ವಾಸ ಪ್ರಸ್ತಾವ ರದ್ದು !

  • ಕಾಂಗ್ರೆಸ್ಸಿನ ನಾಯಕ ಅಧೀರ ರಂಜನ ಚೌಧರಿ ಅಮಾನತು !

ನವ ದೆಹಲಿ – ಹಿಂಸಾಚಾರದಲ್ಲಿ ಹೊತ್ತಿ ಉರಿದ ಮಣಿಪುರದಲ್ಲಿ ಖಂಡಿತವಾಗಿ ಶಾಂತಿಯ ಸೂರ್ಯ ಉದಯಿಸುವುದು. ಕೇಂದ್ರ ಮತ್ತು ರಾಜ್ಯ ಸರಕಾರ ಎಲ್ಲಾ ಹಿಂಸಾಚಾರಿಗಳಿಗೆ ಕಠಿಣ ಶಿಕ್ಷೆ ನೀಡುವುದು. ಮಣಿಪುರದಲ್ಲಿನ ಮಾತೆ-ಭಗೀನಿಯರು, ಈ ದೇಶ ಮತ್ತು ಸಂಸತ್ತು ನಿಮ್ಮ ಜೊತೆಗೆ ಇದೆ ಎಂದು ಗಮನದಲ್ಲಿಟ್ಟುಕೊಳ್ಳಬೇಕು. ನಾನು ಮಣಿಪುರವಾಸಿಯರಿಗೆ, ಮಣಿಪುರದಲ್ಲಿ ಮತ್ತೊಮ್ಮೆ ವಿಕಾಸದ ದಿಕ್ಕಿನತ್ತ ವೇಗದಲ್ಲಿ ಮುಂದೆ ಹೋಗುವುದು ಎಂದು ಭರವಸೆ ನೀಡುತ್ತೇನೆ, ಎಂದು ಪ್ರಧಾನಮಂತ್ರಿ ಮೋದಿಯಯವರು ಆಗಸ್ಟ್ ೧೦ ರಂದು ಸಂಜೆ ಲೋಕಸಭೆಯಲ್ಲಿ ಹೇಳಿಕೆ ನೀಡಿದರು. ಮಣಿಪುರದಲ್ಲಿನ ಹಿಂಸಾಚಾರದಿಂದ ವಿರೋಧಿ ಪಕ್ಷದವರು ಲೋಕಸಭೆಯಲ್ಲಿ ಕೇಂದ್ರ ಸರಕಾರದ ವಿರುದ್ಧ ಅವಿಶ್ವಾಸ ಪ್ರಸ್ತಾವ ಮಂಡಿಸಿದರು. ಇದಕ್ಕೆ ಉತ್ತರ ನೀಡುತ್ತಾ ಪ್ರಧಾನಮಂತ್ರಿ ಮೋದಿ ಮಾತನಾಡುತ್ತಿದ್ದರು.

ಪ್ರಧಾನಮಂತ್ರಿ ಮೋದಿ ಅವರ ಭಾಷಣದ ಸಮಯದಲ್ಲಿ ಕಾಂಗ್ರೆಸ್ ಸಹಿತ ಬಹುತೇಕ ವಿರೋಧಿ ಪಕ್ಷದವರು ಬಹಿಷ್ಕಾರ ಹಾಕಿ ಸಭಾಗೃಹದಿಂದ ಹೊರಟು ಹೋದರು. ಪ್ರಧಾನಮಂತ್ರಿ ಮೋದಿ ಇವರ ಭಾಷಣದ ನಂತರ ಅವಿಶ್ವಾಸ ಪ್ರಸ್ತಾವದ ಕುರಿತು ಧ್ವನಿ ಮೂಲಕ ಮತದಾನ ನಡೆಯಿತು. ಇದರಲ್ಲಿ ‘ಇಲ್ಲ’ ಎನ್ನುವರ ಧ್ವನಿ ಹೆಚ್ಚು ಇದ್ದರಿಂದ ಪ್ರಸ್ತಾಪ ರದ್ದುವಾಯಿತು. ಎಂದೂ ಲೋಕಸಭೆಯ ಅಧ್ಯಕ್ಷರು ಓಂ ಬಿರ್ಲಾ ಇವರು ಘೋಷಿಸಿದರು. ಕಾಂಗ್ರೆಸ್ಸಿನ ನಾಯಕ ಅಧಿರ ರಂಜನ ದಾಸ ಚೌದರಿ ಇವರ ವಿರುದ್ಧ ಶಿಸ್ತುಭಂಗದ ಪ್ರಸ್ತಾವ ಕೂಡ ಈ ಸಮಯದಲ್ಲಿ ಸಮ್ಮತಿಸಲಾಯಿತು. ಆದ್ದರಿಂದ ಅವರನ್ನು ಲೋಕಸಭೆಯಿಂದ ಅಮಾನತು ಮಾಡಲಾಯಿತು. ಪ್ರಧಾನಮಂತ್ರಿ ಮೋದಿ ಅವರ ಅವಿಶ್ವಾಸ ಪ್ರಸ್ತಾವದ ಮೇಲಿನ ಭಾಷಣ ಇಲ್ಲಿಯವರೆಗಿನ ಎಲ್ಲಕ್ಕಿಂತ ದೀರ್ಘವಾದ ಭಾಷಣವಾಗಿತ್ತು. ಅವರು ೨ ಗಂಟೆ ೧೪ ನಿಮಿಷ ಮಾತನಾಡುತ್ತಿದ್ದರು.

ಈ ಸಮಯದಲ್ಲಿ ಮಾತನಾಡಿದ ಪ್ರಧಾನಮಂತ್ರಿ ಇವರು,

೧. ಭಾರತ ಸರಕಾರ ಪೂರ್ವೊತ್ತರ ಭಾರತದ ವಿಕಾಸಕ್ಕಾಗಿ ಕಳೆದ ೯ ವರ್ಷದಲ್ಲಿ ಲಕ್ಷಾಂತರ ಕೋಟಿ ರೂಪಾಯಿ ಖರ್ಚು ಮಾಡಿದೆ. ಪೂರ್ವೊತ್ತರ ಭಾರತ ಇದು ಆದಷ್ಟು ಬೇಗನೆ ದಕ್ಷಿಣ ಪೂರ್ವ ಏಷ್ಯಾದ ಕೇಂದ್ರವಾಗುವುದು.

೨. ಭಕ್ತಿ ಭಾವದಿಂದ ತುಂಬಿರುವ ಮತ್ತು ದೇಶಕ್ಕಾಗಿ ಅಸಂಖ್ಯ ಬಲಿದಾನ ನೀಡಿರುವ ಮಣಿಪುರ ರಾಜ್ಯ ಕಾಂಗ್ರೆಸ್ಸಿನ ಅಧಿಕಾರದಲ್ಲಿ ಪ್ರತ್ಯೇಕತಾವಾದಿಗಳ ಅಗ್ನಿಗೆ ಆಹುತಿ ಆಯಿತು. ಕಾಂಗ್ರೆಸ್ ಮಣಿಪುರದ ಅಶಾಂತಿಗೆ ಜನನಿ ಆಯಿತು. ಅದರ ಅಧಿಕಾರದಲ್ಲಿ ಎಲ್ಲಾ ವಿಷಯ ಪ್ರತ್ಯೇಕತಾವಾದಿಗಳ ಇಚ್ಛೆಯ ಪ್ರಕಾರ. ಘಟಿಸುತ್ತಿದ್ದವು. ಸರಕಾರಿ ಕಾರ್ಯಾಲಯದಲ್ಲಿ ಮ. ಗಾಂಧಿ ಅವರ ಭಾವಚಿತ್ರ ಹಾಕಲು ಬಿಡುತ್ತಿರಲಿಲ್ಲ. ಸಂಜೆ ೪ ನಂತರ ದೇವಸ್ಥಾನಗಳು ಮುಚ್ಚಬೇಕಾಗುತ್ತಿದ್ದವು. ಅದರ ರಕ್ಷಣೆಗಾಗಿ ಸೈನ್ಯ ಕಾವಲು ನೀಡಬೇಕಾಗುತ್ತದೆ. ಕಾಂಗ್ರೆಸ್ಸಿನ ದುಃಖ ಮತ್ತು ಸಂವೇದನೆ ಕೆಲವು ಜನರ ಬಗ್ಗೆ ಸೀಮಿತವಾಗಿ ಉಳಿದಿತ್ತು.

೩. ೨೦೧೮ ರಲ್ಲಿ ಕೂಡ ವಿರೋಧ ಪಕ್ಷದವರು ನಮ್ಮ ವಿರುದ್ಧ ಅವಿಶ್ವಾಸ ಪ್ರಸ್ತಾವ ಮಂಡಿಸಿದ್ದರು. ಆ ಪ್ರಸ್ತಾವ ಸೋಲು ಅನುಭವಿಸಿತು; ಆದರೆ ೨೦೧೯ ರಲ್ಲಿನ ಚುನಾವಣೆಯಲ್ಲಿ ಜನರು ಕೂಡ ವಿರೋಧಿಗಳ ಬಗ್ಗೆ ‘ಅವಿಶ್ವಾಸ’ ಮತದಾನದ ಮೂಲಕ ಘೋಷಿಸಿದರು. ಆದ್ದರಿಂದ ವಿರೋಧಿ ಪಕ್ಷದ ಅವಿಶ್ವಾಸದ ಪ್ರಸ್ತಾವ ನಮಗಾಗಿ ಶುಭವೇ ಆಗಿರುತ್ತದೆ.

೪. ಕಾಂಗ್ರೆಸ್ಸಿನ ಸಂಸದರು ಲೋಕಸಭೆಯಿಂದ ಬಹಿಷ್ಕರಿಸಿ ಹೊರ ಹೋಗುವಾಗ ಪ್ರಧಾನಮಂತ್ರಿಯವರು, ‘ವಿರೋಧಿ ಪಕ್ಷ ನಮಗೆ ಟೀಕಿಸುತ್ತದೆ; ಆದರೆ ಅವರಲ್ಲಿ ಕೇಳುವ ಧೈರ್ಯ ಇಲ್ಲ ! ಸುಳ್ಳು ಹರಡುವುದು, ಕೆಟ್ಟ ಪದಗಳನ್ನು ಮಾತನಾಡುವುದು ಮತ್ತು ನಂತರ ಫಲಾಯನ ಮಾಡುವುದು ಇದು ಅವರ ಹಳೆಯ ಚಾಳಿ ಆಗಿದೆ. ಈ ದೇಶ ಅವರಿಂದ ವಿಶೇಷವಾದ ಅಪೇಕ್ಷೆ ಮಾಡಲು ಸಾಧ್ಯವಿಲ್ಲ.’ ಎಂದು ಹೇಳಿದರು.

ಭಾರತಮಾತೆಯ ೩ ಭಾಗ ಆಗುವುದಕ್ಕಾಗಿ ಕಾಂಗ್ರೆಸ್ ಹೊಣೆ !

ಕಾಂಗ್ರೆಸ್ಸಿನ ರಾಹುಲ್ ಗಾಂಧಿ ಇವರು, ‘ಪ್ರಧಾನಮಂತ್ರಿಯಿಂದ ಮಣಿಪುರದಲ್ಲಿ ಭಾರತ ಮಾತೆಯ ಹತ್ಯೆ ಆಗಿದೆ’ ಎಂದು ಹೇಳಿರುವ ಹೇಳಿಕೆಯ ಬಗ್ಗೆ ಪ್ರಧಾನಮಂತ್ರಿಯವರು, ‘ಪ್ರಜಾಪ್ರಭುತ್ವದ ಹತ್ಯೆ’, ‘ಸಂವಿಧಾನದ ಹತ್ಯೆ’ ಈ ಭಾಷೆ ಮಾತನಾಡುವವರು ಈಗ ಭಾರತಮಾತೆಯ ಹತ್ಯೆ ಆಗಿರುವುದರ ಬಗ್ಗೆ ಕೂಗಾಡುತ್ತಿದ್ದಾರೆ. ೧೯೪೭ ರಲ್ಲಿ ಭಾರತಮಾತೆಯ ೩ ಭಾಗಗಳಾದವು, ಅದಕ್ಕೆ ಕಾಂಗ್ರೆಸ್ ಹೊಣೆ ಆಗಿದೆ. ‘ಭಾರತ ತೆರೆ ತುಕಡೆ ಹೊಂಗೆ, ಹೇಳುವವರ ಸಹಾಯಕ್ಕಾಗಿ ಇದೇ ಜನರು ಹೋಗಿದ್ದರು. ಭಾರತದ ಮುಖ್ಯ ಭೂಮಿಯನ್ನು ಪೂರ್ವೊತ್ತರ ರಾಜ್ಯಕ್ಕೆ ಜೋಡಿಸುವ ‘ಸಿಲಿಗುಡಿ ಕಾರಿಡಾರ್’ ನಷ್ಟ ಮಾಡುವ ಬೇಡಿಕೆಗೆ ಇದೇ ಕಾಂಗ್ರೆಸ್ ಬೆಂಬಲಿಸಿತ್ತು. ಕಾಂಗ್ರೆಸಿನ ಇತಿಹಾಸ ಇದು ಭಾರತವನ್ನು ಛಿದ್ರ ಛಿದ್ರ ಮಾಡುವುದಾಗಿ ಉಳಿದಿದೆ ಎಂದು ಹೇಳಿದರು.