ಮಣಿಪುರದಿಂದ ಸೇನೆಯನ್ನು ಹಿಂಪಡೆಯಲು 40 ಶಾಸಕರ ಆಗ್ರಹ !

ಪ್ರಧಾನಿಗೆ ಪತ್ರ ಬರೆದು ಬೇಡಿಕೆ

ಇಂಫಾಲ – ಹಿಂಸಾಚಾರ ಪೀಡಿತ ಮಣಿಪುರದಲ್ಲಿ 4೦ ಶಾಸಕರು ಪ್ರಧಾನಮಂತ್ರಿ ನರೇಂದ್ರ ಪತ್ರ ಬರೆದು ರಾಜ್ಯದಲ್ಲಿ ಶಾಂತಿ ಮತ್ತು ಭದ್ರತೆಯ ವಾತಾವರಣವನ್ನು ನಿರ್ಮಾಣ ಮಾಡುವುದಕ್ಕಾಗಿ ಸೇನೆಯನ್ನು ಹಿಂಪಡೆಯುವುದು ಅವಶ್ಯಕವಾಗಿದೆ ಎಂದಿದ್ದಾರೆ. ಈ ಶಾಸಕರಲ್ಲಿ ಹೆಚ್ಚಿನ ಶಾಸಕರು ಹಿಂದೂ ಮೈತೆಯಿ ಸಮುದಾಯದವರಾಗಿದ್ದಾರೆ. ಕ್ರೈಸ್ತ ಕುಕ್ಕಿ ಬಂಡುಕೋರರ ಗುಂಪುಗಳೊಂದಿಗಿನ ‘ಸಸ್ಪೆಂಶನ್ ಆಫ್ ಆಪರೇಶನ್’ (ಎಸ್.ಓ.ಓ.ನ) ಒಪ್ಪಂದವನ್ನು ಹಿಂಪಡೆಯಬೇಕು ರಾಜ್ಯದಲ್ಲಿ ‘ರಾಷ್ಟ್ರೀಯ ಪೌರತ್ವ ನೋಂದಣಿ’ (ಎನ್ಆರ್.ಸಿ)ಕಾಯ್ದೆಯನ್ನು ಜಾರಿಗೊಳಿಸಬೇಕು ಮತ್ತು ಸ್ವಾಯತ್ತ ಜಿಲ್ಲಾ ಮಂಡಳಿಗಳನ್ನು ಬಲಪಡಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.