ಅಮೇರಿಕಾದ ಮ್ಯಾಚ್ಯುಸಸ್ಟೇಟ್ಸ್ ರಾಜ್ಯದಲ್ಲಿ ತುರ್ತು ಪರಿಸ್ಥಿತಿ ಘೋಷಣೆ !

ಬಾಸ್ಟನ್ (ಅಮೇರಿಕ) – ಅಮೇರಿಕಾದ ಮ್ಯಾಚ್ಯುಸಸ್ಟೇಟ್ಸ್ ರಾಜ್ಯದ ಗವರ್ನರ್ ಮೌರ್ಯ ಹಿಲಿ ಇವರು ಆಗಸ್ಟ್ ೮ ರಂದು ರಾಜಧಾನಿ ಬಾಸ್ಟನಲ್ಲಿ ತುರ್ತು ಪರಿಸ್ಥಿತಿ ಘೋಷಿಸಿದ್ದಾರೆ. ನಿರಾಶ್ರಿತರು ಬೃಹತ್ ಪ್ರಮಾಣದಲ್ಲಿ ರಾಜ್ಯದಲ್ಲಿ ನುಸುಳಿರುವುದರಿಂದ ಈ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಹಿಲಿ ಹೇಳುತ್ತಾ, ಮ್ಯಾಚ್ಯುಸಸ್ಟೇಟ್ಸ್ ರಾಜ್ಯದ ಸುತ್ತಮುತ್ತ ೫ ಸಾವಿರದ ೬೦೦ ಕುಟುಂಬಗಳು ಅಥವಾ ೨೦ ಸಾವಿರಕ್ಕಿಂತಲೂ ಹೆಚ್ಚಿನ ನಿರಾಶ್ರಿತರನ್ನು ಸಹಿಸಿಕೊಳ್ಳುತ್ತಿದ್ದಾರೆ. ಒಂದು ವರ್ಷದ ಹಿಂದೆ ೩ ಸಾವಿರದ ೧೦೦ ಕುಟುಂಬಗಳು ಆಶ್ರಯಸ್ಥಾನದಲ್ಲಿ ವಾಸಿಸುತ್ತಿದ್ದರು. ಇದರಿಂದ ಸ್ಥಳಾಂತರಗೊಂಡಿರುವ ಸಂಖ್ಯೆಯಲ್ಲಿ ಶೇಕಡ ೮೦ ರಷ್ಟು ಹೆಚ್ಚಳವಾಗಿದೆ, ಎಂದು ಹೇಳಿದರು. ಅನೇಕ ನಿರಾಶ್ರಿತರು ಬೇರೆ ರಾಜ್ಯದಿಂದ ವಿಮಾನದಿಂದ ಈ ರಾಜ್ಯಕ್ಕೆ ಬರುತ್ತಿದ್ದಾರೆ. ಕಳೆದ ೪೮ ಗಂಟೆಯಲ್ಲಿ ೫೦ ಸ್ಥಳಾಂತರಿತ ಕುಟುಂಬಗಳು ರಾಜ್ಯದಲ್ಲಿ ಆಶ್ರಯಕ್ಕಾಗಿ ಬಂದಿದ್ದಾರೆ. ಮ್ಯಾಚ್ಯುಸಸ್ಟೇಟ್ಸ್ ನಲ್ಲಿ ಬರುವ ನಿರಾಶ್ರಿತರು ಅಂತರರಾಷ್ಟ್ರೀಯ ಸ್ಥಳಾಂತರ ಅಪಾಯದ ಒಂದು ಭಾಗವಾಗಿದೆ, ರಾಜ್ಯದಲ್ಲಿ ಮೊದಲೇ ಮನೆಯ ಕೊರತೆ ಇದೆ, ಇಂತಹ ಸಮಯದಲ್ಲಿ ಅವರು ಬರುತ್ತಿದ್ದಾರೆ. ಎಂದು ಕೂಡ ಹಿಲಿ ಹೇಳಿದರು. ‘ಅಸೋಸಿಯೇಟೆಡ್ ಪ್ರೆಸ್’ ಈ ಅಂತರಾಷ್ಟ್ರೀಯ ವಾರ್ತಾ ಸಂಸ್ಥೆಯಿಂದ ಮಾಹಿತಿ ಬಂದಿದೆ.