ಇಂಫಾಳ (ಮಣಿಪುರ) – ‘ಕೋರ್ಡಿನೆಟಿಂಗ ಕಮಿಟಿ ಎಂಡ್ ಮಣಿಪುರ ಇಂಟಿಗ್ರೇಟಿ’ (ಕೊಕೊಮಿ) ಈ ಇಂಫಾಳದ ಸಂಸ್ಥೆಯು ಮಣಿಪುರದಲ್ಲಿ ಆಮಲಿ ಪದಾರ್ಥಗಳ ವ್ಯಾಪಾರದಲ್ಲಿ ಭಾಗಿಯಾಗಿರುವ ಅಕ್ರಮ ವಲಸಿಗರನ್ನು ಗುರುತಿಸಲು ಪ್ರಧಾನಿ ನರೇಂದ್ರ ಮೋದಿ ಅವರಿಗೆ ರಾಜ್ಯದಲ್ಲಿ ‘ಎಸ.ಆರ.ಸಿ’ ಯ (ರಾಷ್ಟ್ರೀಯ ಪೌರತ್ವ ಕಾನುನೂ) ಅನುಷ್ಠಾನಕ್ಕೆ ಒತ್ತಾಯಿಸಿದ್ದಾರೆ. ಮಣಿಪುರದಲ್ಲಿ ಆಡಳಿತವು ಬದಲಾಗಬಾರದು. ಅಲ್ಲದೆ ಕುಕಿಗೆ ಪ್ರತ್ಯೇಕ ಆಡಳಿತವನ್ನು ನಡೆಸಲು ಅನುಮತಿಸಬಾರದು, ಎಂದು ಪ್ರಧಾನ ಮಂತ್ರಿ ಅವರಿಗೆ ನೀಡಿದ ಅರ್ಜಿಯಲ್ಲಿ ಹೇಳಲಾಗಿದೆ.
ಕೇಂದ್ರ ಸರಕಾರವು ‘ಕುಕಿ-ಜೋಮಿ ಗ್ರೂಪ’ನ ಕೆಲವು ನಾಯಕರೊಂದಿಗೆ ವಿದೇಶಿ ಅಂಶಗಳನ್ನು ಗುರುತಿಸಿ ಅವರನ್ನು ಮ್ಯಾನಮಾರ್‌ಗೆ ಕಳುಹಿಸಬೇಕೆಂದು ಮನವಿಯಲ್ಲಿ ತಿಳಿಸಲಾಗಿದೆ.
Manipur violence: COCOMI announces boycott of state government in protest of unrest handling#Manipur #Manipurviolencehttps://t.co/xBtg730pMp
— India Today NE (@IndiaTodayNE) August 6, 2023
ಸಂಪಾದಕೀಯ ನಿಲುವುಮಣಿಪುರದಲ್ಲಿನ ಹಿಂಸಾಚಾರದಲ್ಲಿ ಮ್ಯಾನಮಾರ್‌ನಿಂದ ವಲಸೆ ಬಂದವರ ಕೈವಾಡ ಇದೆ ಎಂದು ಹೇಳಲಾಗುತ್ತಿದೆ. ಆದ್ದರಿಂದ ಈ ಆಗ್ರಹವನ್ನು ಸರಕಾರ ಗಂಭೀರವಾಗಿ ತೆಗೆದುಕೊಳ್ಳಬೇಕು ! |