ಹುಬ್ಬಳ್ಳಿ – ಉಡುಪಿಯ ಕಾಲೇಜೊಂದರ ಶೌಚಾಲಯದ ವಿಧ್ಯಾರ್ಥಿನಿಯರ ಫೋಟೊ ತೆಗೆದ ಪ್ರಕರಣ ತಾಜಾ ಇರುವಾಗ, ಇಂತಹ ಮತ್ತೂಂದು ಪ್ರಕರಣ ಬೆಳಕಿಗೆ ಬಂದಿದೆ. ಹುಬ್ಬಳ್ಳಿಯ ಕಾಲೇಜೊಂದರಲ್ಲಿ ಓರ್ವ ವಿಧ್ಯಾರ್ಥಿನಿಯ “ಇನ್ ಸ್ಟಾಗ್ರಾಂ” ಖಾತೆಯನ್ನು ಹ್ಯಾಕ್ ಮಾಡಿ, ಸಂಬಂಧಪಟ್ಟ ವಿಧ್ಯಾರ್ಥಿನಿಯ ಛಾಯಾಚಿತ್ರವನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರ ಮಾಡಲಾಗಿದೆ.
(ಸೌಜನ್ಯ: TV 9)
1. ನಗರದ ವಿವಿಧ ಕಾಲೇಜುಗಳಲ್ಲಿನ ವಿದ್ಯಾರ್ಥಿನಿಯರ “ಇನ್ಸ್ಟಾಗ್ರಾಮ್” ಖಾತೆಯನ್ನು ಹ್ಯಾಕ್ ಮಾಡಿ ಸಂಬಂಧಪಟ್ಟವರ ಛಾಯಾಚಿತ್ರಗಳನ್ನು ತಿರುಚಿ ಅಶ್ಲೀಲ ಪದ್ದತಿಯಿಂದ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರ ಮಾಡಲಾಗುತ್ತಿದೆ.
2. ಈ ಪ್ರಕರಣ ಬೆಳಕಿಗೆ ಬಂದ ನಂತರ ಪೊಲೀಸ್ ಆಯುಕ್ತರು ಕಾಲೇಜಿಗೆ ಭೇಟಿ ನೀಡಿ ತನಿಖೆ ಪ್ರಾರಂಬಿಸಿದ್ದಾರೆ. ಕೆಲವು ವಿದ್ಯಾರ್ಥಿನಿಯರು ಕಾಲೇಜಿನ ಕಾರ್ಯಕಾರಿ ಸಮಿತಿಗೆ ಹಾಗೂ ಸೈಬರ್ ಪೋಲೀಸರಿಗೆ ದೂರು ನೀಡಿದ್ದಾರೆ.
3. ಹಿಂದೂ ವಿದ್ಯಾರ್ಥಿನಿಯರನ್ನು ವಂಚಿಸುವ ಈ ಗುಂಪು “ಈ ವಿಷಯ ಯಾರಿಗಾದರೂ ಹೇಳಿದರೆ ಇನ್ನೂ ಹೆಚ್ಚಿನ ಚಿತ್ರಗಳನ್ನು ಪ್ರಸಾರ ಮಾಡುತ್ತೇವೆ” ಎಂದು ಬೆದರಿಕೆ ಹಾಕಿದ್ದಾರೆ. ಇಷ್ಟೇ ಅಲ್ಲದೆ ಪೊಲೀಸರನ್ನು ಉದ್ದೇಶಿಸಿ ‘ನಿಮಗೆ ತಾಕತ್ತಿದ್ದರೆ ನಮಗೆ ಹುಡುಕಿ ತೋರಿಸಿ’ ‘ಜೈ ಟಿಪ್ಪು ಸುಲ್ತಾನ್’ ಎಂಬ ಜಾಹೀರಾತನ್ನು ಪ್ರಸಾರ ಮಾಡಿದ್ದಾರೆ ಎಂದು ತಿಳಿದುಬಂದಿದೆ.