ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘಟನೆಯ ಹಿಂದೂ ಆಗಿದ್ದ ಮಾಜಿ ಅಧ್ಯಕ್ಷೆಯ ಮೇಲೆ ಅತ್ಯಾಚಾರವಾಗಿದ್ದ ಘಟನೆಯ ಉಲ್ಲೇಖ !
ಜಾತ್ಯತೀತವಾದಿಗಳು, ಕಾಂಗ್ರೆಸ್ಸಿಗರು, ಮತಾಂಧ ಮುಸ್ಲಿಮರ ವಿರೋಧ !
ಉಡುಪಿ – ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯದಲ್ಲಿ ಶಿಕ್ಷಣ ಪಡೆದಿರುವ ಪ್ರಖರ ಹಿಂದುತ್ವನಿಷ್ಠ ಮಹಿಳೆ ರಶ್ಮಿ ಸಾಮಂತ್ ಅವರು ವಿಶ್ವವಿದ್ಯಾನಿಲಯದಲ್ಲಿ ಅವರಿಗೆ ಆಗಿದ್ದ ಅನ್ಯಾಯವನ್ನು ವಿವರಿಸುವ ‘ಎ ಹಿಂದೂ ಇನ್ ಆಕ್ಸ್‌ಫರ್ಡ್’ ಪುಸ್ತಕವನ್ನು ಲೋಕಾರ್ಪಣೆ ಮಾಡಿದ್ದಾರೆ. ಅವರು ಈ ಬಗ್ಗೆ ಟ್ವಿಟರ್ ಮೂಲಕ ಮಾಹಿತಿ ನೀಡಿದಾಗ, ಕಮ್ಯುನಿಸ್ಟರು, ತಥಾಕಥಿತ ಜಾತ್ಯತೀತವಾದಿಗಳು, ಕಾಂಗ್ರೆಸ್ಸಿಗರು, ಮತಾಂಧ ಮುಸ್ಲಿಮರು ಮುಂತಾದವರಿಂದ ವಿರೋಧ ವ್ಯಕ್ತವಾಗುತ್ತಿದೆ.
ಸಾಮಂತ್ ಇವರು ಪೋಸ್ಟ್ ಮಾಡುವಾಗ, ಆಕ್ಸ್‌ಫರ್ಡ್‌ನಲ್ಲಿ ವಿದ್ಯಾರ್ಥಿ ಸಂಘಟನೆಯ ಅಧ್ಯಕ್ಷರಾದ ಮೊದಲ ಭಾರತೀಯ ಮಹಿಳೆ ನಾನು ಆಗಿದ್ದೆ. ಈ ಸಂಪೂರ್ಣ ಘಟನಾವಳಿಯೆಂದರೆ ನನಗೆ ‘ಗೂಂಡಾಗಿರಿ, ಕಿರುಕುಳ ಮತ್ತು ಬೆದರಿಕೆಗಳ ಚಿತ್ರಹಿಂಸೆಯ ದುಃಸ್ವಪ್ನ’ವಾಗಿತ್ತು. ಆಕ್ಸ್‌ಫರ್ಡ್ ಹಿಂದೂ ಅಧ್ಯಕ್ಷರೆಂದು ಒಪ್ಪಿಕೊಳ್ಳಲು ಸಿದ್ಧವಿಲ್ಲವೆಂದು ನಾನು ಕೆಳಗಿಳಿಯಬೇಕಾಯಿತು ಎಂದು ಹೇಳಿದ್ದಾರೆ.
What doesn’t kill you only makes you stronger!
At 22 years of age, as the first Indian Female President of the Oxford University Students Union, my historic election victory rapidly transformed into a distressing nightmare of bullying, harassment, & threats. It was declared that… pic.twitter.com/yWcoUYM9C4
— Rashmi Samant (@RashmiDVS) August 5, 2023
ಅವರು ಮಾತನ್ನು ಮುಂದುವರೆಸುತ್ತಾ, ಸಮಯ ಕಳೆದಂತೆ ನನಗೆ ಐತಿಹಾಸಿಕವಾಗಿ ಹಿಂದೂಗಳನ್ನು ಕಪಿಮುಷ್ಠಿಯಲ್ಲಿಟ್ಟುಕೊಳ್ಳುವ ಜಾಗತಿಕ ಷಡ್ಯಂತ್ರಕ್ಕೆ ನಾನು ಬಲಿಯಾಗಿದ್ದೇನೆ ಮತ್ತು ಇಲ್ಲಿಯವರೆಗೆ ಇದೇ ರೀತಿ ಅನೇಕರು ಬಲಿಪಶುಗಳಾಗಿದ್ದಾರೆ ಎಂದು ಗಮನಕ್ಕೆ ಬಂದಿತು ಎಂದು ಹೇಳಿದ್ದಾರೆ.
ಇದಕ್ಕೆ ರಾಜ್ಯದ ಕಾಂಗ್ರೆಸ್ ನಾಯಕಿ ಐಶ್ವರ್ಯಾ ಮಹದೇವ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅವರು, ನೀವು ಬಲಿಪಶು ಎಂಬ ನಿಮ್ಮ ಸುಳ್ಳು ನಿರೂಪಣೆ ನಿಮ್ಮನ್ನು ಎಲ್ಲಿಗೂ ತಲುಪಿಸುವುದಿಲ್ಲ. ಆಕ್ಸ್‌ಫರ್ಡ್‌ಗೆ ನೀವು ಎಂದಿಗೂ ಅಗತ್ಯವಿರಲಿಲ್ಲ ಎಂದು ಹೇಳಿದ್ದಾರೆ.
ಸಂಪಾದಕೀಯ ನಿಲುವುಹಿಂದೂಗಳ ಮೇಲಿನ ದೌರ್ಜನ್ಯಗಳನ್ನು ಬಯಲಿಗೆ ಎಳೆಯುವ ಪ್ರಯತ್ನಕ್ಕೆ ಹಿಂದುದ್ವೇಷಿ ಜಮಾತ್ ವಿರೋಧಿಸುವುದರಲ್ಲಿ ಆಶ್ಚರ್ಯವೇನಿದೆ ? ಹಿಂದೂಗಳ ಮೇಲಿನ ದೌರ್ಜನ್ಯದ ವಿರುದ್ಧ ಕಾರ್ಯ ಮಾಡುತ್ತಿರುವ ರಶ್ಮಿ ಸಾಮಂತ್ ಇವರಂತಹ ಹಿಂದುತ್ವನಿಷ್ಠರನ್ನು ಬೆಂಬಲಿಸಲು ಹಿಂದೂಗಳು ದೃಢವಾಗಿ ಅವರೊಂದಿಗೆ ನಿಲ್ಲಬೇಕಾಗಿದೆ ! |