ಭಾರತ ವಿರೋಧಿ ಧೋರಣೆಗಳಿಗೆ ಕಾಂಗ್ರೆಸ್‌ ಸಹಭಾಗಿತ್ವ : ಚೀನಾದಿಂದ ಹಣಕಾಸು ಪೂರೈಕೆ ! – ಭಾಜಪ

ಚೀನಾದಿಂದ ಹಣಕಾಸು ಪೂರೈಕೆಯಾಗುವ ‘ನ್ಯೂಸ್ ಕ್ಲಿಕ್’ ಸುದ್ದಿ ಜಾಲತಾಣಕ್ಕೆ ಕಾಂಗ್ರೆಸ್ ಬೆಂಬಲ !

ಸಚಿವ ಅನುರಾಗ್ ಠಾಕೂರ

ನವ ದೆಹಲಿ – ಕಾಂಗ್ರೆಸ್ ಮತ್ತು ಚೀನಾ ಒಂದೇ ನಾಣ್ಯದ ಎರಡು ಮುಖಗಳಾಗಿವೆ. ‘ನ್ಯೂಸ್ ಕ್ಲಿಕ್’ ಎಂಬ ಸುದ್ದಿ ಜಾಲತಾಣದ ಮೂಲಕ ಚೀನಾ ಭಾರತದಲ್ಲಿ ಕಮ್ಯುನಿಸ್ಟ್ ಪಕ್ಷದ ನೀತಿಯನ್ನು ಪ್ರಚಾರ ಮಾಡುತ್ತಿದ್ದು, ಕಾಂಗ್ರೆಸ್ ಈ ಸುದ್ದಿ ಜಾಲತಾಣವನ್ನು ಬೆಂಬಲಿಸುತ್ತಿದೆ. ಹಾಗಾಗಿ ಕಾಂಗ್ರೆಸ್ ಭಾರತ ವಿರೋಧಿ ಧೋರಣೆಯಲ್ಲಿ ಸಹಭಾಗ ಹೊಂದಿದೆ ಎಂದು ಕೇಂದ್ರ ಸಚಿವ ಅನುರಾಗ್ ಠಾಕೂರ್ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ‘ಪ್ರೀತಿಯ ಅಂಗಡಿ’ಯಲ್ಲಿ ಚೀನಾ ವಸ್ತುಗಳೇ ತುಂಬಿವೆ ಎಂದು ಅವರು ಟೀಕಿಸಿದರು. ಕೆಲದಿನಗಳ ಹಿಂದೆ ರಾಹುಲ್ ಗಾಂಧಿ ಅವರು ‘ಪ್ರಧಾನಿ ನರೇಂದ್ರ ಮೋದಿಯವರಿಗೆ ‘ದ್ವೇಷದ ಅಂಗಡಿ’ ಇದ್ದರೆ, ಕಾಂಗ್ರೆಸ್ ಗೆ ‘ಪ್ರೀತಿಯ ಅಂಗಡಿ’ ಇದೆ ಎಂದು ಹೇಳಿಕೆ ನೀಡಿದ್ದರು.

ವಿರೋಧ ಪಕ್ಷಗಳು ಹೊಸದಾಗಿ ರಚಿಸಿರುವ ‘ಇಂಡಿಯಾ’ ಮೈತ್ರಿ ಪಕ್ಷವನ್ನು ಟೀಕಿಸಿದ ಠಾಕೂರ್ ಇವರು, ಈ ಮೈತ್ರಿಕೂಟದ ನಾಯಕರು ಮತ್ತು ಬೆಂಬಲಿಗರಿಂದ ರಾಷ್ಟ್ರದ ಹಿತಾಸಕ್ತಿಯ ಬಗ್ಗೆ ಯೋಚಿಸಲೂ ಕೂಡ ಸಾಧ್ಯವಿಲ್ಲ ಎಂದು ಹೇಳಿದರು. ಈ ಮಿತ್ರಪಕ್ಷವು ‘ಭಾರತವನ್ನು ಹೇಗೆ ದುರ್ಬಲಗೊಳಿಸಬಹುದು?’, ‘ಭಾರತಕ್ಕೆ ಹೇಗೆ ಹಾನಿಯುಂಟು ಮಾಡಬಹುದು?’, ‘ಭಾರತ ವಿರೋಧಿ ನೀತಿಗೆ ಹೇಗೆ ಉತ್ತೇಜನ ನೀಡಬಹುದು?’ ಎಂಬ ವಿಷಯಗಳ ಚಿಂತೆಯಿರುವ ಜನರಿಂದ ತುಂಬಿದೆ ಎಂದು ಹೇಳಿದರು.

‘ನ್ಯೂಸ್ ಕ್ಲಿಕ್’ ಈ ಸುದ್ದಿ ಜಾಲತಾಣಕ್ಕೆ ಚೀನಾದ ‘ಗ್ಲೋಬಲ್ ಮೀಡಿಯಾ ಇನ್‌ಸ್ಟಿಟ್ಯೂಟ್’ನಿಂದ ಹಣ ಪೂರೈಸಲಾಗುತ್ತದೆ. ವ್ಯವಸ್ತೆಯು ಈ ಸಂಕೇತಸ್ಥಳದ ಕಚೇರಿಯ ಮೇಲೆ ನಡೆಸಿದ ದಾಳಿಯಲ್ಲಿ ನೆವಿಲ್ ರಾಯ್ ಸಿಂಘಂ ಎಂಬುವನು ಹಣಕಾಸು ಪೂರೈಕೆ ಮಾಡಿರುವುದು ಬಹಿರಂಗವಾಗಿದೆ. ಅವನು ಚೀನಾದಲ್ಲಿ ಆಡಳಿತಾರೂಢ ‘ಕಮ್ಯುನಿಸ್ಟ್ ಪಾರ್ಟಿ ಆಫ್ ಚೈನಾ’ದ ಭಾರತ ವಿರೋಧಿ ಘಟಕದೊಂದಿಗೆ ಸಂಬಂಧ ಹೊಂದಿದ್ದನು ಎಂದು ತಿಳಿದುಬಂದಿದೆ. ಈ ಶಾಖೆಯು ‘ಭಾರತ ತೊಡೊ’ ಅಭಿಯಾನವನ್ನು ನಡೆಸುತ್ತದೆ. ಈ ಸಿಂಘಂನಿಗೆ ಚೀನಾ ಕಂಪನಿಗಳು ಹಣಕಾಸು ಒದಗಿಸುತ್ತವೆ. ಈ ಸುದ್ದಿ ಜಾಲತಾಣದ ಮೂಲಕ ಚೀನಾದ ಭಾರತ ವಿರೋಧಿ ನೀತಿಗಳನ್ನು ಪ್ರಸಾರ ಮಾಡಲಾಗುತ್ತಿತ್ತು ಮತ್ತು ಕಾಂಗ್ರೆಸ್ ಹಾಗೂ ಇತರ ಕೆಲವು ಪಕ್ಷಗಳು ತಮ್ಮ’ವಾಕ್ ಸ್ವಾತಂತ್ರ್ಯ’ ಹೆಸರಿನಲ್ಲಿ ಈ ಸುದ್ದಿ ಜಾಲತಾಣವನ್ನು ಬೆಂಬಲಿಸುತ್ತಿವೆ. ಎಂದು ಹೇಳಿದರು.