ಶ್ರೀನಗರ (ಜಮ್ಮು ಕಾಶ್ಮೀರ) – ಕೇಂದ್ರಾಡಳಿತ ಪ್ರದೇಶ ಕುಲಗಾಮಾ ಜಿಲ್ಲೆಯಲ್ಲಿ ಆಗಸ್ಟ್ ೫ ರಂದು ಜಿಹಾದಿ ಭಯೋತ್ಪಾದಕರೊಂದಿಗೆ ನಡೆದ ಚಕಮಕಿಯಲ್ಲಿ ೩ ಸೈನಿಕರು ವೀರಗತಿ ಹೊಂದಿದ್ದಾರೆ. ಪೊಲೀಸರು ನೀಡಿದ ಮಾಹಿತಿಯ ಪ್ರಕಾರ ಸುರಕ್ಷಾ ದಳದವರಿಗೆ ದಕ್ಷಿಣ ಕಾಶ್ಮೀರದ ಕುಲಗಾಮ ಜಿಲ್ಲೆಯಲ್ಲಿ ಕೆಲವು ಭಯೋತ್ಪಾದಕರು ಬಂದಿರುವ ಸೂಚನೆ ದೊರೆತಿತ್ತು.
जम्मू-कश्मीर के कुलगाम में आतंकियों से भीषण मुठभेड़, सेना के 3 जवान शहीद, सर्च ऑपरेशन जारी#JammuKashmir #KulgamEncounterUpdate https://t.co/G98PeMa8qI
— News18 India (@News18India) August 5, 2023
ಈ ಘಟನೆಯ ಸಂದರ್ಭದಲ್ಲಿ ಭಾರತೀಯ ಸೈನ್ಯದಿಂದ ಟ್ವಿಟ್ ಮಾಡಿ, ”ಕುಲಗಾಮದಲ್ಲಿನ ಹಾಲನದ ಎತ್ತರದ ಗುಡ್ಡಗಳ ಮೇಲೆ ಭಯೋತ್ಪಾದಕರು ಅಡಗಿ ಕುಳಿತಿದ್ದಾರೆ ಎಂದು ನಮಗೆ ಮಾಹಿತಿ ದೊರೆತಿತ್ತು. ಅದರ ನಂತರ ಸೈನಿಕರು ಶೋಧ ಕಾರ್ಯ ಆರಂಭಿಸಿದರು. ಭಯೋತ್ಪಾದಕರು ಸೈನಿಕರ ಮೇಲೆ ಗುಂಡು ಹಾರಿಸಿದರು. ಅದಕ್ಕೆ ಪ್ರತ್ಯುತ್ತರ ನೀಡುವಾಗ ಮೂರು ಸೈನಿಕರು ಗಾಯಗೊಂಡರು. ಅವರಿಗೆ ಚಿಕಿತ್ಸೆ ನೀಡುವಾಗ ಮೃತ್ಯುವಾಯಿತು. ಶೋಧ ಕಾರ್ಯಾ ಮಾತ್ರ ಇನ್ನೂ ಮುಂದುವರೆದಿದೆ. ಎಂದು ಹೇಳಿದ್ದಾರೆ.
ಕಳೆದ ಕೆಲವು ತಿಂಗಳಲ್ಲಿ ಜಮ್ಮು ಕಾಶ್ಮೀರದಲ್ಲಿ ಜೀಹಾದಿ ಭಯೋತ್ಪಾದಕರ ಕಾರ್ಯಾಚರಣೆಗಳಲ್ಲಿ ಹೆಚ್ಚಳ !
ಈ ಹಿಂದೆ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಪುಂಚ ಮತ್ತು ರಾಜೌರಿ ಎರಡು ಜಿಲ್ಲೆಗಳಲ್ಲಿ ನಡೆದ ಚಕಮಕಿಯಲ್ಲಿ ೧೦ ಸೈನಿಕರು ವೀರಗತಿ ಹೊಂದಿದ್ದರು. ಈ ವರ್ಷದ ಆರಂಭದಲ್ಲಿ ರಾಜೌರಿಯಲ್ಲಿ ಭಯೋತ್ಪಾದಕರು ಕೆಲವು ಹಿಂದೂ ಕುಟುಂಬಗಳ ಮೇಲೆ ದಾಳಿ ನಡೆಸಿದ್ದರು. ಈ ಘಟನೆಯಲ್ಲಿ ೭ ನಾಗರೀಕರು ಸಾವನ್ನಪ್ಪಿದ್ದು ೧೨ ಕ್ಕಿಂತಲೂ ಹೆಚ್ಚಿನ ಜನರು ಗಾಯಗೊಂಡಿದ್ದರು.
ಸಂಪಾದಕೀಯ ನಿಲುವುಒಂದು ಕಡೆ ಪಾಕಿಸ್ತಾನದ ಪ್ರಧಾನ ಮಂತ್ರಿ ಭಾರತದ ಜೊತೆ ಚರ್ಚಿಸಲು ಕರೆ ನೀಡುತ್ತಾರೆ ಹಾಗೂ ಇನ್ನೊಂದು ಕಡೆಗೆ ಭಯೋತ್ಪಾದಕರನ್ನು ಕಳಿಸಿ ಭಾರತೀಯ ಸೈನಿಕರನ್ನು ಹತಗೊಳಿಸುತ್ತಾರೆ, ಇಂತಹ ಕಪಟಿ ಪಾಕಿಸ್ತಾನಕ್ಕೆ ಈಗ ಸರಿಯಾದ ಪಾಠ ಕಲಿಸುವುದಕ್ಕೆ ಭಾರತ ಸರಕಾರ ಏನಾದರೂ ಮಾಡುವುದೇ ? |