ಮಳೆಗಾಲದಲ್ಲಿ ಸಣ್ಣ ಮಕ್ಕಳ ಬಗ್ಗೆ ಕಾಳಜಿ ವಹಿಸುವುದು

ಹವಾಮಾನದಲ್ಲಾಗುವ ಬದಲಾವಣೆ, ಹವೆಯಲ್ಲಿರುವ ತೇವಾಂಶ ಮತ್ತು ಸಾಂಕ್ರಾ ಮಿಕ ರೋಗಗಳು, ಇವೆಲ್ಲವೂ ಒಟ್ಟಿಗೆ ಬರುತ್ತವೆ, ಇದು ನಮಗೆ ಗೊತ್ತಿದೆ. ಮನೆಯಲ್ಲಿ ಚಿಕ್ಕ ಮಗು ಸತತವಾಗಿ ಕಾಯಿಲೆಯಿಂದ ಬಳಲುತ್ತಿದ್ದರೆ ನಮಗೆ ತೊಂದರೆಯಾಗುತ್ತದೆ. ಸಣ್ಣ ವಯಸ್ಸು ಮೂಲದಲ್ಲೇ ಕಫಪ್ರಧಾನವಾಗಿರುವುದರಿಂದ ಕಫದ ತೊಂದರೆಗಳು ಅಂದರೆ ಶೀತ, ಕೆಮ್ಮು, ಇವುಗಳ ಮೂಲಕ ಉದ್ಭವಿಸುವ ಲಕ್ಷಣಗಳು (ತೂಕ ಕಡಿಮೆಯಾಗುವುದು, ಹಸಿವು ಕಡಿಮೆಯಾಗುವುದು, ಸಿಡಿಮಿಡಿಗೊಳ್ಳುವುದು) ಮುಂದೆ ತಿಂಗಳು ಗಟ್ಟಲೆ ಇರಬಹುದು. ಅದನ್ನು ತಡೆಗಟ್ಟಲು ಕೆಲವು ಸುಲಭ ಉಪಾಯಗಳನ್ನು ಇಲ್ಲಿ ಕೊಡುತ್ತಿದ್ದೇವೆ.

೧. ಮಕ್ಕಳ ಬೆಳಗ್ಗೆ ಬೇಗನೆ ಶಾಲೆಗೆ ಹೋಗುತ್ತಿದ್ದರೆ, ಕಡ್ಡಾಯವಾಗಿ ಅವರಿಗೆ ಪ್ರತಿದಿನ ಬೆಳಗ್ಗೆ ಸ್ನಾನಮಾಡಿಸಿಯೇ ಕಳುಹಿಸಬೇಕೆಂಬ ಹಠ ಬೇಡ.
೨. ಸಾಕ್ಸ(ಕಾಲುಚೀಲ), ಮತ್ತು ಬೂಟು ಒಣಗಿರಬೇಕು. ಕೂದಲು ಹಸಿ ಇದ್ದರೆ ಅದನ್ನು ಸರಿಯಾಗಿ ಒರೆಸಬೇಕು. ಬೇಕಾದರೆ ಸ್ವಲ್ಪ ‘ಹೇರ್ ಡ್ರಾಯರ್’ನ್ನು (ಕೂದಲು ಒಣಗಿಸುವ ಯಂತ್ರ) ಬಳಸಬಹುದು.
೩. ಕಫ ಆಗುವ ಪ್ರವೃತ್ತಿ ಇದ್ದರೆ ಪ್ರತಿದಿನ ಎದೆಗೆ, ಅಂಗಾಲಿಗೆ ಮತ್ತು ನೆತ್ತಿಗೆ ಬಜೆಯ ಪೌಡರ್ ಹಚ್ಚಬೇಕು.
೪. ಮಳೆಗಾಲದಲ್ಲಿ ಮೊಸರು, ಹಣ್ಣು, ತೊಪ್ಪಲು ಪಲ್ಯ, ಎಳನೀರು ಇವುಗಳನ್ನು ನೀಡಬಾರದು.
೫. ೧-೨ ವರ್ಷದ ಮಗುವಿಗೆ ರಾತ್ರಿ ಊಟದ ನಂತರ ಅಥವಾ ಊಟದ ಬದಲು ಹಾಲನ್ನು ಕುಡಿಯಲು ಕೊಡಬಾರದು. ಚಿಕ್ಕ ಮಗುವಿಗೆ ಹಾಲಿನ ರೂಢಿ ಇದ್ದರೆ ಹಾಲಿನಲ್ಲಿ ಒಂದು ಚಿಟಿಕೆ ಒಣ ಶುಂಠಿ ಪೌಡರ್‌ಅನ್ನು ಹಾಕಿ ನಂತರ ಅದನ್ನು ಕುಡಿಯಲು ಕೊಡಬೇಕು.
೬. ‘ಸಿತೋಪಲಾದಿ’ ಚೂರ್ಣ ಮನೆಯಲ್ಲಿಟ್ಟುಕೊಳ್ಳಬೇಕು. ಸತತವಾಗಿ ಶೀತವಾಗುವ ಪ್ರವೃತ್ತಿ ಇದ್ದರೆ ಪ್ರತಿದಿನ ಬೆಳಗ್ಗೆ ೨-೩ ಚಿಟಿಕೆ ಸಿತೋಪಲಾದಿ ಚೂರ್ಣವನ್ನು ಜೇನುತುಪ್ಪದೊಂದಿಗೆ ನೆಕ್ಕಿ ತಿನ್ನಲು ಕೊಡಬಹುದು.
೭. ಹಸಿವು ಕಡಿಮೆ ಇದ್ದಾಗ ಬೇಕೆಂದೇ ಬಾದಾಮಿ, ಪಿಸ್ತಾ, ಹಣ್ಣುಗಳು, ಮೊಟ್ಟೆ ಇಂತಹ ‘ಪೌಷ್ಟಿಕ’ ಪದಾರ್ಥಗಳನ್ನು ಒತ್ತಾಯದಿಂದ ತಿನ್ನಲು ಕೊಡಬಾರದು. ‘ಚ್ಯವನಪ್ರಾಶ’ ಇದು ಶೀತ, ಕೆಮ್ಮಿನ ಔಷಧಿಯಲ್ಲ. ಮೇಲಿಂದಮೇಲೆ ನೆಗಡಿ, ಕೆಮ್ಮು ಆಗುತ್ತಿದ್ದರೆ, ಆ ತೊಂದರೆಯ ಪ್ರವೃತ್ತಿಯನ್ನು ಕಡಿಮೆ ಮಾಡಿ ವೈದ್ಯರ ಸಲಹೆಯಂತೆ ‘ಚ್ಯವನಪ್ರಾಶ’ ಕೊಡಬಹುದು.
೮. ಸಣ್ಣ ಮಕ್ಕಳು ‘ತಿನ್ನಲು ಬೇಡ’ ಎನ್ನುತ್ತಿದ್ದರೆ, ಅವರನ್ನು ಬೆದರಿಸಿ ಅಥವಾ ಟಿವಿಯ ಆಮೀಷ ತೋರಿಸಿ ತಿನ್ನಲು ಕೊಡಬಾರದು; ಆದರೆ ಆ ಹೊತ್ತಿಗೆ ಅವರು ಬೇರೆ ಯಾವ ಅನಾವಶ್ಯಕ ಪದಾರ್ಥಗಳನ್ನು ತಿನ್ನದಂತೆ ಕಾಳಜಿ ವಹಿಸಬೇಕು.
೯. ಕಫ ಹೆಚ್ಚಾಗಿದ್ದರೆ ಮೊಸರನ್ನ, ಬರೀ ಅನ್ನ, ಉದ್ದಿನಬೇಳೆ, ಮೀನು, ಮೊಸರುವಡೆ ಇಂತಹ ಪದಾರ್ಥಗಳನ್ನು ತಿನ್ನಲೇ ಬಾರದು. ರಾತ್ರಿ ೮ ಗಂಟೆಯೊಳಗೆ ಊಟ ಮಾಡಬೇಕು. ಆಹಾರದಲ್ಲಿ ಮೈದಾ, ಚೀಜ್, ಮೇಯೋ, ಈ ಪದಾರ್ಥಗಳು ಅತ್ಯಲ್ಪ ಇರಬೇಕು. ಕರಿದ ಪದಾರ್ಥಗಳನ್ನು ಕೊಡಬಾರದು, ಕೊಡ ಬೇಕೆನಿಸಿದರೆ ಮಧ್ಯಾಹ್ನ ೪ ಗಂಟೆಯೊಳಗೆ ಸ್ವಲ್ಪ ಕೊಡಬಹುದು.
೧೦. ಒಳಉಡುಪು, ಬನಿಯನ ಮತ್ತು ಇಂತಹ ಬಟ್ಟೆಗಳು ಸರಿಯಾಗಿ ಒಣಗಿರಬೇಕು. ಬಟ್ಟೆಗಳು ಹಸಿ ಇದ್ದರೆ ಇಸ್ತ್ರಿ ಪೆಟ್ಟಿಗೆ ಯಿಂದ ಅವುಗಳನ್ನು ಬಿಸಿಮಾಡಿ ಒಣಗಿಸಬೇಕು.
೧೧. ರಾತ್ರಿ ಫ್ಯಾನ್ ಕೆಳಗೆ ಮಕ್ಕಳನ್ನು ಮಲಗಿಸಬಾರದು. ಮೂಲೆಯಲ್ಲಿ ಮಲಗಿಸಬೇಕು.
೧೨. ಸಾಯಂಕಾಲ ಮನೆಯಲ್ಲಿ ಇದ್ದಿಲ ಮೇಲೆ ತುಪ್ಪ, ಬಜೆ, ಧೂಪ, ಬೇವಿನೆಲೆಗಳನ್ನು ಹಾಕಿ ಹೊಗೆ ಮಾಡಿ ಮೂಲೆ ಮೂಲೆಗಳಲ್ಲಿ ಅದನ್ನು ತೋರಿಸಬೇಕು. ಇದಕ್ಕೆ ‘ಧೂಪನ’ ಎನ್ನು ತ್ತಾರೆ. ಇದರಿಂದ ಸಾಂಕ್ರಾಮಿಕ ರೋಗಗಳನ್ನು ಹತೋಟಿ ಯಲ್ಲಿಡಲು ಸಾಧ್ಯವಾಗುತ್ತದೆ, ಹಾಗೂ ಸೊಳ್ಳೆಗಳ ಕಾಟವೂ ಕಡಿಮೆಯಾಗುತ್ತದೆ.
೧೩. ಮಗು ಮೇಲಿಂದ ಮೇಲೆ ಅನಾರೋಗ್ಯಕ್ಕೆ ಒಳಗಾಗುತ್ತಿದ್ದರೆ ಆಯುರ್ವೇದಿಂದ ಕಾಯಿಲೆ ಆದಾಗ ಮತ್ತು ಪುನಃ ಕಾಯಿಲೆ ಆಗದಂತೆ ಹೀಗೆ ಎರಡು ರೀತಿಯಲ್ಲಿ ಉಪಯೋಗವಾಗುತ್ತದೆ ಸತತವಾಗಿ ಬರುವ ಕೆಮ್ಮು ನೆಗಡಿಗೆ ಕೆಲವೊಮ್ಮೆ ಕ್ರಿಮಿ (ಜಂತು) ಈ ಲಕ್ಷಣವೂ ಕಾರಣವಾಗಿರುತ್ತದೆ. ಶೀತ, ಕೆಮ್ಮಿನೊಂದಿಗೆ ಜಂತುಗಳಿಗಾಗಿ ಕೊಟ್ಟ ಔಷಧಿಗಳು ಶಾಶ್ವತವಾಗಿ ಕಾಯಿಲೆಯನ್ನು ನಿವಾರಿಸುತ್ತವೆ. ಹಾಗೆಯೇ ಇದರ ಬಗ್ಗೆ ಹತ್ತಿರದ ವೈದ್ಯರ ಸಲಹೆಯನ್ನು ಅಗತ್ಯವಾಗಿ ತೆಗೆದುಕೊಳ್ಳಬೇಕು.

– ವೈದ್ಯೆ ಸ್ವರಾಲಿ ಶೇಂಡ್ಯೆ, ಆಯುರ್ವೇದ ತಜ್ಞೆ, ಪುಣೆ. (೧೧.೭.೨೦೨೩)