ಪ್ರಸ್ತುತ ಶಾಲೆಯ ಪಠ್ಯಪುಸ್ತಕಗಳಲ್ಲಿ ರಾಷ್ಟ್ರಪ್ರೇಮದ ಪಾಠ, ಕ್ರಾಂತಿಕಾರರ ಚರಿತ್ರೆ ಕಲಿಸದಿರುವುದರಿಂದ ವಿದ್ಯಾರ್ಥಿಗಳಲ್ಲಿ ರಾಷ್ಟ್ರೀಯತ್ವದ ಭಾವನೆ ದುರ್ಬಲವಾಗಿದೆ. ಪರಿಣಾಮವಾಗಿ ಕಾಗದದ ರಾಷ್ಟ್ರಧ್ವಜಗಳು ಧ್ವಜಾರೋಹಣವಾದ ಸ್ವಲ್ಪ ಹೊತ್ತಿನೊಳಗೆ ರಸ್ತೆಯಲ್ಲಿ ಬಿದ್ದಿರುವುದು ಕಂಡು ಬರುತ್ತವೆ. ಕ್ರಾಂತಿಕಾರರು ರಾಷ್ಟ್ರಧ್ವಜದ ಸನ್ಮಾನಕ್ಕಾಗಿ ತಮ್ಮ ಪ್ರಾಣವನ್ನು ಆಹುತಿ ಕೊಟ್ಟು ಸೆರೆಮನೆ ಅನುಭವಿಸಿದರು. ಆ ರಾಷ್ಟ್ರಧ್ವಜದ ಅಪಮಾನವನ್ನು ನೋಡಬೇಕಾಗುತ್ತದೆ. ನಮ್ಮ ರಾಷ್ಟ್ರದ ಸ್ಮಾರಕಗಳ ಬಗ್ಗೆ ವಿದ್ಯಾರ್ಥಿ ಮತ್ತು ನಾಗರಿಕರಲ್ಲಿ ಗೌರವಭಾವ ಮೂಡಬೇಕೆಂದು ಹಿಂದೂ ಜನಜಾಗೃತಿ ಸಮಿತಿಯು ೨೧ ವರ್ಷಗಳಿಂದ ‘ರಾಷ್ಟ್ರಧ್ವಜದ ಗೌರವ ಉಳಿಸಿರಿ ! ಎಂಬ ಚಳುವಳಿಯನ್ನು ನಡೆಸುತ್ತಿದೆ.