ಜಮ್ಮುಕಾಶ್ಮಿರ ಉಚ್ಚ ನ್ಯಾಯಾಲಯದ ತೀರ್ಪು
ಜಮ್ಮು – ಜಮ್ಮು ಕಾಶ್ಮೀರದ ಕಿಸ್ತವಾಡದಲ್ಲಿರುವ ಎಲ್ಲಾ ಮದರಸಾಗಳ ವ್ಯವಸ್ಥಾಪನೆಯನ್ನು ಕೇಂದ್ರಾಡಳಿತವು ನಡೆಸುವ ಕೇಂದ್ರ ಸರಕಾರದ ನಿರ್ಧಾರವನ್ನು ಜಮ್ಮು-ಕಾಶ್ಮೀರ ಮತ್ತು ಲಡಾಖ್ ಉಚ್ಚನ್ಯಾಯಾಲಯ ರದ್ದುಗೊಳಿಸಿದೆ. ನ್ಯಾಯಾಲಯವು, ಜೂನ್ 2023ರಲ್ಲಿ ಸರಕಾರವು ಹೊರಡಿಸಿದ ಅಧೀಕೃತ ಆದೇಶವನ್ನು ಎಲ್ಲಾ ಮದರಸಾಗಳಿಗೆ ಅನ್ವಯಿಸಲು ಸಾಧ್ಯವಿಲ್ಲ. ಜೂನ್ 2023 ರಲ್ಲಿ ಕಿಸ್ತವಾಡದಲ್ಲಿ “ಮೌಲಾನ ಆಲಿ ಮಿಯಾಂ ಎಜುಕೇಷನಲ್ ಟ್ರಸ್ಟ್, ಭಟಿಂಡಿ’ಯಿಂದ ನಡೆಸುತ್ತಿರುವ ಮದರಸಾಗಳ ನಿರ್ವಹಣೆಯನ್ನು ಹಸ್ತಾಂತರಿಸಲು ಸರಕಾರವು ಆದೇಶವನ್ನು ಹೊರಡಿಸಿತ್ತು. ಇದರ ಅಡಿಯಲ್ಲಿ ಹಲವು
ಮದರಸಾಗಳ ವಿರುದ್ಧ ಕ್ರಮ ಕೈಗೊಳ್ಳಲಾಯಿತು. ಹೀಗಾಗಿ ಇತರ ಮದರಸಾಗಳ ನಿರ್ದೇಶಕರು ಉಚ್ಚ ನ್ಯಾಯಾಲುಕ್ಕೆ ಅರ್ಜಿ ಸಲ್ಲಿಸಿ, ನಮ್ಮ ಮದರಸಾಗಳು ಮೇಲಿನ ಟ್ರಸ್ಟ್ ಗೆ ಬರುವುದಿಲ್ಲ ಎಂದು ಹೇಳಿದರು. ಈ ಕುರಿತು ಉಚ್ಚ ನ್ಯಾಯಾಲಯವು ಎಲ್ಲಾ ಮದರಸಾಗಳ ವಿರುದ್ಧ ಕೈಗೊಳ್ಳಲಾಗುತ್ತಿರುವ ಕ್ರಮವನ್ನು ರದ್ದು ಪಡಿಸುವಂತೆ ಉಚ್ಚ ನ್ಯಾಯಾಲಯ ಆದೇಶ ನೀಡಿದೆ. ಅರ್ಜಿದಾರರು, ಜಮ್ಮು ವಿನ ಬಟಿಂಡಿಯಲ್ಲಿರುವ “ಮೌಲಾನಾ ಆಲಿ ಮಿಯಾ ಎಜುಕೇಷನಲ್ ಟ್ರಸ್ಟ್” ವಿದೇಶಿ ಸಂಸ್ಥೆಗಳಿಂದ ಹಣ ಪಡೆಯುತ್ತಿದೆ ಮತ್ತು ಅದನ್ನು ದುರುಪಯೋಗ ಮಾಡಿದೆ. ಆದ್ದರಿಂದ ಸರಕಾರವು ಅದರ ಆಡಳಿತವನ್ನು ಸ್ವತಃ ಕೈಗೆತ್ತಿ ಕೊಂಡಿದೆ. ಆ ಟ್ರಸ್ಟಗೂ ನಮಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದೆ.