ರಾಜಸ್ಥಾನದಲ್ಲಿ ಕಾಂಗ್ರೆಸ್ ನಿಂದ ಅಮಾನತ್ತುಗೊಂಡಿದ್ದ ಸಚಿವ ರಾಜೇಂದ್ರ ಗೂಢ ಇವರಿಂದ ಸರಕಾರದ ಭ್ರಷ್ಟಾಚಾರದ ಮಾಹಿತಿ ಬಹಿರಂಗ !

ಜೈಪುರ (ರಾಜಸ್ಥಾನ) – ರಾಜಸ್ಥಾನದ ಕಾಂಗ್ರೆಸ್ ಸರಕಾರದಲ್ಲಿನ ಅಮಾನತುಗೊಂಡಿರುವ ಸಚಿವ ರಾಜೇಂದ್ರ ಗೂಢ ಇವರು ಆಗಸ್ಟ್ ೨ ರಂದು ಇಲ್ಲಿಯ ಪತ್ರಿಕಾಗೋಷ್ಠಿಯಲ್ಲಿ ಸರಕಾರ ನಡೆಸುತ್ತಿರುವ ಭ್ರಷ್ಟಾಚಾರದ ಮಾಹಿತಿ ನೀಡಿದರು. ಅವರು ತಮ್ಮ ಬಳಿ ಇದ್ದ ‘ಕೆಂಪು ಡಾಯರಿ’ಯ ಮೂರು ಪುಟಗಳು ಬಹಿರಂಗಪಡಿಸಿದರು. ಗೂಢ ಇವರು, ಈ ಪುಟಗಳಲ್ಲಿ ಮುಖ್ಯಮಂತ್ರಿ ಅಶೋಕ್ ಗೆಹಲೋತ್ ಇವರ ಆಪ್ತ ನಾಯಕ ಮತ್ತು ರಾಜಸ್ಥಾನ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ’ದ ಅಧ್ಯಕ್ಷ ಧರ್ಮೇಂದ್ರ ರಾಥೋಡ್, ಗೆಹಲೋತ್ ಇವರ ಪುತ್ರ ಮತ್ತು ‘ರಾಜಸ್ಥಾನ ಕ್ರಿಕೆಟ್ ಅಸೋಸಿಯೇಷನ್’ನ ಸಚಿವ ಭವಾನಿ ಸಾಮೋತ ಇವರಲ್ಲಿ ನಡೆದಿರುವ ಭ್ರಷ್ಟಾಚಾರದ ಉಲ್ಲೇಖವಿದೆ ಎಂದು ದಾವೆ ಮಾಡಿದ್ದಾರೆ.
ಈ ಸಮಯದಲ್ಲಿ ಗೂಢ ಇವರು, ನಾನು ಒಂದು ರಣನೀತಿಯ ಅಡಿಯಲ್ಲಿ ಹಂತಹಂತವಾಗಿ ಸರಕಾರ ನಡೆಸಿರುವ ಭ್ರಷ್ಟಾಚಾರ ಬಹಿರಂಗಪಡಿಸುತ್ತೇನೆ. ಸರಕಾರವು ನನಗೆ ಬೆದರಿಕೆ ಹಾಕುತ್ತಿದೆ. ನನ್ನನ್ನು ಏನಾದರೂ ಜೈಲಿಗೆ ಕಳುಹಿಸಿದರೆ, ಆಗ ಈ ಭ್ರಷ್ಟಾಚಾರದ ಮಾಹಿತಿ ನೀಡುವ ‘ಕೆಂಪು ಡಾಯರಿ’ಯಲ್ಲಿನ ಅಂಶಗಳು ನನ್ನ ನಂಬಿಕಸ್ಥ ವ್ಯಕ್ತಿ ನಿಯಮಿತವಾಗಿ ಬಹಿರಂಗ ಪಡೆಸುವನು. ಆದ್ದರಿಂದ ರಾಜಸ್ಥಾನ ಸರಕಾರ ನೆಲಕಚ್ಚುವುದು ಎಂದು ಹೇಳಿದ್ದಾರೆ.

ಸಂಪಾದಕೀಯ ನಿಲುವು

ಕಾಂಗ್ರೆಸ್ ಮತ್ತು ಭ್ರಷ್ಟಾಚಾರ ಈ ಸಮೀಕರಣ ಇರುವುದರಿಂದ ಎಲ್ಲಿ ಅವರ ಸರಕಾರ ಇರುತ್ತದೆ ಅಲ್ಲಿ ಭ್ರಷ್ಟಾಚಾರ ನಡೆದಿಲ್ಲ, ಹೀಗಾದರೇ ಮಾತ್ರ ವಾರ್ತೆ ಆಗುತ್ತದೆ !

ಜನರ ಹಣ ಕಬಳಿಸುವ ಭ್ರಷ್ಟಾಚಾರಿ ಕಾಂಗ್ರೆಸ್ಸಿಗೆ ರಾಜಸ್ಥಾನದ ಜನರು ಮರೆಯುವುದಿಲ್ಲ !