ನುಹ್ (ಹರಿಯಾಣ)ದಲ್ಲಿ ಹಿಂಸಾಚಾರ ಪ್ರಕರಣ
ನವ ದೆಹಲಿ – ಸರ್ವೋಚ್ಚ ನ್ಯಾಯಾಲವು ನುಹ್ (ಹರಿಯಾಣ) ಹಿಂಸಾಚಾರವನ್ನು ಖಂಡಿಸಲು ದೇಶಾದ್ಯಂತ ವಿಶ್ವ ಹಿಂದೂ ಪರಿಷತ್ ಆಯೋಜಿಸಿರುವ ಪ್ರತಿಭಟನೆಗಳನ್ನು ನಿಷೇಧಿಸುವಂತೆ ಕೋರಿ ಸಲ್ಲಿಸಲಾಗಿದ್ದ ಮನವಿಯನ್ನು ಸರ್ವೋಚ್ಚ ನ್ಯಾಯಾಲಯ ತಿರಸ್ಕರಿಸಿದೆ. ಈ ಸಂದರ್ಭದಲ್ಲಿ ಸರ್ವೋಚ್ಚ ನ್ಯಾಯಾಲಯವು ಉತ್ತರ ಪ್ರದೇಶ, ಹರಿಯಾಣ ಮತ್ತು ದೆಹಲಿ ಸರಕಾರಗಳಿಗೆ ನೋಟಿಸ್ ಜಾರಿ ಮಾಡಿ ಆಗಸ್ಟ್ 4 ರೊಳಗೆ ಪ್ರತಿಜ್ಞಾಪತ್ರ ಸಲ್ಲಿಸುವಂತೆ ಆದೇಶಿಸಿದೆ.
1. ಹಿರಿಯ ವಕೀಲ ಸಿ.ಯು. ಸಿಂಗ್ ಇವರು ಪ್ರತಿಭಟನೆಯ ವಿರುದ್ಧ ಅರ್ಜಿ ಸಲ್ಲಿಸಿದ್ದರು. ಅವರು ಅರ್ಜಿಯಲ್ಲಿ, ದೆಹಲಿಯ 23 ಸ್ಥಳಗಳಲ್ಲಿ ವಿಶ್ವ ಹಿಂದೂ ಪರಿಷತ್ತು ಮತ್ತು ಬಜರಂಗದಳ ಪ್ರತಿಭಟನೆ ನಡೆಸಲಿದ್ದು, ಈ ಸ್ಥಳದಲ್ಲಿ ಪ್ರಚೋದನಕಾರಿ ಭಾಷಣಗಳು ನಡೆಯುವ ಸಾಧ್ಯತೆ ಇದೆ. ಆದ್ದರಿಂದ ಈ ಅರ್ಜಿಯ ವಿಚಾರಣೆಯನ್ನು ಶೀಘ್ರ ನಡೆಸಿ ಪ್ರತಿಭಟನೆಯನ್ನು ನಿಷೇಧಿಸಬೇಕು ಎಂದು ಕೇಳಿದ್ದರು.
2. ಇದಕ್ಕೆ ನ್ಯಾಯಾಲಯವು, ಪ್ರತಿಭಟನೆಯನ್ನು ನಿಷೇಧಿಸಲು ನಿರಾಕರಿಸಿತು; ಆದರೆ ಈ ಪ್ರತಿಭಟನೆಗಳಲ್ಲಿ ಪ್ರಚೋದನಕಾರಿ ಹೇಳಿಕೆಗಳನ್ನು ನೀಡದಂತೆ ತಿಳಿಸಿ ಪ್ರತಿಭಟನೆಯನ್ನು ಚಿತ್ರೀಕರಣ ಮಾಡುವಂತೆ ಆದೇಶಿಸಿತು. ಹಾಗೆಯೇ ಆವಶ್ಯಕತೆಯನುಸಾರ ಹೆಚ್ಚುವರಿ ಬಂದೋಬಸ್ತ ಮಾಡಿಕೊಳ್ಳುವಂತೆ ಸರಕಾರಕ್ಕೆ ತಿಳಿಸಿದೆ.