ಜ್ಞಾನವಾಪಿ ಇದು ಐತಿಹಾಸಿಕ ತಪ್ಪು, ಇದನ್ನು ಮುಸಲ್ಮಾನರು ಒಪ್ಪಿಕೊಳ್ಳಬೇಕು !

  • ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರ ಸ್ಪಷ್ಟನೆ !

  • ಜ್ಞಾನವಾಪಿಯಲ್ಲಿ ತ್ರಿಶೂಲ ಹೇಗೆ ? ಹೀಗೂ ಕೂಡ ಪ್ರಶ್ನೆ ಕೇಳಿದರು !

ಲಕ್ಷ್ಮಣಪುರಿ (ಉತ್ತರ ಪ್ರದೇಶ) – ಜ್ಞಾನವಾಪಿಯಲ್ಲಿ ದೇವತೆಗಳ ಮೂರ್ತಿ ಇದೆ. ನಾವು ಈ ಮೂರ್ತಿಗಳನ್ನು ಇಟ್ಟಿರಲಿಲ್ಲ. ಜ್ಞಾನವಾಪಿಗೆ ‘ಮಸೀದಿ’ ಎಂದು ಹೇಳಿದರೆ ವಿವಾದ ಆಗುವುದು. ಇದು ಐತಿಹಾಸಿಕ ತಪ್ಪು ನಡೆದಿದೆ. ಯಾರಿಗೆ ಭಗವಂತನು ದೃಷ್ಟಿ ನೀಡಿದ್ದಾನೆ, ಅವರು ಮಸೀದಿಯಲ್ಲಿ ತ್ರಿಶೂಲ ಏಕೆ ಇದೆ ?’, ಅದನ್ನು ನೋಡಲಿ. ನಾವು ಅದನ್ನು ಇಟ್ಟಿಲ್ಲ, ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಇವರು ಎ. ಎನ್. ಐ. ಈ ವಾರ್ತಾ ವಾಹಿನಿಗೆ ನೀಡಿರುವ ಸಂದರ್ಶನದಲ್ಲಿ ಹೇಳಿದ್ದಾರೆ. ಯೋಗಿ ಆದಿತ್ಯನಾಥ ಇವರು ಮೊದಲೇ ಜ್ಞಾನವಾಪಿಯ ಬಗ್ಗೆ ನೇರ ಹೇಳಿಕೆ ನೀಡಿದ್ದಾರೆ.

ಮುಸಲ್ಮಾನರಿಂದ ಪ್ರಸ್ತಾವ ಬರಬೇಕು !

ಯೋಗಿ ಆದಿತ್ಯನಾಥ ಇವರು, ಜ್ಞಾನವಾಪಿಯಲ್ಲಿ ಜ್ಯೋತಿರ್ಲಿಂಗ ಇದೆ. ದೇವತೆಗಳ ಮೂರ್ತಿಗಳಿವೆ. ಸಂಪೂರ್ಣ ಗೋಡೆಗಳು ಕೂಗಿ ಹೇಳುತ್ತಿದೆ ? ಇದು ಒಂದು ಐತಿಹಾಸಿಕ ತಪ್ಪಾಗಿದೆ ಎಂದು ಮುಸಲ್ಮಾನ ಸಮಾಜದಿಂದ ಪ್ರಸ್ತಾವ ಬರಬೇಕು. ನಮಗೆ ಆ ತಪ್ಪಿಗಾಗಿ ಉಪಾಯ ಬೇಕು ಎಂದು ನನಗೆ ಅನಿಸುತ್ತದೆ.

ದೇಶವನ್ನು ಬಂಗಾಲ ಮಾಡುವುದಿದೆಯೇ ?

ಯೋಗಿ ಆದಿತ್ಯನಾಥ ಇವರು ಬಂಗಾಲದ ಪಂಚಾಯತ ಚುನಾವಣೆಯ ಸಮಯದಲ್ಲಿ ನಡೆದ ಹಿಂಸಾಚಾರದ ಬಗ್ಗೆ ಟೀಕಿಸಿದ್ದಾರೆ. ಅವರು, ನಾನು ಕಳೆದ ಆರೂವರೆ ವರ್ಷಗಳಿಂದ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿದ್ದೇನೆ. ೨೦೧೭ ರಿಂದ ಉತ್ತರಪ್ರದೇಶದಲ್ಲಿ ಒಂದೇ ಒಂದು ಗಲಬೆ ನಡೆದಿಲ್ಲ. ಯಾವ ಜನರು ದೊಡ್ಡ ದೊಡ್ಡ ನೀಡುತ್ತಾರೆ, ಅವರು ನೋಡಬಹುದು ಉತ್ತರ ಪ್ರದೇಶದಲ್ಲಿನ ಚುನಾವಣೆ ಹೇಗೆ ನಡೆಯುತ್ತದೆ. ಬಂಗಾಳದಲ್ಲಿ ಕೂಡ ಚುನಾವಣೆ ನಡೆದಿದೆ. ಅಲ್ಲಿ ಏನು ನಡೆದಿದೆ ಅದು ನೀವು ನೋಡಿದ್ದೀರಾ ? ದೇಶವನ್ನು ಬಂಗಾಲ ಮಾಡಬೇಕಿಲ್ಲ ! ಕೆಲವು ಜನರಿಗೆ ಅಧಿಕಾರ ಬಂದರೂ ಸಂಪೂರ್ಣ ವ್ಯವಸ್ಥೆ ಬಲವಂತವಾಗಿ ತನ್ನ ವಶದಲ್ಲಿ ಇಟ್ಟುಕೊಳ್ಳಬೇಕು ಎಂದಿರುತ್ತದೆ. ಬಂಗಾಲದಲ್ಲಿ ವಿರೋಧಿ ಪಕ್ಷದವರ ಹತರಾಗಿದ್ದಾರೆ. ಅದರ ಬಗ್ಗೆ ಯಾರೂ ಏನು ಮಾತನಾಡುವುದಿಲ್ಲ. ಯಾರು ಪ್ರಜಾಪ್ರಭುತ್ವವನ್ನು ಹತ್ಯೆ ಮಾಡುವ ಪ್ರಯತ್ನ ಮಾಡುತ್ತಾರೆ, ಆ ಜನರೇ ಪ್ರಜಾಪ್ರಭುತ್ವವನ್ನು ಹೊಗಳುತ್ತಾರೆ. ಕಾಶ್ಮೀರದಲ್ಲಿ ೧೯೯೦ ರಲ್ಲಿ ಏನೆಲ್ಲಾ ಘಟಿಸಿತು ಅದರ ಬಗ್ಗೆ ಎಲ್ಲರೂ ಮೌನವಾಗಿದ್ದಾರೆ. ಈ ಭೇದ ಭಾವ ಏಕೆ ?

ನಿಮ್ಮ ಧರ್ಮ ನಿಮ್ಮ ಮಸೀದಿಯವರೆಗೆ ಇರಲಿ ರಸ್ತೆಯ ಮೇಲೆ ಬೇಡ !

ಇನ್ನೊಂದು ಪ್ರಶ್ನೆಗೆ ಉತ್ತರ ನೀಡುವಾಗ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಇವರು, ಪಂಥ ಮತ ಮತ್ತು ಧರ್ಮ ಇದರ ಮೂಲಕ ಅಲ್ಲ ಅದು ಸಂವಿಧಾನದ ಮೂಲಕ ನಡೆಯುತ್ತದೆ. ನಿಮ್ಮ ಪಂಥ ನಿಮ್ಮ ಧರ್ಮ ನಿಮ್ಮ ಪದ್ಧತಿಗಳು ಇದ್ದರೆ, ನಿಮ್ಮ ಮನೆಯಲ್ಲಿ ಇರಲಿ. ನಿಮ್ಮ ಮಸೀದಿಯವರೆಗೆ ಇರಲಿ, ನಿಮ್ಮ ಪ್ರಾರ್ಥನಾ ಸ್ಥಳದವರೆಗೆ ಇರಲಿ. ರಸ್ತೆಯಲ್ಲಿ ಪ್ರದರ್ಶನ ಮಾಡುವ ಅವಶ್ಯಕತೆ ಇಲ್ಲ. ‘ನೀವು ಯಾರು’, ಇದನ್ನು ನೀವು ಇತರರ ಮೇಲೆ ಹೇರಲು ಸಾಧ್ಯವಿಲ್ಲ. ದೇಶ ಎಲ್ಲಕ್ಕಿಂತ ಮೊದಲು, ಯಾರಿಗೆ ದೇಶದಲ್ಲಿ ಇರಬೇಕಿದೆ, ಅವರಿಗೆ ತಮ್ಮ ಪಂಥ ಧರ್ಮ ಅಲ್ಲ ರಾಷ್ಟ್ರ ಎಲ್ಲಕ್ಕಿಂತ ಮೊದಲ ಸ್ಥಾನ ಇದನ್ನು ಒಪ್ಪಲೇಬೇಕು ಎಂದು ಹೇಳಿದರು.