ನೀವು ಭಾಜಪದಲ್ಲಿ ಸಚಿವರಾಗಿದ್ದಾಗ ಸಮೀಕ್ಷೆಗಾಗಿ ಸರಕಾರವನ್ನು ಏಕೆ ಆಗ್ರಹಿಸಲಿಲ್ಲ ? – ಮಾಯಾವತಿ

ಸಮಾಜವಾದಿ ಪಕ್ಷದ ನಾಯಕ ಸ್ವಾಮಿ ಪ್ರಸಾದ ಮೌರ್ಯ ಇವರ ‘ಹಿಂದೂಗಳ ದೇವಸ್ಥಾನಗಳು ಹಿಂದೆ ಬೌದ್ಧರ ಮಠಗಳಾಗಿದ್ದವು ಮತ್ತು ಅವುಗಳ ಸಮೀಕ್ಷೆಯಾಗಬೇಕು’, ಎಂಬ ಹೇಳಿಕೆಗೆ ಮಾಯಾವತಿಯವರಿಂದ ಮೌರ್ಯ ಇವರಿಗೆ ಪ್ರಶ್ನೆ !

ಲಕ್ಷ್ಮಣಪುರಿ (ಉತ್ತರಪ್ರದೇಶ) – ಸಮಾಜವಾದಿ ಪಕ್ಷದ ನಾಯಕ ಸ್ವಾಮಿ ಪ್ರಸಾದ ಮೌರ್ಯ ಇವರು ಕೆಲ ದಿನಗಳ ಹಿಂದೆ ‘ಬದ್ರೀನಾಥ ಈ ತೀರ್ಥಕ್ಷೇತ್ರ ಸೇರಿದಂತೆ ದೇಶದಲ್ಲಿನ ಹಿಂದೂಗಳ ಅನೇಕ ದೇವಸ್ಥಾನಗಳು ಹಿಂದೆ ಬೌದ್ಧರ ಮಠಗಳಾಗಿದ್ದವು. ಪುರಾತತ್ವ ಇಲಾಖೆಯಿಂದ ಇವೆಲ್ಲವುಗಳ ಸಮೀಕ್ಷೆಯಾಗಬೇಕು’ ಎಂದು ಬೇಡಿಕೆ ಮಾಡಿದ್ದರು. ಇದನ್ನು ಬಹುಜನ ಸಮಾಜ ಪಕ್ಷದ ಮುಖ್ಯಸ್ಥೆ ಮಾಯಾವತಿ ಇವರು ಟೀಕಿಸಿದ್ದಾರೆ. ಮಾಯಾವತಿ ಇವರು, ಮೌರ್ಯ ಇವರು ಕೆಲವು ವರ್ಷ ಭಾಜಪದ ಸರಕಾರದಲ್ಲಿ ಸಚಿವರಾಗಿದ್ದರು, ಆಗ ಅವರು ಸಮೀಕ್ಷೆಗಾಗಿ ಸರಕಾರವನ್ನು ಏಕೆ ಆಗ್ರಹಿಸಲಿಲ್ಲ ? ಚುನಾವಣೆಯ ಸಮಯದಲ್ಲಿ ಈ ರೀತಿಯ ಧಾರ್ಮಿಕ ವಿವಾದ ನಿರ್ಮಾಣ ಮಾಡುವುದು, ಇದು ಮೌರ್ಯ ಮತ್ತು ಸಮಾಜವಾದಿ ಪಕ್ಷ ಇವರ ರಾಜಕಾರಣವಾಗಿದೆ. ಬೌದ್ಧರು ಮತ್ತು ಮುಸ್ಲೀಮರು ಇದಕ್ಕೆ ಬಲಿ ಬೀಳುವುದಿಲ್ಲ ಎಂದಿದ್ದಾರೆ.