ಬರೇಲಿ (ಉತ್ತರ ಪ್ರದೇಶ) ಕಾವಡ ಯಾತ್ರಿಕರ ರಸ್ತೆ ತಡೆದ ಮುಸ್ಲಿಂ ಮಹಿಳೆಯರು; ಪೊಲೀಸರಿಂದ ಕಾವಡ ಯಾತ್ರಿಕರ ಮೇಲೆಯೇ ಲಾಠಿಚಾರ್ಜ್ !

ಲಾಠಿ ಚಾರ್ಜ್ ಪ್ರಕರಣದಲ್ಲಿ ಪೊಲೀಸ್ ವರಿಷ್ಠಾಧಿಕಾರಿ ಸ್ಥಳಾಂತರ, ಹಾಗೂ 2 ಅಧಿಕಾರಿಗಳ ಅಮಾನತು !

ಬರೇಲಿ (ಉತ್ತರ ಪ್ರದೇಶ) – ಜೋಗಿ ನವಾದಾದಲ್ಲಿ ಕಾವಡ ಯಾತ್ರೆ ಹೊರಡುವ ಮಾರ್ಗದಲ್ಲಿ ಮುಸ್ಲಿಂ ಮಹಿಳೆಯರು ಪ್ರತಿಭಟನೆ ನಡೆಸಿದರು. ಪೊಲೀಸರು ಅವರನ್ನು ಚದುರಿಸಲು ಪ್ರಯತ್ನಿಸಿದರೂ ಅವರು ಸರಿಯಲು ಸಿದ್ಧರಿರಲಿಲ್ಲ. ಕೊನೆಗೆ ಇಲ್ಲಿಂದ ಹಾದು ಹೋಗುತ್ತಿದ್ದ ಕಾವಡ ಯಾತ್ರಿಕರನ್ನು ಪೊಲೀಸರು ಲಾಠಿಚಾರ್ಜ ನಡೆಸಿ ಚದುರಿಸಿದಾಗ ಮಹಿಳೆಯರು ಪ್ರತಿಭಟನೆಯನ್ನು ಹಿಂಪಡೆದರು. ಸರಕಾರ ಲಾಠಿ ಚಾರ್ಜ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಅಧೀಕ್ಷಕ ಪ್ರಭಾಕರ್ ಚೌಧರಿ ಅವರನ್ನು ವರ್ಗಾವಣೆ ಮಾಡಿದೆ ಮತ್ತು ಪೊಲೀಸ್ ಠಾಣಾ ಮುಖ್ಯಸ್ಥ ಅಭಿಷೇಕ್ ಸಿಂಗ್ ಮತ್ತು ಸಬ್ ಇನ್‌ಸ್ಪೆಕ್ಟರ್ ಅಮಿತ್ ಕುಮಾರ್ ಅವರನ್ನು ಅಮಾನತುಗೊಳಿಸಿದೆ.

(ಸೌಜನ್ಯ – Aaj Tak)

ಪ್ರಸಾರಮಾಧ್ಯಮಗಳ ವರದಿಯ ಪ್ರಕಾರ, ಕಳೆದ ವಾರ ಇಲ್ಲಿನ ಗುಂಸಾಯಿ ಗೌಟಿಯಾ ಪ್ರದೇಶದಲ್ಲಿ ನಡೆದ ಕಾವಡ ಯಾತ್ರೆಯ ಮೇಲೆ ಮುಸ್ಲಿಮರು ಕಲ್ಲು ತೂರಾಟ ನಡೆಸಿದ್ದರು. ಆ ಸಂದರ್ಭದಲ್ಲಿ ಪೊಲೀಸರು ಲಾಠಿ ಚಾರ್ಜ್ ಮಾಡಿದ್ದರು. ಈಗ ಜುಲೈ 31 ರಂದು ಕಾವಡ ಯಾತ್ರಿಕರು ದೇವಸ್ಥಾನದಲ್ಲಿ ಅಭಿಷೇಕಕ್ಕಾಗಿ ಹೋಗುತ್ತಿದ್ದಾಗ, ಮುಸ್ಲಿಂ ಮಹಿಳೆಯರು ಈ ಮಾರ್ಗದಲ್ಲಿ ಧರಣಿ ಆಂದೋಲನವನ್ನು ಪ್ರಾರಂಭಿಸಿದ್ದರು. ಕಾವಡ ಯಾತ್ರಿಕರು ಇದೇ ಮಾರ್ಗದಿಂದ ಹೋಗುವುದಾಗಿ ಹೇಳಿದ್ದರಿಂದ ಉದ್ವಿಗ್ನತೆ ನಿರ್ಮಾಣವಾಗಿತ್ತು. ಹಾಗಾಗಿ ಕಾವಡ ಯಾತ್ರಿಕರ ಮೇಲೆ ಪೊಲೀಸರು ಲಾಠಿ ಚಾರ್ಜ್ ನಡೆಸಿದರು.

ಸಂಪಾದಕೀಯ ನಿಲುವು

ಇಂತಹ ಅಧಿಕಾರಿಗಳ ಮೇಲೆ ದೂರು ದಾಖಲಿಸಿ, ಅವರನ್ನು ಜೈಲಿಗೆ ಅಟ್ಟಿದರೆ ಹಿಂದೂಗಳ ಮೇಲೆ ದಬ್ಬಾಳಿಕೆ ಮಾಡುವ ಧೈರ್ಯ ಬೇರೆ ಪೊಲೀಸರಿಗೆ ಬರಲಾರದು !

ಪೋಲೀಸರ ಈ ಕ್ರಮ ‘ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಹಾಕಿದ ಹಾಗೆ’ ಎಂಬಂತಿದೆ. ಹಿಂದೂಗಳ ಮೇಲೆ ಇಂತಹ ಅನ್ಯಾಯ ಮಾಡಲು ಬರೇಲಿ ಪೊಲೀಸರು ಭಾರತದವರೋ ಅಥವಾ ಪಾಕಿಸ್ತಾನದವರೋ ?