ಇಂಫಾಲ್ (ಮಣಿಪುರ) – ಮಣಿಪುರ ರಾಜ್ಯದ ಸಮಗ್ರತೆಯನ್ನು ಕಾಪಾಡುವ ಉದ್ದೇಶದಿಂದ ಜುಲೈ 29 ರಂದು ರಾಜಧಾನಿ ಇಂಫಾಲ್‌ನಲ್ಲಿ ಲಕ್ಷಾಂತರ ಮಣಿಪುರಿಗಳು ಮೆರವಣಿಗೆ ನಡೆಸಿದರು. ಇದರಲ್ಲಿ ಹಿಂದೂ ಮೈತೇಯಿ, ಮೈತೇಯಿ ಪಾಂಗಾಲ್, ನಾಗಾ ಹಾಗೂ ಸನಮಾಹಿ ಪಂಗಡದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಕ್ರೈಸ್ತರು ಮತ್ತು ಮುಸ್ಲಿಮರು ಕೂಡ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು ಎಂದು ‘ಮೈತೆಯಿ ಹೆರಿಟೇಜ್ ಸೊಸೈಟಿ’ಯ ಅಧಿಕೃತ ಟ್ವಿಟರ್ ಖಾತೆ ತಿಳಿಸಿದೆ. ಈ ಟ್ವೀಟ್ ನಲ್ಲಿ, ಮಣಿಪುರವನ್ನು ಒಡೆಯಲು ಚೀನಾ-ಕುಕಿ ಭಯೋತ್ಪಾದಕರು, ಪ್ರತ್ಯೇಕತಾವಾದಿಗಳು, ಅಕ್ರಮ ವಲಸಿಗರು ಮತ್ತು ಮಾದಕ ವಸ್ತು ಕಳ್ಳಸಾಗಣೆ ಭಯೋತ್ಪಾದಕರ ಪ್ರಯತ್ನಗಳನ್ನು ಮಣಿಪುರದ ಜನರು ಎಂದಿಗೂ ಯಶಸ್ವಿಯಾಗಲು ಬಿಡುವುದಿಲ್ಲ ಎಂದು ಹೇಳಲಾಗಿದೆ. ನಾವು ಮಣಿಪುರದ ಶಾಂತಿಯುತ ಕುಕಿ ಜನರನ್ನು, ಅವರು ಕುಕಿ ಭಯೋತ್ಪಾದಕರ ಎಷ್ಟೇ ಭಯವಿದ್ದರೂ ತಮ್ಮ ಪ್ರತ್ಯೇಕತಾವಾದಿ ನೀತಿಗಳನ್ನು ತ್ಯಜಿಸುವಂತೆ ನಾವು ಮನವಿ ಮಾಡುತ್ತೇವೆ ಎಂದು ಹೇಳಲಾಗಿದೆ.
Lakhs of Manipuris – Meiteis, Nagas, Meitei Pangals, Hindu, Sanamahi followers, Christians, Muslims among others, hit the street in Imphal VOWING TO PROTECT THE TERRITORY INTEGRITY OF MANIPUR.
Manipur will never succumb to the Chin Kuki Militants, Separatists, illegal immigrants… pic.twitter.com/9KT5RzqkIV
— Meitei Heritage Society (@meiteiheritage) July 29, 2023